ಬೆಂಗಳೂರು: ಆಡಳಿತಾರೂಢ ಬಿಜೆಪಿ ಪಕ್ಷವನ್ನು ತರಾಟೆಗೆ ತೆಗೆದುಕೊಳ್ಳಲು ವಿಪಕ್ಷ ಕಾಂಗ್ರೆಸ್ ಗೆ ಸಾಕಷ್ಟು ವಿಚಾರಗಳು ಸಿದ್ಧವಾಗಿದೆ. ಸದ್ಯ ಮಳೆಯಿಂದಾಗ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲು ಸಾಕಷ್ಟು ಸಮಸ್ಯೆ ಎದುರಾಗಿದೆ. ಹೀಗಾಗಿ ನಾಳೆಯಿಂದ ಶುರುವಾಗುವ ಮಳೆಗಾಲ ಅಧಿವೇಶದಲ್ಲಿ ಬಿಜೆಪಿಯನ್ನು ತರಾಟೆ ತೆಗೆದುಕೊಳ್ಳಲು ಕಾಂಗ್ರೆಸ್ ಯೋಜಿಸಿದೆ.
ಅಧಿವೇಶನ ನಡೆಯುವಾಗ ವಿಪಕ್ಷ ಸ್ಥಾನದಲ್ಲಿರುವವರು ಆಡಳಿತ ಪಕ್ಷದ ಸಮಸ್ಯೆಗಳನ್ನು ಎತ್ತಿ ತೋರಿಸುವುದು ಸಹಜ. ಇದೀಗ ವಿಪಕ್ಷಕ್ಕೂ ತಿರುಗೇಟು ನೀಡಲು ಬಿಜೆಪಿ ಸಕಲ ಸಿದ್ಧತೆ ನಡೆಸಿದೆ. ಸಿದ್ದರಾಮಯ್ಯ ಅವರ ಹಳೇ ಕೇಸ್ ಮೂಲಕ ತಿರುಗೇಟು ನೀಡಲು ಸಜ್ಜಾಗಿದೆ. 2015ರಲ್ಲಿ ಅರ್ಕಾವತಿ ಬಡಾವಣೆಯ 541 ಎಕರೆ ರೀಡು ಡಿನೋಟಿಫೈ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಆಗಿನ ಕಾಂಗ್ರೆಸ್ ಸರ್ಕಾರವೇ ನ್ಯಾ.ಕೆಂಪಣ್ಣ ಆಯೋಗ ರಚಿಸಿತ್ತು.
ಈ ಆಯೋಗ 2017ರ ಆಗಸ್ಟ್ 23ರಂದು ಸರ್ಕಾರಕ್ಕೆ 4 ಸಂಪುಟಗಳಲ್ಲಿ ಸುಮಾರು 9 ಸಾವಿರ ಪುಟಗಳ ಅಂತಿಮ ವರದಿ ಸಲ್ಲಿಸಿದೆ. ಆದರೆ 5 ವರ್ಷವಾದ್ರೂ ಶಾಸನ ಸಭೆಯಲ್ಲಿ ಇಲ್ಲಿ ತನಕ ನ್ಯಾ.ಕೆಂಪಣ್ಣ ಆಯೋಗದ ವರದಿ ಮಂಡನೆ ಆಗಿಲ್ಲ. ಆದರೆ ಇದೀಗ ಹೈಕಮಾಂಡ್ ವರದಿ ಮಂಡನೆಗೆ ಸೂಚಿಸಿದೆ. ಇದೇ ವಿಚಾರ ಅಧಿವೇಶನದಲ್ಲಿ ಬಿಜೆಪಿ ವರ್ಸಸ್ ಕಾಂಗ್ರೆಸ್ ಫೈಟ್ ಗೆ ಕಾರಣವಾಗಬಹುದು ಎನ್ನಲಾಗಿದೆ. ಅಧಿವೇಶನದ ಮೊದಲ ದಿನವೇ ಫೈಟ್ ಶುರುವಾಗಲಿದೆ.