Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮೊಳಕಾಲ್ಮೂರು | ಕೊಲೆ ಪ್ರಕರಣ : 48 ಗಂಟೆಯಲ್ಲೇ ಐವರು ಆರೋಪಿಗಳ ಬಂಧನ

---Advertisement---

 

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 20 : ತಾಲ್ಲೂಕಿನ ಸೂಲೇನಹಳ್ಳಿ ಗ್ರಾಮದಲ್ಲಿ ಕಳೆದ ಎರಡು ದಿನಗಳ ಹಿಂದೆ ನಡೆದಿದ್ದ ಓಬಣ್ಣನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯಾದ 48 ಗಂಟೆಯೊಳಗೆ ಕೊಲೆ ಮಾಡಿದ ಐವರು ಆರೋಪಿಗಳನ್ನು ಮೊಳಕಾಲ್ಮೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.


1] ಜಿತೇಂದ್ರ, ಆರ್.
2] ಕೆ.ಎಸ್. ಬೋರಯ್ಯ
3] ಬೋರಮ್ಮ
4] ಕರಿಬಸಮ್ಮ
5] ಎಂ.ಟಿ ಅಜ್ಜಣ್ಣ ಬಂಧಿತ ಆರೋಪಿಗಳು.

ಘಟನೆ ಹಿನ್ನೆಲೆ :
ಮೊಳಕಾಲ್ಮೂರು ತಾಲ್ಲೂಕಿನ ಸೂಲೇನಹಳ್ಳಿ ಗ್ರಾಮದ
ಲಕ್ಷ್ಮಣರವರ ಜಮೀನಿನಲ್ಲಿರುವ ಇಟ್ಟಿಗೆ ಭಟ್ಟಿಯಲ್ಲಿ
ಟ್ರಾಕ್ಟರ್ ಟ್ರೈಲರ್ ಮಧ್ಯದ ಕಬ್ಬಿಣದ ಆಂಗ್ಲರ್ ಮೇಲೆ ಓಬಣ್ಣನ 2 ಕೈ ಮತ್ತು 2 ಕಾಲುಗಳನ್ನು ಟವಲ್ ನಿಂದ ಕಟ್ಟಿ ಓಬಣ್ಣನನ್ನು ಬೋರಲು ಮಲಗಿಸಿ, ಟ್ರಾಲಿಯ ಹೈಡ್ರಾಲಿಕ್ ನ್ನು ಮೇಲಕ್ಕೆತ್ತಿ ಕುತ್ತಿಗೆಯ ಮೇಲೆ ಟ್ರಾಲಿಯ ಹೈಡ್ರಾಲಿಕ್ ಕೆಳಗೆ ಇಳಿಸಿ ಕೊಲೆ ಮಾಡಿರುತ್ತಾರೆಂದು ಫೆಬ್ರವರಿ 17 ರಂದು ದೂರು ನೀಡಲಾಗಿತ್ತು.

ಈ ದೂರಿನ ಮೇರೆಗೆ ಆರೋಪಿಗಳನ್ನು ಪತ್ತೆ ಮಾಡಲು ರಂಜಿತ್ ಕುಮಾರ್ ಬಂಡಾರು, ಪೊಲೀಸ್ ಅಧೀಕ್ಷಕರು, ಚಿತ್ರದುರ್ಗ ಜಿಲ್ಲೆ, ಡಾ.ಶಿವಕುಮಾರ ಆರ್. ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಚಿತ್ರದುರ್ಗ ಜಿಲ್ಲೆ ಹಾಗೂ ಸತ್ಯನಾರಾಯಣರಾವ್, ಪೊಲೀಸ್ ಉಪಾಧೀಕ್ಷಕರು, ಚಳ್ಳಕೆರೆ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಮೊಳಕಾಲ್ಮರು ಪೊಲೀಸ್ ವೃತ್ತ ನಿರೀಕ್ಷಕರವರಾದ ನಾಗರಾಜ್, ಆರ್. ರವರ ನೇತೃತ್ವದಲ್ಲಿ ಮೊಳಕಾಲ್ಮೂರು ಪೊಲೀಸ್ ಉಪ ನಿರೀಕ್ಷಕರವರಾದ ಮಹೇಶ್ ಲಕ್ಷ್ಮಣ ಹೊಸಪೇಟ ಮತ್ತು ಅವರ ಸಿಬ್ಬಂದಿಯವರನ್ನು ಸೇರಿ ತಂಡ ರಚನೆ ಮಾಡಲಾಗಿತ್ತು.

 

ಆರೋಪಿಗಳ ಪತ್ತೆ ಕಾರ್ಯ ಕೈಗೊಂಡು ಘಟನೆ ನಡೆದ 48 ಗಂಟೆಯೊಳಗೆ ಐವರು ಆರೋಪಿಗಳನ್ನು ಮೊಳಕಾಲ್ಮೂರು ವೃತ್ತ ನಿರೀಕ್ಷಕರವರಾದ ನಾಗರಾಜ್, ಆರ್. ಹಾಗೂ ಪಿ.ಎಸ್.ಐ ರವರಾದ ಮಹೇಶ್ ಲಕ್ಷ್ಮಣ ಹೊಸಪೇಟ ಹಾಗೂ ಸಿಬ್ಬಂದಿಯವರಾದ ವೀರಣ್ಣ, ಓಬಣ್ಣ, ಹರೀಶ, ಸತೀಶ್, ಖಾದರ್ ಭಾಷ, ಪ್ರಭುದೇವ, ಬಜ್ಜಣ್ಣ, ನಂದಪ್ಪ, ಲಕ್ಷ್ಮೀಪತಿ, ಹುಲುಗಪ್ಪ ಭೂವಿ, ಆಶಾರಾಣಿ ಮತ್ತು ಸೌಭಾಗ್ಯ ಬಾರಕೇರ ರವರ ತಂಡ ಬಂಧಿಸಿರುತ್ತಾರೆ.

 

ಆರೋಪಿಗಳ ಪತ್ತೆ ಕಾರ್ಯವನ್ನು ಕೈಗೊಂಡ ಈ ತಂಡಕ್ಕೆ ರಂಜಿತ್ ಕುಮಾರ್ ಬಂಡಾರು, ಪೊಲೀಸ್ ಅಧೀಕ್ಷಕರು, ಚಿತ್ರದುರ್ಗ ಜಿಲ್ಲೆ, ಡಾ.ಶಿವಕುಮಾರ ಆರ್. ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಚಿತ್ರದುರ್ಗ ಜಿಲ್ಲೆ ಮತ್ತು ಸತ್ಯನಾರಾಯಣರಾವ್, ಪೊಲೀಸ್ ಉಪಾಧೀಕ್ಷಕರು, ಚಳ್ಳಕೆರೆ ಉಪ ವಿಭಾಗ ರವರು ಪ್ರಶಂಶಿಸಿರುತ್ತಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...