ಮೊಳಕಾಲ್ಮೂರು : ವಸತಿ ಶಾಲೆಗಳಿಗೆ ಎಸಿ ಮಹಬೂಬ್ ಜಿಲಾನಿ ಖುರೇಶಿ ಭೇಟಿ

2 Min Read

ವರದಿ ಮತ್ತು ಫೋಟೋ ಕೃಪೆ
ಹೆಚ್. ಮಹಾಂತೇಶ್, ರಾಯಾಪುರ.
ಮೊ : 93806 27082

ಸುದ್ದಿಒನ್, ಮೊಳಕಾಲ್ಮುರು,ಆಗಸ್ಟ್. 06 : ತಾಲೂಕಿನ ಸೂಲೇನಹಳ್ಳಿ ಮೊರಾರ್ಜಿ ದೇಸಾಯಿ ಹಾಗೂ ಯರ್ರೇನಹಳ್ಳಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಿಗೆ ಬುಧವಾರ ಜಿಲ್ಲಾ ಉಪವಿಭಾಗಾಧಿಕಾರಿ ಮಹಬೂಬ್ ಜಿಲಾನಿ ಖುರೇಶಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆರಂಭದಲ್ಲಿ ತಾಲೂಕು ಆಡಳಿತ ಸೌಧದಲ್ಲಿ ನಾನಾ ವಿಭಾಗದ ಅಗತ್ಯ ಮಾಹಿತಿಗಳನ್ನು ಪರಿಶೀಲಿಸಿ ಸೂಲೇನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ತೆರಳಿದರು. ಅವರಣದಲ್ಲಿ ಆಕರ್ಷಕ ಧ್ವಜಗಳನ್ನು ನಿರ್ಮಿಸಲು ಉಪವಿಭಾಗಾಧಿಕಾರಿ ಖುದ್ದು ತಾವೇ ಕಂಬಗಳನ್ನು ನೆಡಲು ಸ್ಥಳ ನಿಗದಿ ಮಾಡಿ, ಮರಗಳಲ್ಲಿನ ಕವಲು ಕೊಂಬೆಗಳನ್ನು ತೆರವುಗೊಳಿಸಿ ಮರಗಳ ಬೆಳೆವಣಿಗೆಗೆ ಸಹಕರಿಸುವಂತೆ ಪ್ರಭಾರ ಪ್ರಾಚಾರ್ಯ ರಮೇಶ್‌ಗೆ ಸೂಚಿಸಿದರು.

ಕೆಲವು ಸಮಯ ಮಕ್ಕಳ ಜೊತೆ ಅಗತ್ಯ ಚರ್ಚೆ ನಡೆಸಿ ಶಾಲಾ ಆವರಣ, ಸ್ಟೋರ್ ರೂಂ, ಮಕ್ಕಳು ಮಲಗುವ ಕೊಠಗಳನ್ನು ವೀಕ್ಷಿಸಿ ಆನಂತರ ಡೈನಿಂಗ್ ಹಾಲ್ ಪ್ರವೇಶಿಸಿ ವಿದ್ಯಾರ್ಥಿಗಳ ಜೊತೆ ಊಟದ ರುಚಿ ಸವಿದರು.

ನಂತರ ಯರ್ರೇನಹಳ್ಳಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ತೆರಳಿ ಶಾಲೆಯ ಸಿಸಿ ಟಿವಿಯಲ್ಲಿ ಶಿಕ್ಷಕರು ಬೋಧಿಸುವ ಪರಿಯನ್ನು ವೀಕ್ಷಿಸಿದರು. ನಂತರ ಎಲ್ಲಾ ಶಿಕ್ಷಕರನ್ನು ಕರೆಸಿಕೊಂಡು ನೀವುಗಳು ನನಗಿಂತ ಸೀನಿಯ‌ರ್ ಇದ್ದೀರಾ, ಸರಕಾರಿ ಕೆಲಸಕ್ಕೆ ಸೇರಿ ನಾನಿನ್ನು ಒಂದು ವರ್ಷವಾಗಿದೆ ನನ್ನಿಂದ ನೀವು ಹೇಳಿಸಿಕೊಳ್ಳದಂತೆ ನಿಮಗಳ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.

ಈ ಶಾಲೆಯಲ್ಲಿ ಸ್ಪೋಟ್ ರೂಂ, ಲ್ಯಾಬ್, ವಿದ್ಯಾರ್ಥಿಗಳ ಮಲಗುವ ಕೊಠಡಿ ವೀಕ್ಷಿಸಿ, ಸರಬರಾಜಾಗಿದ್ದ ಸೊಳ್ಳೆ ಪರದೆಗಳನ್ನು ಸದ್ಬಳಕೆ ಮಾಡಿಕೊಳ್ಳಲು ಕೂಡಲೇ ವಿದ್ಯಾರ್ಥಿನಿಯರಿಗೆ ಹಸ್ತಾಂತರಿಸಬೇಕು. ಮಕ್ಕಳಿಗೆ ಪಾಠದ ಜೊತೆಯಲ್ಲಿ ಶಿಸ್ತು ಕಲಿಸುವುದು ಖಡ್ಡಾಯವಾಗಿದೆ. ಒಂಭತ್ತು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಶೇವಿಂಗ್ ಸೆಟ್ ಕೊಡಿಸಿ ಇವರಿಗೆ ಶೇವ್ ಮಾಡಿಕೊಳ್ಳುವ ವಿಧಾನವನ್ನು ವಿವರಿಸಬೇಕು ಎಂದರು.

ಇದೇ ಶಾಲೆಯಲ್ಲಿ ತನ್ನ ಸಿಬ್ಬಂಧಿಯ ಜೊತೆ ಊಟ ಮಾಡುತ್ತಾ. ನಾನು ಭೇಟಿ ನೀಡುತ್ತೇನೆ ಎಂದು ಸಾರಿಗೆ ಹೊಗ್ಗರಣೆ ಮತ್ತೊಮ್ಮೆ ಹಾಕಿದ್ದು ಗಮನಿಸಿದ್ದೇನೆ. ಇದೇ ಮಾದರಿಯ ಊಟವನ್ನು ಪ್ರತಿ ದಿನವೂ ವಿದ್ಯಾರ್ಥಿಗಳಿಗೆ ನೀಡಬೇಕು. ಊಟ ಬಡಿಸುವವರು ಶುಭ್ರತೆ ಕಾಯ್ದುಕೊಳ್ಳವುದು ಖಡ್ಡಾಯ ಎಂದರು.

ಸ್ಥಳದಲ್ಲಿ ಪ್ರಾಚಾರ್ಯ ದಸ್ತಗಿರಿ, ವಾರ್ಡನ್ ವನಜಾ, ಮೊರಾರ್ಜಿ ಶಾಲೆ ಶಿಕ್ಷಕರಾದ ಪ್ರಸನ್ನ ಕುಮಾರ್, ರಾಮಚಂದ್ರಪ್ಪ, ಧೂಳಪ್ಪರೆಡ್ಡಿ, ಹರೀಶ್ ಕುಮಾರ್, ದುಗ್ಗಪ್ಪ, ರಹಿಮುನ್ನೀಸಾ, ಆಶಾ, ರೂಪಾ, ಗ್ರಾಮಲೆಕ್ಕಾಧಿಕಾರಿಗಳಾದ ಮಲ್ಲಿಕಾರ್ಜುನ್, ಪರಮೇಶ್ ಇದ್ದರು.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks