ಮೊಳಕಾಲ್ಮೂರು | ಹಾಸ್ಟೆಲ್ ವಾರ್ಡನ್ ಅಮನಾತು

1 Min Read

 

ಚಿತ್ರದುರ್ಗ. ಡಿ.24: ಸರ್ಕಾರಿ ಆಸ್ತಿ ದುರ್ಬಳಕೆ ಹಾಗೂ ವಿದ್ಯಾರ್ಥಿ ನಿಲಯ ನಿರ್ವಹಣೆಯಲ್ಲಿನ ಕರ್ತವ್ಯ ಲೋಪ ಆರೋಪದ ಮೇರೆಗೆ ಕೋನಸಾಗರ ಪರಿಶಿಷ್ಟ ಜಾತಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದ ವಾರ್ಡನ್ ಫಯಾಜ್ ಬಾಷಾ ಅವರನ್ನು ಸೇವೆಯಿಂದ ಅಮಾನತುಗೊಳಿಸಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಜೆ.ಸೋಮಶೇಖರ್ ಆದೇಶ ಹೊರಡಿಸಿದ್ದಾರೆ.

 

ಫಯಾಜ್ ಬಾಷಾ ಅವರು ಮೊಳಕಾಲ್ಮೂರು ಟೌನ್‍ನ ಪರಿಶಿಷ್ಟ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯದ ವಾರ್ಡನ್ ಆಗಿದ್ದ ಸಂದರ್ಭದಲ್ಲಿ ವಿದ್ಯಾರ್ಥಿ ನಿಲಯಕ್ಕಾಗಿ, ಚಿತ್ರದುರ್ಗ ನಗರದ ಐ.ಯು.ಡಿ.ಪಿ ಲೇ ಔಟ್‍ನ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯದಲ್ಲಿ ಹೆಚ್ಚುವರಿಯಾಗಿದ್ದ 30 ಟೂ-ಟಯರ್ ಕಾಟ್, 44 ಬೆಡ್ ಮತ್ತು 36 ಪಿಲ್ಲೋಗಳನ್ನು ತೆಗೆದುಕೊಂಡು ಹೋಗಿದ್ದರು.  ವಾರ್ಡನ್ ಫಯಾಜ್ ಬಾಷಾ ಇವುಗಳಲ್ಲಿ 30 ಟೂ-ಟಯರ್ ಕಾಟ್‍ಗಳನ್ನು ದುರಪಯೋಗ ಪಡಿಸಿಕೊಂಡಿದ್ದಾರೆ.  ಸರ್ಕಾರಿ ಆಸ್ತಿಗಳ ದುರ್ಬಳಕೆ, ಕರ್ತವ್ಯ ನಿರ್ಲಕ್ಷತೆ ಮತ್ತು ಬೇಜವಾಬ್ದಾರಿ ತೋರಿದ್ದಾರೆ ಎಂಬುದಾಗಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಜಂಟಿನಿರ್ದೇಶಕರು ನೀಡಿದ ವರದಿ ಆಧರಿಸಿ, ಕೆ.ಸಿ.ಎಸ್(ಸಿ.ಸಿ.ಎ) ನಿಯಮಾವಳಿ-1957ರ ನಿಯಮ 10(1)ರ ಅನ್ವಯ ವಾರ್ಡನ್ ಫಯಾಜ್ ಬಾಷಾ ಅವರನ್ನು ಇಲಾಖಾ ವಿಚಾರಣೆ/ ಶಿಸ್ತು ಕ್ರಮ ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನುತ್ತುಗೊಳಿಸಲಾಗಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ. ಸೋಮಶೇಖರ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *