ಜೈನಮುನಿಯ ಬರ್ಬರ ಹತ್ಯೆಯ ಹಿಂದೆ ಹಣದ ವ್ಯವಹಾರ : ಕೊಂದವರನ್ನೆ ಕೊಲ್ಲಿ ಎಂದ ಭಕ್ತರು..!

suddionenews
1 Min Read

 

 

ಬೆಳಗಾವಿ: ಜೈನಮುನಿ ಕಾಮಕುಮಾರ ನಂದಿಯ ಬರ್ಬರ ಹತ್ಯೆ ಬೆಳಗಾವಿ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ. ಸದ್ಯ ಪ್ರಕರಣ ತನಿಖೆಯನ್ನು ಚಿಕ್ಕೋಡಿ ಪೊಲೀಸರು ನಡೆಸುತ್ತಿದ್ದಾರೆ. ಶವಕ್ಕಾಗಿ ರಾತ್ರಿಯಿಡೀ ಶೋಧ ಕಾರ್ಯ ನಡೆಸಿದ ಚಿಕ್ಕೋಡಿ ಪೊಲೀಸರು, ಈಗಲೂ ಕಟಕಬಾವಿ – ಮುಗಳಕೋಡ ರಸ್ತೆ ಬಂದ್ ಮಾಡಿ ಶೋಧ ಕಾರ್ಯ ಮುಂದುವರೆಸಿದ್ದಾರೆ. ಮೃತದೇಹಕ್ಕಾಗಿ ಮುಂದುವರಿದ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ. ಕಟಕಬಾವಿ ಗ್ರಾಮದಲ್ಲಿ ಶೋಧ ಕಾರ್ಯ ಮುಂದುವರೆದಿದ್ದ.

 

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ರಹಸ್ಯ ಬಯಲಾಗಿದೆ. ನೀಡಿದ ಹಣ ವಾಪಸ್ ಕೇಳಿದ್ದಕ್ಕೆ, ಆಶ್ರಮದಲ್ಲಿಯೇ ಜೈನ ಮುನಿಯನ್ನು ಬರ್ಬರವಾಗಿ ಹತ್ಯೆ ಮಾಡಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ. ಜೈನ ಮುನಿಯಿಂದ ಲಕ್ಷಾಂತರ ಹಣ ಪಡೆದಿದ್ದ ಆರೋಪಿ ಈ ರೀತಿ ಮಾಡಿದ್ದಾನೆ ಎನ್ನಲಾಗಿದೆ. ವಿಶ್ವಾಸ ಗಳಿಸಿ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದ ಎನ್ಬಲಾಗಿದೆ. ನೀಡಿದ್ದ ಹಣ ವಾಪಾಸ್ ಕೇಳಿದ್ದಕ್ಕೆ ಈ ರೀತಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಜೈನ ಮುನಿಯ ಕೊಲೆಗೆ ಭಕ್ತರು ಆಕ್ರೋಶಗೊಂಡಿದ್ದಾರೆ‌. ಕೊಂದಿರುವ ಆರೋಪಿಗಳನ್ನು ತುಂಡು ತುಂಡಾಗಿ ಕತ್ತರಿಸಿ. ಜೈನ ಮುನಿಯನ್ನು ಹೇಗೆ ಕೊಂದಿದ್ದಾರೋ ಅದೇ ರೀತಿ ಸಾಯಿಸಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *