ಬೆಂಗಳೂರು: ದೆಹಲಿಯ ರೆಡ್ ಪೋರ್ಟ್ ನಲ್ಲಿ ಸಂಭವಿಸಿದ ಅನಾಹುತದಿಂದ ಹಕವರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಈ ಬಗ್ಗೆ ಈಗಾಗಲೇ ಭದ್ರತೆಯ ವಿಚಾರ ಚರ್ಚೆಯಾಗುತ್ತಿದೆ. ಕೇಂದ್ರದ ಗೃಹ ಮಂತ್ರಿ, ಪ್ರಧಾನಿಗಳಿಗೆ ಪ್ರಶ್ನೆಗಳನ್ನ ಜನ ಕೇಳುತ್ತಿದ್ದರೆ, ಇತ್ತ ರಾಜ್ಯದಲ್ಲಿ ದೇಶಕ್ಕೆ ಭದ್ರತೆ ಅಂದ್ರೆ ಅದು ಮೋದಿ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತಿಳಿಸಿದ್ದಾರೆ.
ರಾಮಮಂದಿರ ಆಗೋದೆ ಇಲ್ಲ ಅಂದ್ರಿ ಅದು ಆಗೋಯ್ತು. ಕಾಶ್ಮೀರ 372 ಆಗಲ್ಲ ಅಂದ್ರಿ ಅದು ಆಗೋಯ್ತು. ದೇಶದ ಜನ ಅದು ಭದ್ರತೆ ಅಂದ್ರೆ ಮೋದಿ, ಭದ್ರತೆ ಅಂದ್ರೆ ಬಿಜೆಪಿ ಅಂತ ನಂಬಿದ್ದಾರೆ. ಕಾಂಗ್ರೆಸ್ ಮೇಲೆ ದೇಶದ ಜನಕ್ಕೆ ನಂಬಿಕೇನೆ ಇಲ್ಲ. ಇವ್ರು ಪಾಕಿಸ್ತಾನಕ್ಕೆ ಬೆಂಬಲ ಕೊಡ್ತಾರೆ ಅತ್ತ ಪಾಕಿಸ್ತಾನದ ಜನತೆಯೂ ರಾಹುಲ್ ಗಾಂಧಿಯನ್ನ ಪ್ರೀತಿ ಮಾಡ್ತಾ ಅಂತ ಇಡೀ ಪ್ರಪಂಚಕ್ಕೆ ಗೊತ್ತಿದೆ.
ದೇಶದ ಮುಂದೆ ರಾಜ್ಯವನ್ನ ಅವಮಾನ ಮಾಡಬೇಡಿ ಅಂತ ಹೇಳ್ತಾರೆ. ಅವಮಾನ ಮಾಡಿರೋದು ದೇಶ ಅಲ್ಕ, ಸರ್ಕಾರ. ಈ ಅಲ್ಪಸಂಖ್ಯಾತರನ್ನ ಒಲೈಕೆ ಮಾಡುವ ಕೆಲಸ ಆಗ್ತಾ ಇದೆ. ಅದರಿಂದಾನೇ ಇವತ್ತು ಹೀಗೆ ಆಗಿರೋದು. ನಿಮ್ಮ ತಪ್ಪಿಂದ ಆಗಿರೋದು. ಆದ್ದರಿಂದ ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕೆಂದು ನಾವೂ ಆಗ್ರಹ ಮಾಡ್ತಾ ಇದ್ದೇವೆ. ಇದು ಮನಮೋಹನ್ ಸಿಂಗ್ ಸರ್ಕಾರವಲ್ಲ, ಸೋನಿಯಾ ಗಾಂಧಿ ಅವರ ಸರ್ಕಾರವಲ್ಲ. ಸರಿಯಾದ ಸಮಯಕ್ಕೆ ಸರಿಯಾದ ಕ್ರಮವನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳುತ್ತದೆ. ಗೃಹ ಸಚಿವರು ಉಕ್ಕಿನ ಮನುಷ್ಯನಂತೆ ಕೆಲಸ ಮಾಡ್ತಾ ಇದ್ದಾರೆ. ಇದು ಗೃಹ ಸಚಿವರ ಫೇಲ್ಯೂರ್ ಅಲ್ಲ ಎಂದೇ ಆಕ್ರೋಶ ಹೊರ ಹಾಕಿದ್ದಾರೆ.

