ಮೈಸೂರು: ಮೂಡಾ ಕೇಸ್ ಹಗರಕ್ಕೆ ಸಂಬಂಧಿಸಿದಂತೆ ಇಡಿ ತನಿಖೆಯನ್ನ ಚುರುಕುಗೊಳಿಸಿದೆ. ಅದರಲ್ಲೂ ಸಿಎಂ ಸಿದ್ದರಾಮಯ್ಯ ಅವರ ಬುಡಕ್ಕೂ ಬಂದಿದ್ದ ಕೇಸ್, ಹಾಗೇ ಸರಾಗವಾಗಿ ಸಾಗಿತ್ತು. ಈ ಕೇಸ್ ಗೆ ಸಂಬಂಧಿಸಿದಂತೆ ಈಗಾಗಲೇ ಮೂಡಾ ಮಾಜಿ ಆಯುಕ್ತ ಜಿಟಿ ದಿನೇಶ್ ಅವರ ಬಂಧನವಾಗಿದೆ. ಅವರಿಗೆ ಸಂಬಂಧಿಸಿದಂತೆ ಎಲ್ಲೆಡೆ ತಪಾಸಣೆ ಕೂಡ ನಡೆಯುತ್ತಿದೆ. ಇದೀಗ ಮಹತ್ವದ ಬೆಳವಣುಗೆಯೊಂದು ಬೆಳಕಿಗೆ ಬಂದಿದೆ.
ಮೂಡಾ ಕೇಸ್ ಗೆ ಸಂಬಂಧಿಸಿದಂತೆ ಹಲವರ ಆಸ್ತಿಗಳನ್ನ ಮುಟ್ಟುಗೋಲು ಹಾಕಿಕೊಂಡಿರುವ ಇಡಿ, ಹಲವರ ಬ್ಯಾಂಕ್ ಅಕೌಂಟ್ ಅನ್ನು ಸೀಜ್ ಮಾಡಿದೆ. ಈಗ ಮತ್ತಷ್ಟು ತನಿಖೆಯನ್ನು ಚುರುಕುಗೊಳಿಸಿದ್ದು, ದಿನೇಶ್ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. 52 ಕೋಟಿ ಆಸ್ತಿಯನ್ನು ದಾಳಿ ವೇಳೆ ಪತ್ತೆ ಮಾಡಲಾಗಿದೆ. ಬೇನಾಮಿ ಆಸ್ತಿಯನ್ನ ಮಾಡಿದ್ದಾರೆ ಎಂಬುದು ಈ ದಾಳಿಯಿಂದ ಇಡಿ ಅಧಿಕಾರಿಗಳಿಗೆ ತಿಳಿದು ಬಂದಿದೆ.
ಅದರಲ್ಲೂ ಶಾಕಿಂಗ್ ವಿಚಾರ ಅಂದ್ರೆ ಮನೆ ಕೆಲಸದವರ ಹೆಸರಲ್ಲೂ ಆಸ್ತಿ ಮಾಡಲಾಗಿದೆ. ಸಂಬಂಧಿಕರು ಸೇರಿದಂತೆ ಹಲವರ ಹೆಸರಲ್ಲಿ ಅಂದ್ರೆ ಜಿಟಿ ದಿನೇಶ್ ಅವರ ಜೊತೆಗೆ ಯಾರೆಲ್ಲಾ ಆತ್ಮೀಯವಾಗಿ ಇದ್ದರೋ ಅವರ ಹೆಸರಲ್ಲೆಲ್ಲಾ ಆಸ್ತಿಗಳನ್ನು ಮಾಡಿಟ್ಟಿದ್ದಾರೆ. ಅಲ್ಲಲ್ಲಿ ಭೂವ್ಯವಹಾರವೂ ನಡೆದಿದೆ. ಅವರ ಮನೆ ಕೆಲಸದವರ ಬ್ಯಾಂಕ್ ಅಕೌಂಟ್ ನಲ್ಲಿಯೆ 3 ಕೋಟಿ 4 ಕೋಟಿ ಹಣ ಪತ್ತೆಯಾಗಿದೆ. ಅವರ ಸಂಬಳ ಏನಿಲ್ಲಾ ಅಂದ್ರು 15 ಸಾವಿರ ಇದ್ದರು, ಇಷ್ಟೊಂದು ಹಣ ಹೇಗೆ ಬಂತು ಅನ್ನೋ ತನಿಖೆ ಶುರುವಾಗಿದೆ. 12 ಸೈಟ್.. 15 ಕೋಟಿ ಹಣವನ್ನ ಇಡಿ ವಶಕ್ಕೆ ಪಡೆದು ತನಿಖೆ ನಡೆಸುತ್ತಿದೆ.
