ಚಿತ್ರದುರ್ಗ. ಜೂನ್18: ಜಿಲ್ಲೆಯಲ್ಲಿ 2026-27ನೇ ಸಾಲಿನ ಮುಂಗಾರು ಹಂಗಾಮಿಗೆ ‘ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಜಾರಿಗೊಳಿಸಿ ಅಧಿಸೂಚಿಸಲಾಗಿದ್ದು, ನೋಂದಣಿ ಆರಂಭವಾಗಿದೆ.
ಚಿತ್ರದುರ್ಗ ಜಿಲ್ಲೆಗೆ ಇಫ್ಕೋ ಟೋಕಿಯೋ ಜನರಲ್ ಇನ್ಸೂರೆನ್ಸ್ ಕಂಪನಿಯು ಅನುಷ್ಠಾನ ಸಂಸ್ಥೆಯಾಗಿದ್ದು, ವಿಮೆ ನೋಂದಣಿಗೆ ರೈತರು ಕಡ್ಡಾಯವಾಗಿ ಪ್ರೂಟ್ಸ್ ಐಡಿ ಹೊಂದಿರಬೇಕಿರುವುದು ಅತ್ಯಗತ್ಯವಾಗಿದೆ.
ವಿವಿಧ ಬೆಳೆಗಳಿಗೆ ನಿಗದಿಪಡಿಸಲಾದ ವಿಮಾ ಮೊತ್ತ ಹಾಗೂ ರೈತರು ಪಾವತಿಸಬೇಕಾದ ಕಂತು ಮತ್ತು ಕೊನೆಯ ದಿನಾಂಕಗಳ ವಿವರ ಇಂತಿದೆ.
ಹೆಸರು (ಮಳೆ ಆಶ್ರಿತ) ಬೆಳೆಗೆ ವಿಮಾ ಮೊತ್ತ ರೂ. 39,700, ರೈತರ ಕಂತು ರೂ. 794 ಆಗಿದೆ.
ಈರುಳ್ಳಿ (ನೀರಾವರಿ) ವಿಮಾ ಮೊತ್ತ ರೂ. 93,900, ರೈತರ ಕಂತು ರೂ. 4,695 ಆಗಿದ್ದು, ನೋಂದಣಿಗೆ 2026ರ ಜುಲೈ 15 ಕೊನೆಯ ದಿನವಾಗಿದೆ.

2026ರ ಜುಲೈ 31 ರೊಳಗೆ ನೋಂದಾಯಿಸಬೇಕಾದ ಬೆಳೆಗಳ ವಿವರ ಇಂತಿದೆ.
ಮುಸುಕಿನ ಜೋಳ ನೀರಾವರಿಗೆ ರೂ. 76,200 (ಕಂತು ರೂ. 1,524) ಹಾಗೂ ಮಳೆ ಆಶ್ರಿತಕ್ಕೆ ರೂ. 67,500 (ಕಂತು ರೂ. 1,350), ಜೋಳ ನೀರಾವರಿಗೆ ರೂ. 52,600 (ಕಂತು ರೂ. 1,052) ಹಾಗೂ ಮಳೆ ಆಶ್ರಿತಕ್ಕೆ ರೂ. 44,400 (ಕಂತು ರೂ. 888), ಸಜ್ಜೆ (ಮಳೆ ಆಶ್ರಿತ) ರೂ. 34,800 (ಕಂತು ರೂ. 696), ಸಾವೆ (ಮಳೆ ಆಶ್ರಿತ) ರೂ. 30,100 (ಕಂತು ರೂ. 602), ತೊಗರಿ (ಮಳೆ ಆಶ್ರಿತ) ರೂ. 57,600 (ಕಂತು ರೂ. 1,152), ಹುರುಳಿ (ಮಳೆ ಆಶ್ರಿತ) ರೂ. 23,500 (ಕಂತು ರೂ. 470), ಸೂರ್ಯಕಾಂತಿ (ಮಳೆ ಆಶ್ರಿತ) ರೂ. 48,200 (ಕಂತು ರೂ. 964), ಎಳ್ಳು (ಮಳೆ ಆಶ್ರಿತ) ರೂ. 31,900 (ಕಂತು ರೂ. 638), ಇದೇ ಅವಧಿಗೆ ನೆಲಗಡಲೆ/ಶೇಂಗಾ ನೀರಾವರಿಗೆ ರೂ. 77,800 (ಕಂತು ರೂ. 1,556) ಹಾಗೂ ಮಳೆ ಆಶ್ರಿತಕ್ಕೆ ರೂ. 65,400 (ಕಂತು ರೂ. 1,308), ಹತ್ತಿ ನೀರಾವರಿಗೆ ರೂ. 86,400 (ಕಂತು ರೂ. 4,320) ಹಾಗೂ ಮಳೆ ಆಶ್ರಿತಕ್ಕೆ ರೂ. 59,700 (ಕಂತು ರೂ. 2,985), ಟೊಮ್ಯಾಟೊ ರೂ. 1,69,800 (ಕಂತು ರೂ. 8,490), ಈರುಳ್ಳಿ (ಮಳೆ ಆಶ್ರಿತ) ರೂ. 85,600 (ಕಂತು ರೂ. 4,280) ಮತ್ತು ಕೆಂಪು ಮೆಣಸಿನಕಾಯಿ (ಮಳೆ ಆಶ್ರಿತ) ಬೆಳೆಗೆ ರೂ. 90,800 ವಿಮಾ ಮೊತ್ತವಿದ್ದು, ರೈತರ ಕಂತು ರೂ. 4,540 ಆಗಿರುತ್ತದೆ.
2026ರ ಆಗಸ್ಟ್ 14 ರೊಳಗೆ ನೋಂದಾಯಿಸಬೇಕಾದ ಬೆಳೆಗಳ ವಿವರ ಇಂತಿದೆ. ಭತ್ತ (ನೀರಾವರಿ) ವಿಮಾ ಮೊತ್ತ ರೂ. 1,08,600 (ಕಂತು ರೂ. 2,172), ರಾಗಿ ನೀರಾವರಿಗೆ ರೂ. 58,300 (ಕಂತು ರೂ. 1,166) ಹಾಗೂ ಮಳೆ ಆಶ್ರಿತಕ್ಕೆ ರೂ. 49,900 (ಕಂತು ರೂ. 998) ಮತ್ತು ನವಣೆ (ಮಳೆ ಆಶ್ರಿತ) ಬೆಳೆಗೆ ವಿಮಾ ಮೊತ್ತ ರೂ. 32,200 ಆಗಿದ್ದು, ರೈತರ ಕಂತು ರೂ. 644 ಆಗಿದೆ.
ಬ್ಯಾಂಕುಗಳಲ್ಲಿ ಬೆಳೆ ಸಾಲ ಮಂಜೂರಾದ ಎಲ್ಲಾ ರೈತರನ್ನು ಕಡ್ಡಾಯವಾಗಿ ಈ ಯೋಜನೆಯಡಿ ಒಳಪಡಿಸಲಾಗುತ್ತದೆ. ಒಂದು ವೇಳೆ ಸಾಲ ಪಡೆದ ರೈತರು ವಿಮೆ ಬೇಡವೆಂದು ಇಚ್ಛಿಸಿದಲ್ಲಿ, ವಿಮೆ ನೋಂದಣಿಯ ಅಂತಿಮ ದಿನಾಂಕಕ್ಕಿಂತ ಕನಿಷ್ಠ 7 ದಿನ ಮುಂಚಿತವಾಗಿ ಸಂಬಂಧಪಟ್ಟ ಬ್ಯಾಂಕ್ ವ್ಯವಸ್ಥಾಪಕರಿಗೆ ಲಿಖಿತವಾಗಿ ಮುಚ್ಚಳಿಕೆ ಪತ್ರ ನೀಡಬೇಕು. ಆರ್ಥಿಕ ಸಂಸ್ಥೆಗಳು, ಬ್ಯಾಂಕುಗಳು ಮತ್ತು ಸಾರ್ವಜನಿಕ ಸೇವಾ ಕೇಂದ್ರಗಳು ರೈತರಿಂದ ಪಡೆದ ವಿಮಾ ಕಂತನ್ನು ನಿಗದಿತ ಸಮಯದೊಳಗೆ ವಿಮಾ ಸಂಸ್ಥೆಗೆ ವರ್ಗಾಯಿಸಬೇಕು; ಇವರ ನಿರ್ಲಕ್ಷ್ಯದಿಂದ ಯಾವುದೇ ಲೋಪದೋಷಗಳಾಗಿ ಪರಿಹಾರ ವಿಳಂಬವಾದರೆ ಆಯಾ ಸಂಸ್ಥೆಗಳೇ ನೇರ ಹೊಣೆಗಾರರಾಗುತ್ತವೆ.
ಕೊನೆಯ ದಿನಗಳಲ್ಲಿ ಸಾರ್ವಜನಿಕ ಸೇವಾ ಕೇಂದ್ರಗಳಲ್ಲಿ ಜನದಟ್ಟಣೆ ಹೆಚ್ಚಾಗುವುದರಿಂದ ನೋಂದಣಿಯಲ್ಲಿ ತಪ್ಪುಗಳು ಉಂಟಾಗಿ ವಿಮೆ ಪರಿಹಾರ ಕೈತಪ್ಪುವ ಸಾಧ್ಯತೆ ಇರುತ್ತದೆ. ಹೀಗಾಗಿ ರೈತರು ಸಕಾಲದಲ್ಲಿ ನೋಂದಣಿ ಮಾಡಿಕೊಳ್ಳಬೇಕು. ರೈತರು ತಮ್ಮ ಹೋಬಳಿ ಮಟ್ಟದ ಬೆಳೆಗಳ ವಿವರ ತಿಳಿಯಲು ಹತ್ತಿರದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳನ್ನು ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.














