ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188
ಸುದ್ದಿಒನ್ : ಚಿತ್ರದುರ್ಗ, ಜುಲೈ .20 : ವಿವಾಹ ಆಗಲು ಯಾರು ಹೆಣ್ಣು ಕೋಡುತ್ತಿಲ್ಲ ಎಂದು ಮನನೊಂದ (ಹೋಂ ಗಾರ್ಡ್) ಗೃಹ ರಕ್ಷಕ ದಳದ ಸಿಬ್ಬಂದಿಯೋರ್ವ ನೇಣಿಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಜೆಬಿ ಹಳ್ಳಿಯಲ್ಲಿ ನಡೆದಿದೆ.
ಮೃತ ಹೋಂ ಗಾರ್ಡ್ ತಿರುಮಲ (31) ಎಂದು ಗುರುತಿಸಲಾಗಿದೆ. ತಾಲ್ಲೂಕಿನ ರಾಂಪುರ ಪೊಲೀಸ್ ಠಾಣೆಯಲ್ಲಿ ಹೋಂ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.
ತಿರುಮಲ ಹಲವು ವರ್ಷಗಳಿಂದ ಮದುವೆ ಮಾಡಿಕೊಳ್ಳಲು ಕನ್ಯೆ ಹುಡುಕುತ್ತಿದ್ದು, ವಯಸ್ಸಾಗ್ತಿದೆ ಮದುವೆ ಮಾಡಿಕೊಳ್ಳಬೇಕು ಎನ್ನುವ ಚಿಂತೆ ಕಾಡುತ್ತಿತ್ತು. ಅಲ್ಲದೇ ಇತ್ತೀಚಿಗೆ ಮೂರು ಕಡೆ ಕನ್ಯೆ ನೋಡಲು ಹೋಗಿದ್ದು ಹೆಣ್ಣಿನ ಕಡೆಯವರಿಂದ ತಿರಸ್ಕಾರಗೊಂಡ ಪರಿಣಾಮವಾಗಿ ಮಾನಸಿಕ ಖಿನ್ನತೆಗೊಳಗಾದ ತಿರುಮಲ ಮನನೊಂದು, ಮನೆಯಲ್ಲಿಯೇ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾಂಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






