ನವದೆಹಲಿ: ಇನ್ಫೋಸಿಸ್ ಅಧ್ಯಕ್ಷ ಸ್ಥಾನಕ್ಕೆ ಮೋಹಿತ್ ಜೋಶಿ ಇಂದು ರಾಜೀನಾಮೆ ಸಲ್ಲಿಸಿದ್ದಾರೆ. ಜೂನ್ ತನಕ ಇನ್ಫೋಸಿಸ್ ನಲ್ಲಿಯೇ ಇರಲಿದ್ದು, ಆದರೆ ರಜೆಯಲ್ಲಿರಲಿದ್ದಾರೆ. ಮೋಹಿತ್ ಜೋಶಿ ಪ್ರಬಲ ಪ್ರತಿಭಾವಂತರಾಗಿದ್ದರು. ಆದರ ಕಾರಣ ಅವರನ್ನು ಬಿಟ್ಟುಕೊಡಲು ಇನ್ಫೋಸಿಸ್ ಒಪ್ಪಿರಲಿಲ್ಲ. ಅವರನ್ನು ಉಳಿಸಿಕೊಳ್ಳುವ ಹಾದಿಯಲ್ಲಿ ಸಾಕಷ್ಟು ಪ್ರಯತ್ನ ಮಾಡಿತ್ತು. ಆದರೂ ಅದು ಫಲ ಕೊಡಲಿಲ್ಲ. ಅವರ ಅಧಿಕಾರಾವಧಿ ಮುಗಿಯುವ ಬಗ್ಗೆ ಇನ್ಫೋಸಿಸ್ ಷೇರು ವಿನಿಮಯ ಕೇಂದ್ರ ಮಾಹಿತಿ ನೀಡಿದೆ.
ಡಿಸೆಂಬರ್ ನಲ್ಲಿ ಮಹಿಂದ್ರಾ ಟೆಕ್ ಎಂಡಿ ಮತ್ತು ಸಿಇಒ ಸಿಪಿ ಗುರ್ನಾನಿ ಅವರನ್ನು ಬದಲಿಸಬೇಕೆಂದು ತೀರ್ಮಾನ ಮಾಡಲಾಗಿತ್ತು. ಆದ್ರೆ ಆ ಜಾಗಕ್ಕೆ ಪ್ರಬಲ ಸ್ಪರ್ಧ ಒಡ್ಡುವವರೇ ಬೇಕಾಗಿದ್ದ ಕಾರಣ, ಇನ್ಫೋಸಿಸ್ ಅಧ್ಯಕ್ಷ ಮೋಹಿತ್ ಗೆ ಗಾಳ ಹಾಕಿದೆ ಎನ್ನಲಾಗಿದೆ. ಜೋಶಿ ಅವರು ಇನ್ಫೋಸಿಸ್ ನಲ್ಲಿ ಹಣಕಾಸು ಸೇವೆ, ಆರೋಗ್ಯ ರಕ್ಷಣೆ ಮತ್ತು ಜೀವ ವಿಜ್ಞಾನ ಸೇರಿದಂತೆ ಇತರೆ ವರ್ಟಿಕಲ್ ನಿರ್ವಹಣೆಗಳನ್ನು ಮಾಡುತ್ತಿದ್ದರು.