ತಿರುವನಂತಪುರಂ: ನಿನ್ನೆ ಕಾಸರಗೋಡಿನಲ್ಲಿ ಘಟನೆಯೊಂದು ನಡೆದಿತ್ತು. ಇದು ಆನ್ಲೈನ್ ಜಮಾನವಾಗಿರುವ ಕಾತಣ, ಆನ್ಲೈನ್ ನಲ್ಲಿ ಬಿರಿಯಾನಿ ತರಿಸಿಕೊಂಡು ತಿಂದ ಯುವತಿ ಸಾವನ್ನಪ್ಪಿದ್ದಳು. ಇದೀಗ ಆ ಘಟನೆ ಸಂಬಂಧ ಕೇರಳದಲ್ಲಿ ಹೊಟೇಲ್ ಗಳು ಬಂದ್ ಆಗಿವೆ. ಅದು ಒಂದಲ್ಲ ಎರಡಲ್ಲ ಸುಮಾರು 547 ಕ್ಕೂ ಹೆಚ್ಚು ಹೊಟೇಲ್ ಗಳು ಬಂದ್ ಆಗಿವೆ.

ವಿಷಪೂರಿತ ಆಹಾರ ಸೇವಿಸಿ ಒಂದೇ ವಾರದಲ್ಲಿ ಇಬ್ಬರು ಸಾವನ್ನಪ್ಪಿರುವ ಹಿನ್ನೆಲೆ, ಆಹಾರ ಸುರಕ್ಷತಾ ಅಧಿಕಾರಿಗಳು, ಹೊಟೇಲ್ ಹಾಗೂ ರೆಸ್ಟೊರೆಂಟ್ ಗಳ ಮೇಲೆ ದಾಳಿ ನಡೆಸಿವೆ. ರೋಮಾನಿಸಾ ರೆಸ್ಟೊರೆಂಟ್ ನ ಬಿರಿಯಾನಿ ತಿಂದಿದ್ದ ಅಂಜುಶ್ರೀ ಪಾರ್ವತಿ ಎಂಬುವವರು ಸಾವನ್ನಪ್ಪಿದ್ದರು. ಜೊತೆಗೆ ಕಿಟ್ಟಾಯಂನ ವಿಷಪೂರಿತ ಆಹಾರ ಸೇವಿಸಿದ್ದ ವೃತ್ತಿಯಲ್ಲಿ ನರ್ಸ್ ಆಗಿದ್ದ ರಶ್ಮಿ ಎನ್ನುವವರು ಕೂಡ ಸಾವನ್ನಪ್ಪಿದ್ದರು. ಈ ಹಿನ್ನೆಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಅಧಿಕಾರಿಗಳ ದಾಳಿ ವೇಳೆ ಸ್ವಚ್ಚತೆ ಇಲ್ಲದೆ ಇರುವುದು ಕಂಡು ಬಂದಿದೆ. ಆಹಾರದಲ್ಲಿ ಜಿರಲೆಗಳು ಪತ್ತೆಯಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯ ದಾಖಲೆಗಳು ಕೂಡ ಮಾಲೀಕರ ಬಳಿ ಇರಲಿಲ್ಲ. ಹೀಗಾಗಿ ಹೊಟೇಲ್, ರೆಸ್ಟೊರೆಂಟ್ ಗಳನ್ನಹ ಬಂದ್ ಮಾಡಿಸಿದ್ದಾರೆ. ಇನ್ನು ಅಂಜು ಪಾರ್ವತಿ ಸಾವಿಗೆ ಸಂಬಂಧಿಸಿದಂತೆ ಹೊಟೇಲ್ ಮಾಲೀಕರು ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

