ಬೆಂಗಳೂರು: ವಿಧಾನಸಭಾ ಚುನಾವಣೆಗೆ ಜನರನ್ನು ತನ್ನ ಪಕ್ಷಕ್ಕೆ ಸೆಳೆಯಲು ಪಕ್ಷಗಳು ಹಲವು ಯೋಜನೆಗಳ ಭರವಸೆಗಳನ್ನು ನೀಡುತ್ತಾರೆ. ಜನರಿಗೆ ಅಗತ್ಯವಿರುವ ಯೋಜನೆಗಳ ಆಸೆ ತೋರಿಸಿ, ಗೆದ್ದಾಗ ಈಡೇರಿಸುವುದು ಎಷ್ಟೋ ಏನೋ. ಆದರೆ ಜನ ಕೂಡ ಒಂದು ಕ್ಷಣ ಆ ಭರವಸೆಗಳತ್ತ ಗಮನ ಹರಿಸುತ್ತಾರೆ. ಇದೀಗ ಜೆಡಿಎಸ್ ಪಕ್ಷ ಕೂಡ ವಿದ್ಯಾರ್ಥಿಗಳಿಗೆ ಹೊಸದೊಂದು ಭರವಸೆ ನೀಡಿದ್ದಾರೆ.
ಇಂದು ಪಂಚರತ್ನ ಯಾತ್ರೆ ಮುಂದುವರೆದಿದೆ. ಕೆಂಚೇನಹಳ್ಳಿಯಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ಈ ಬಾರಿ ಕರ್ನಾಟಕದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ, ವಿದ್ಯಾರ್ಥಿನಿಯರಿಗೆ ಎಲೆಕ್ಟ್ರಿಕ್ ಮೊಪೆಡೋ ದ್ವಿಚಕ್ರ ವಾಹನ ನೀಡುವುದಾಗಿ ಭರವಸೆ ನೀಡಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಏಕಾಂಗಿಯಾಗಿ ಹೋರಾಟ ಮಾಡುತ್ತಿದ್ದೇನೆ. ಪಂಚರತ್ನ ಕೆಲಸಗಳನ್ನು ಜಾರಿಗೆ ತರಲು ಪ್ರಾಮಾಣಿಕ ಕೆಲಸ ಮಾಡುತ್ತೇನೆ. ಎಲೆಕ್ಷನ್ ಇದ್ದಿದ್ದರಿಂದ ಕೆಲಸ ತಡವಾಗಿದೆ ಎಂದಿದ್ದಾರೆ.