ಮಕ್ಕಳಿಗೆ ಮಂಗನ ಬಾವು ಕಾಯಿಲೆಯ ಕಾಟ: ಪೋಷಕರೇ ಇರಲಿ ಎಚ್ಚರ..!

1 Min Read

 

ಬೆಂಗಳೂರು: ಫೋಷಕರಿಗೆ ಮಕ್ಕಳ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಬದಲಾದ ವಾತಾವರಣದಿಂದಾನೂ ಒಮ್ಮೊಮ್ಮೆ ಮಕ್ಕಳ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಆರೋಗ್ಯದ ಕಾಳಜಿ ಮಾಡುವುದು ಬಹಳ ಮುಖ್ಯವಾಗುತ್ತದೆ. ಇದೀಗ ಸಿಲಿಕಾನ್ ಸಿಟಿಯಲ್ಲಿ ಪೋಷಕರ ಭಯ ಉಂಟು ಮಾಡುವಂತ ಕಾಯಿಲೆಯೊಂದು ಮಕ್ಕಳನ್ನು ಕಾಡುವುದಕ್ಕೆ ಶುರು ಮಾಡಿದೆ.

ಸಿಲಿಕಾನ್ ಸಿಟಿಯಲ್ಲಿ ಮಂಗನಬಾವು ಕಾಯಿಲೆಗೆ ಮಕ್ಕಳು ಒಳಗಾಗುತ್ತಿರುವುದು ಕಂಡು ಬರುತ್ತಿದೆ. ಇದರಿಂದ ಕೆಲ ಮಕ್ಕಳಿಗೆ ಎಲುಬುಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿದೆ. ಸರ್ಕಾರದಿಂದ ಸದ್ಯಕ್ಕೆ ಮಕ್ಕಳಿಗೆ MR ಲಸಿಕೆ ಮಾತ್ರ ನೀಡಲಾಗುತ್ತಿದೆ. ಕುತ್ತಿಗೆ ಮೇಲ್ಭಾಗ ಹಾಗೂ ಗದ್ದ, ಕಪಾಳ ಭಾಗವೂ ಊದಿಕೊಳ್ಳುತ್ತಿದೆ. ಮಂಗನ ಬಾವು ಕಾಯಿಲೆ ಮಕ್ಕಳಿಗೆ ಬಹಳ ಬೇಗ ಹರಡುತ್ತಿದೆ. ಈ ನೋವಿನಿಂದಾಗಿ‌ ಮಕ್ಕಳು ಶಾಲೆಗೆ ಹೋಗುವುದಕ್ಕೂ ತೊಂದರೆಯಾಗುತ್ತಿದೆ.

 

ಈ ಮಂಗನ ಬಾವು ಎಂಬ ಕಾಯಿಲೆಯೂ ವೈರಾಣುಗಳಿಂದ ಹರಡುತ್ತದೆ. ಗ್ರಂಥಿಗಳನ್ನು ದೊಡ್ಡದಾಗಿಸುವ ಮೂಲಕ ಮಕ್ಕಳ ದೇಹಕ್ಕೆ ಬಾರೀ ಪ್ರಮಾಣದಲ್ಲಿ ನೋವುಂಟು ಮಾಡುತ್ತದೆ. ಕಿವಿಯ ಮುಂಭಾಗದಲ್ಲಿ ಕೆಳಗಡೆ ಇರುವ ಈ ಗ್ರಂಥಿಗಳು ಜೊಲ್ಲನ್ನು ಉತ್ಪಾದಿಸುತ್ತದೆ. ಇದೊಂದು ಸಾಂಕ್ರಾಮಿಕ ರೊಇಗವೇ ಸರಿ. ಸೋಂಕಿತ ವ್ಯಕ್ತಿಯ ಎಂಜಲು ಸಿಡಿಯುವುದು, ಉಸಿರಾಟ ತಾಗುವುದು ಈ ರೀತಿಯ ಸಂಪರ್ಕದಿಂದಾಗಿ ಬೇರೆ ಮಕ್ಕಳಿಗೂ ಬಹಳ ಬೇಗನೇ ಹರಡುತ್ತದೆ. 2 ರಿಂದ 12 ವರ್ಷ ವಯಸ್ಸಿನ ಮಕ್ಕಳಲ್ಲಿ ಈ ಕಾಯಿಲೆ ಬಹಳ ಬೇಗನೇ ಹರಡುತ್ತಿದೆ.

ವೈರಸ್ ಮಕ್ಕಳ ದೇಹಕ್ಕೆ ಹರಡಿದ 12-14 ದಿನಗಳ ಒಳಗಾಗಿ ಲಕ್ಷಗಳು ಕಂಡು ಬರುತ್ತವೆ. ಈ ಮಂಗಮ ಬಾವು ವೈರಸ್ ನಿಂದಾಗಿ ಮಕ್ಕಳ ದೇಹ ನೋವಿನಿಂದ ಕೂಡಿರುತ್ತದೆ. ಹೀಗಾಗಿ ಮಕ್ಕಳನ್ನು ಕಾಳಜಿಯಿಂದ ನೋಡಿಕೊಳ್ಳುವುದು ಉತ್ತಮ.

Share This Article
Leave a Comment

Leave a Reply

Your email address will not be published. Required fields are marked *