ಬೆಂಗಳೂರು: ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆಯಾದ ಮೇಲೆ ಒಂದಷ್ಟು ಜನ ಅವರ ಸಹಾಯಕ್ಕಾಗಿ ಹಣ ಸಂಗ್ರಹಿಸಲು ಮುಂದಾಗಿದ್ದಾರೆ. ಈ ವಿಚಾರವಾಗಿ ಗಂಭೀರ ಆರೋಪ ಮಾಡಿರುವ ಚಕ್ರವರ್ತಿ ಸೂಲಿಬೆಲೆ, ಪ್ರವೀಣ್ ಹತ್ಯೆ ಹೆಸರಿನಲ್ಲಿ, ಅವರ ಕುಟುಂಬಕ್ಕೆ ಸಹಾಯ ಮಾಡುವ ನೆಪದಲ್ಲಿ ಬಿಜೆಪಿ ಯುವ ಮೋರ್ಚಾದ ಸದಸ್ಯರು ಹಣ ವಸೂಲಿ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಟ್ವೀಟ್ ಮಾಡಿರುವ ಚಕ್ರವರ್ತಿ ಸೂಲಿಬೆಲೆ, ಸ್ಥಳೀಯರು ಸ್ವಂತ ಖಾತೆಯ ವಿವರ ನೀಡಿ ಹಣ ವಸೂಲಿ ಮಾಡುತ್ತಿದ್ದಾರೆ. ಒಬ್ಬ ನಾಯಕ ಈ ರೀತಿಯ ವಂಚನೆಯ ಸಂದೇಶವನ್ನು ಕಳುಹಿಸಿದ್ದು, ಅದಕ್ಕೆ ಆತ ಸೂಕ್ತವಾದ ಉತ್ತರವನ್ನು ಪಡೆದಿದ್ದಾನೆ. ನೀವು ನಮ್ಮಿಂದ ಹಣವನ್ನು ಸಂಗ್ರಹಿಸುತ್ತೀರಿ ಬಳಿಕ ನಿಮ್ಮ ಮಂತ್ರಿಗಳು ನಿಮ್ಮಂದ ಆ ಹಣವನ್ನು ದೋಚುತ್ತಾರೆ ಎಂದು ಉತ್ತರಿಸಿದ್ದಾನೆ ಎಂದು ಟ್ವೀಟ್ ಮಾಡಿದ್ದಾರೆ.
ಟ್ವೀಟ್ ಜೊತೆಗೆ ಪತ್ರವನ್ನು ಬರೆದಿರುವ ಸೂಲಿಬೆಲೆ, ಪ್ರವೀಣ್ ನೆಟ್ಟಾರು ಅವರನ್ನು ಭಯೋತ್ಪಾದಕರು ಹತ್ಯೆ ಮಾಡಿರುವುದು ಖಂಡನೀಯ. ನಮ್ಮ ಕಾರ್ಯಕರ್ತನಾಗಿದ್ದ ಪ್ತವೀಣ್ ಕುಟುಂಬಕ್ಕೆ ನಮ್ಮ ಪಕ್ಷವೂ ಅದಾಗಲೇ ಪ್ರಾಥಮಿಕ ಹಂತವಾಗಿ ಸಹಾಯ ಮಾಡಿದೆ. ಸರ್ಕಾರವೂ ಸಹಾಯ ಮಾಡಲಿದೆ. ಆದರೆ ಇದರ ನಡುವೆ ಒ್ರವೀಣ್ ಕುಟುಂಬದ ಹೆಸರಿನಲ್ಲಿ ಅಲ್ಲಲ್ಲಿ ಖಾಸಗಿಯಾಗಿ ಹಣ ಸಂಗ್ರಹಿಸುತ್ತಿರುವುದು ಗಮನಕ್ಕೆ ಬಂದಿದೆ. ಯಾರು ಕೂಡ ವಮನಚನೆ ಮಾಡಬಾರದು ಎಂದಿರುವ ಸೂಲಿಬೆಲೆ ಜನರಿಗೂ ಎಚ್ಚರಿದಿಂದ ಇರಲು ಸೂಚಿಸಿದ್ದಾರೆ.