ಮೂಡಾ ಕೇಸ್ : ಮಾಜಿ ಆಯುಕ್ತರ ತನಿಖೆಗೆ ಸರ್ಕಾರ ಅಸ್ತು

suddionenews
1 Min Read

 

ಮೈಸೂರು: ಮೂಡಾ ಕೇಸ್ ರಾಜ್ಯ ರಾಜಕಾರಣದಲ್ಲಿ ಮಾತ್ರವಲ್ಲ ಎಲ್ಲೆಡೆ ಸಾಕಷ್ಟು ಸದ್ದು ಮಾಡಿದ್ದಂತ ಕೇಸ್ ಇದಾಗಿತ್ತು. ಇದೀಗ ಅಕ್ರಮಸೈಟ್ ಹಂಚಿಕರ ಆರೋಪ ಎದುರಿಸುತ್ತಿರುವ ಮೂಡಾದ ಮಾಜಿ ಆಯುಕ್ತ ದಿನೇಶ್ ಕುಮಾರ್ ವಿರುದ್ಧ ತನಿಖೆಗೆ ಸರ್ಕಾರ ಅನುಮತಿ ನೀಡಿದೆ. ಮೂಡಾದ ಮಾಜಿ ಅಧ್ಯಕ್ಷ ಹೆಚ್.ವಿ.ರಾಜೀವ್ ಮತ್ತು ದಿನೇಶ್ ವಿರುದ್ಧ ತನಿಖೆ ನಡೆಸಲು ಅನುಮತಿ ನೀಡುವಂತೆ ಲೋಕಾಯುಜ್ತ ಪೊಲೀಸರು ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿದ್ದರು.

ದಿನೇಶ್ ವಿರುದ್ಧ ಮಾತ್ರ ತನಿಖೆಗೆ ಸರ್ಕಾರ ಅನುಮತಿ ನೀಡಿದೆ. ಈಗಾಗಲೇ ಇಡಿ ಅಧಿಕಾರಿಗಳು ದಿನೇಶ್ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಮೂಡಾ ಹಗರಣ ಕೇಸ್ ತನಿಖೆ ತೆವಾಗಿದ್ದಕ್ಕೆ ಕೋರ್ಟ್ ಅಸಮಾ್ದಾನ ಹೊರ ಹಾಕಿದೆ. 6 ತಿಂಗಳಿನಿಂದ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡಿಲ್ಲ. ಪ್ರಾಸಿಕ್ಯೂಷನ್ ಅನುಮತಿ ಅಂತ ತಡವಾಗ್ತಿದೆ. ಇದೆಲ್ಲದರ ನಡುವೆ ಲೋಕಾಯುಕ್ತ ಪೊಲೀಸರ ನಡೆಯಿಂದ ಸಮಾಜದಲ್ಲಿ ನಾನು ಅವಮಾನ ಎದುರಿಸುತ್ತಿದ್ದೇನೆ. ಮಾನಸಿಕವಾಗಿ ಕುಗ್ಗಿದ್ದೇನೆ. ಇದರಿಂದ ಬೇಗ ತನಿಖೆಗೆ ಆದೇಶಿಸಿ ಎಂದು ಸ್ನೇಹಮಯಿ ಕೃಷ್ಣ ಅವರು ಕೋರ್ಟ್‍ಗೆ ಮನವಿ ಸಲ್ಲಿಸಿದ್ದಾರೆ. ಈ ವೇಳೆ, ಹೆಚ್.ವಿ ರಾಜೀವ್ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಬೇಕಿಲ್ಲ ಎಂದು ಸ್ನೇಹಮಯಿ ಕೃಷ್ಣ ಪರ ವಕೀಲರು ವಾದಿಸಿದ್ದಾರೆ. ವಾದ ಆಲಿಸಿದ ನ್ಯಾಯಾಲಯ ವಿಚಾರಣೆಯನ್ನು ಸೆ.29ಕ್ಕೆ ಮುಂದೂಡಿದೆ.

ಸಿಎಂ ಸಿದ್ದರಾಮಯ್ಯ ಖುರ್ಚಿಗೆ ಕಂಟಕ ತಂದಿದ್ದ ಮೂಡ ಕೇಸ್ ಇನ್ನು ಮುಗಿದಂತೆ ಕಂಡಿಲ್ಲ. ಈಗ ಸರ್ಕಾರ ತನಿಖೆಗೆ ಅನುಮತಿ ಕೊಟ್ಟಿದ್ದು, ಮುಂದೆ ತನಿಖೆಯಲ್ಲಿ ಏನೆಲ್ಲಾ ಸತ್ಯಗಳು ಹೊರ ಬರುತ್ತೆ ಎಂಬುದನ್ನ ನೋಡಬೇಕಿದೆ.

Share This Article