ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ
ಕೊಂಡ್ಲಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಬಿಳಿನೀರು ಚಿಲುಮೆಯ ಹೆಸರೇ ಹೇಳುವಂತೆ ಇಲ್ಲಿನ ನೀರು ಅತ್ಯಂತ ತಿಳಿ ಹಾಗೂ ಸ್ವಚ್ಛವಾಗಿರುತ್ತದೆ.
16 ನೇ ಶತಮಾನದಲ್ಲಿದ್ದ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿಯವರು ತಮ್ಮ ಶಿಷ್ಯ ಫಣಿಯಪ್ಪನೊಂದಿಗೆ ಒಮ್ಮೆ ರಾಯದುರ್ಗದಿಂದ ಈ ಮಾರ್ಗವಾಗಿ ಹೋಗುತ್ತಿದ್ದಾಗ ಇಲ್ಲಿ ಊಟಕ್ಕೆ ಇಳಿದುಕೊಳ್ಳುತ್ತಾರೆ.
ಫಣಿಯಪ್ಪನಿಗೆ ನೀರು ತರಲು ಹೇಳಿದಾಗ ಸುತ್ತಮುತ್ತಲೆಲ್ಲಾ ಹುಡುಕಾಡಿ ಕೊನೆಗೆ ಇದು ಸಂಪೂರ್ಣ ಬರಡು ಭೂಮಿಯಾಗಿದ್ದು,ಇಲ್ಲಿ ಯಾವುದು ನೀರಿನ ಮೂಲ ಸಿಗುತ್ತಿಲ್ಲ ಎಂದು ಹೇಳುತ್ತಾನೆ.
ನಂತರ ತಿಪ್ಪೇರುದ್ರಸ್ವಾಮಿಯು ತನ್ನ ಬೆತ್ತದಿಂದ ನೀರಿಗೆಂದು ನೆಲವನ್ನು ಕೆದರಿದಾಗ ಆದದ್ದೆಂದು ಬಿಳಿನೀರು ಚಿಲುಮೆ ಬಗ್ಗೆ ಹೇಳಲಾಗುತ್ತದೆ. ಈ ಚಿಲುಮೆಯ ಕೊಳದಲ್ಲಿ ಸದಾ ನೀರು ಇದ್ದೇ ಇರುತ್ತದೆ.
ದೇವಾಲಯ: ಗರ್ಭಗೃಹ,ಸಭಾಮಂಟಪಗಳಿರುವ ವಿನೂತನ ದೇವಾಲಯ ಇದಾಗಿದ್ದು, ಗರ್ಭಗೃಹದಲ್ಲಿ ಸುಮಾರು ಐದು ಅಡಿ ಎತ್ತರದ ತಿಪ್ಪೇರುದ್ರಸ್ವಾಮಿಯ ಶಿಲ್ಪವನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿರುವರು.
ಇಲ್ಲಿನ ಪರಿಸರವು ಅತ್ಯಂತ ರಮಣೀಯವಾಗಿದ್ದು, ಆಗಾಗ ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ…
ಕಾರ್ಯಕ್ರಮಗಳು ನಡೆಯುತ್ತಿರುತ್ತವೆ.


