ತುಮಕೂರು: ಗುಜರಾತ್ ಚುನಾವಣೆ ಬಳಿಕ ಕರ್ನಾಟಕ ಚುನಾವಣೆ ಕಡೆಗೆ ಹೆಚ್ಚು ಗಮನ ನೀಡುತ್ತಿರುವ ಪ್ರಧಾನಿ ಮೋದಿ ಅವರು ಬ್ಯಾಕ್ ಟು ಬ್ಯಾಕ್ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಹುಬ್ಬಳ್ಳಿ, ಕಲಬುರಗಿ, ಯಾದಗಿರಿ ಬಳಿಕ ಇದೀಗ ತುಮಕೂರು ಭೇಟಿಗೆ ಸಮಯದ, ದಿನಾಂಕ ನಿಗದಿಯಾಗಿದೆ. ತುಮಕೂರಿನಲ್ಲಿ ಅಲೆ ಎಬ್ಬಿಸಲು ಮೋದಿ ಸಜ್ಜಾಗಿದ್ದಾರೆ.
ಫೆಬ್ರವರಿ 6ರಂದು ಪ್ರಧಾನಿ ಮೋದಿ ತುಮಕೂರಿಗೆ ಆಗಮಿಸಲಿದ್ದಾರೆ. ಬೆಳಗ್ಗೆ 10.55ಕ್ಕೆಲ್ಲಾ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ. ಬಳಿಕ 11.30ಕ್ಕೆಲ್ಲಾ ತುಮಕೂರಿಗೆ ಭೇಟಿ ನೀಡಿ, ಮೊದಲಿಗೆ ತುಮಕೂರು ರಸ್ತೆಯಲ್ಲಿರುವ BIEC ಇಂಡಿಯಾ ಎನರ್ಜಿ ಸಪ್ತಾಹ ಉದ್ಘಾಟನೆ ಮಾಡಲಿದ್ದಾರೆ. ಜನರನ್ನುದ್ದೇಶಿಸಿ ಮಾತನಾಡಲಿದ್ದಾರೆ.
ತುಮಕೂರು ಕೂಡ ಮೋದಿಯವರ ಸ್ವಾಗತಕ್ಕೆ ಸಜ್ಜಾಗಿದೆ. ಎನರ್ಜಿ ಸಪ್ತಾಹ ಮುಗಿಸಿಕೊಂಡು ನೇರವಾಗಿ ಅಲ್ಲಿಂದ ಹೆಲಿಕಾಪ್ಟರ್ ನಲ್ಲಿ 2.45ಕ್ಕೆ ಗುಬ್ಬಿಗೆ ಪ್ರಯಾಣ ಬೆಳೆಸಲಿದ್ದಾರೆ. ಮಧ್ಯಾಹ್ನ 3.30ಕ್ಕೆ ಹೆಚ್ಎಎಲ್ ನಲ್ಲಿರುವ ಹೆಲಿಕಾಪ್ಟರ್ ಫ್ಯಾಕ್ಟರಿ ಲೋಕಾರ್ಪಣೆ ಮಾಡಲಿದ್ದಾರೆ. ಮತ್ತು ಜಲಜೀವನ್ ಮಿಷನ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.