ನವದೆಹಲಿ: ಇಂದು ಪ್ರಧಾನಿ ನರೇಂದ್ರ ಮೋದಿಯವರು ಕಾರ್ಯಕ್ರಮೊಂದರಲ್ಲಿ ಪಾಲ್ಗೊಳ್ಳಲು ಪಂಜಾಬ್ ಗೆ ಭೇಟಿ ನೀಡಿದ್ದರು. ಆದ್ರೆ ಅಲ್ಲಿನ ಸರ್ಕಾರ ಸರಿಯಾದ ಭದ್ರತೆ ನೀಡಿರಲಿಲ್ಲ ಎಂಬ ಆರೋಪವಿದೆ.
ಟ್ರಾಫಿಕ್ ನಿಂದಾಗಿಯೇ 20 ನಿಮಿಷಗಳ ಕಾಲ ವ್ಯಯವಾಗಿದೆ. ಪಂಜಾಬ್ ಸರ್ಕಾರಕ್ಕೆ ಪ್ರಧಾನಿ ಮೋದಿ ಬರುವ ಬಗ್ಗೆ ಮಾಹಿತಿ ಇದ್ದರು ಕೂಡ ಯಾವುದೇ ರೀತಿಯ ಭದ್ರತೆ ಒದಗಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ.
और #Punjab में किसानों ने की
Modi जी की घर वापिसी….!#GoBackModi— Srinivas BV (@srinivasiyc) January 5, 2022
ಈ ಬಗ್ಗೆ ಯೂಥ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಟ್ವೀಟ್ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಘರ್ ವಾಪ್ಸಿಯಾಗಿದ್ದಾರೆಂದಿದ್ದಾರೆ.
ಪ್ರಧಾನಿಯವರು ಪೊಲೀಸರು ನೀಡಿದ ಮಾರ್ಗದಲ್ಲೇ ತೆರಳುತ್ತಿದ್ದರು. ಇನ್ನೇನು ಸ್ವಲ್ಪ ಸಮಯದಲ್ಲೇ ಹುಸೇನಿವಾಲಾದ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ತೆರಳಬೇಕಿತ್ತು. ಬಿಜೆಪಿ ನಡೆಸುವ ರ್ಯಾಲಿಯಲ್ಲಿ ಭಾಗಿಯಾಗಬೇಕಿತ್ತು. ಅಷ್ಟರಲ್ಲೇ ಫ್ಲೈ ಓವರ್ ಮೇಲೆ ಲಾಕ್ ಆಗಿದ್ದರು. ಸುಮಾರು 20 ನಿಮಿಷಗಳ ಕಾಲ ಪ್ರಧಾನಿಯವರು ಪ್ರತಿಭಟನಾಕಾರರ ನಡಯವೆ ಸಿಕ್ಕಜ ಹಾಕಿಕೊಂಡಿದ್ದರು. ಈ ಹಿನ್ನೆಲೆ ಪಂಜಾಬ್ ಸರ್ಕಾರ ಬೇಕಂತಲೆ ಭದ್ರತೆ ನೀಡಿಲ್ಲ ಎಂದು ಆರೋಪಿಸಲಾಗಿದೆ.