Modi Suit Rate : ಪ್ರಧಾನಿ ಸಂಬಳ ತಿಂಗಳಿಗೆ 1.6 ಲಕ್ಷ | ಆದರೆ ಧರಿಸುವ ಸೂಟ್ ಬೆಲೆ 3 ಕೋಟಿ | ಇದು ಹೇಗೆ ಸಾಧ್ಯ….!

ಸುದ್ದಿಒನ್ : ಪ್ರಧಾನಿ ನರೇಂದ್ರ ಮೋದಿ ಅವರು ಯಾವಾಗಲೂ ವಿವಿಧ ರೀತಿಯ ಉಡುಗೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಮತ್ತು ಅವರು ವಿದೇಶಕ್ಕೆ ಹೋದಾಗ,  ವಿಶೇಷವಾಗಿ ದುಬಾರಿ ಸೂಟು ಮತ್ತು ಶಾಲುಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

ಆದರೆ ಕೆಲವೊಮ್ಮೆ ಆ ಸೂಟುಗಳನ್ನು ಹರಾಜು ಕೂಡ ಹಾಕುತ್ತಾರೆ. ಆ ಹರಾಜಿನಲ್ಲಿ ದೊಡ್ಡ ಬೆಲೆಗೆ ಮಾರಾಟವಾದುದನ್ನು ನಾವು ನೋಡಿದ್ದೇವೆ. ಈ ನಿಟ್ಟಿನಲ್ಲಿ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ಧರಿಸಿರುವ ಬಟ್ಟೆಯ ಬಗ್ಗೆ ಇತ್ತೀಚೆಗೆ ಗಂಭೀರ ಆರೋಪ ಮಾಡಿದ್ದರು. ಪ್ರಧಾನಿ ಪಡೆಯುವ ಸಂಬಳಕ್ಕೂ ಅವರು ಧರಿಸುವ ಬಟ್ಟೆಯ ಬೆಲೆಗೂ ಯಾವುದೇ ಸಂಬಂಧವಿಲ್ಲ ಎಂದು ಆರೋಪಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ. ಪ್ರಧಾನಿ ಮೋದಿ ಅವರ ಸಂಬಳ ತಿಂಗಳಿಗೆ 1.6 ಲಕ್ಷ ರೂ.ಗಳಾಗಿದ್ದರೆ, ಅವರು ತಿಂಗಳಿಗೆ ಧರಿಸುವ ಸೂಟ್‌ಗಳ ಬೆಲೆ 2 ರಿಂದ 3 ಕೋಟಿ ರೂಪಾಯಿಗಳು.  1.6 ಲಕ್ಷ ಗಳಿಸಿದರೆ 3 ಕೋಟಿ ಸೂಟ್ ಖರೀದಿಸುವುದು ಹೇಗೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಗಮನಿಸಿ, ಬೆಳಗ್ಗೆ ಒಂದು ಸೂಟ್‌ ಧರಿಸಿರುತ್ತಾರೆ. ಮತ್ತೆ ಸಂಜೆ ವೇಳೆಗೆ ನೋಡಿದರೆ ಮತ್ತೊಂದು ಸೂಟ್ ಧರಿಸಿರುತ್ತಾರೆ.  ಅವರು ಧರಿಸುವ ಪ್ರತಿಯೊಂದು ಸೂಟ್‌ಗೆ 2 ರಿಂದ 3 ಲಕ್ಷ ರೂ.ವರೆಗೂ ಖರ್ಚಾಗುತ್ತದೆ. ಹೀಗೆ ಅವರು ಧರಿಸುವ  ಸೂಟು ಮತ್ತು ಶಾಲು ಸೇರಿ 4 ರಿಂದ 5 ಲಕ್ಷ ರೂ. ಆಗುತ್ತದೆ. ಪ್ರಧಾನಿ ತಮ್ಮ ಸಂಬಳಕ್ಕಿಂತ ಹೆಚ್ಚು ಬಟ್ಟೆಗೆ ಖರ್ಚು ಮಾಡುತ್ತಿದ್ದಾರೆ. ಪ್ರಧಾನಿ ಮೋದಿಗೆ ಇಷ್ಟೊಂದು ಹಣ ಎಲ್ಲಿಂದ ಬರುತ್ತಿದೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.

ಸದ್ಯ ರಾಹುಲ್ ಗಾಂಧಿ ಭಾರತ್ ಜೋಡೋ ನ್ಯಾಯ್ ಯಾತ್ರೆ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಈ ಪ್ರವಾಸವನ್ನು ತಾತ್ಕಾಲಿಕವಾಗಿ ನಿಲ್ಲಿಸಿ ದೆಹಲಿಗೆ ತೆರಳಿದ್ದರು. ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬುಧವಾರ ರಾಜಸ್ಥಾನದಿಂದ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ರಾಹುಲ್ ದೆಹಲಿಗೆ ತೆರಳಿದ್ದರು. ಮಣಿಪುರದಲ್ಲಿ ಆರಂಭವಾದ ಈ ಭಾರತ್ ಜೋಡೋ ನ್ಯಾಯ್ ಯಾತ್ರೆಯು 14 ರಾಜ್ಯಗಳಲ್ಲಿ 6200 ಕಿಲೋಮೀಟರ್ ಕ್ರಮಿಸಿ ಮುಂಬೈನಲ್ಲಿ ಕೊನೆಗೊಳ್ಳಲಿದೆ. ಭಾರತ್ ಜೋಡೋ ನ್ಯಾಯ್ ಯಾತ್ರೆ ಇದೇ ತಿಂಗಳ 16 ರಂದು ಉತ್ತರ ಪ್ರದೇಶವನ್ನು ಪ್ರವೇಶಿಸಲಿದೆ.

Share This Article
Leave a Comment

Leave a Reply

Your email address will not be published. Required fields are marked *