ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿಯವರ ಮೂರು ದಿನಗಳ ಅಮೆರಿಕಾ ಪ್ರವಾಸ ಮುಕ್ತಾಯವಾಗಿದೆ. ಅದರ ಜೊತೆಗೆ ಐತಿಹಾಸಿಕ ಒಪ್ಪಂದಗಳಿಗೆ ಸಹಿಯೂ ಬಿದ್ದಿದೆ. ಉಬಯ ನಾಯಕರ ಸಹಿ ಆಗುತ್ತಿದ್ದಂತೆ ನ್ಯೂಯಾರ್ಕ್ ಆಗಸದಲ್ಲೆಲ್ಲಾ ವಿಶೇಷ ಬಾವುಟವೊಂದು ಹಾರಾಡಿದೆ. ಆ ಬಾವುಟದಲ್ಲಿ ಮೋದಿ ಹಾಗೂ ಬೈಡೆನ್ ಭಾವಚಿತ್ರ ಕಾಣಿಸಿದೆ.
ಆ ಬ್ಯಾನರ್ ನಲ್ಲಿ Historic state visit to the USA ಅಂತ ಬರೆಯಲಾಗಿದೆ. ಅಷ್ಟೇ ಅಲ್ಲ ನ್ಯೂಯಾರ್ಕ್ ನ ನಗರದಲ್ಲಿರುವ ಎಂಪೈರ್ ಸ್ಟೇಟ್ ಬಿಲ್ಡಿಂಗ್ ಮತ್ತು ನಯಾಗರ ಫಾಲ್ಸ್ ನಲ್ಲಿ ಭಾರತದ ಹೆಮ್ಮರಯ ತ್ರಿವರ್ಣ ಧ್ವಜವನ್ನು ಹಾರಿಸಲಾಗಿದೆ. ಈ ವಿಡಿಯೋಗಳನ್ನು ಕೇಂದ್ರ ಸಚಿವ ಕಿರಣ್ ರಿಜಿಜು ಹಂಚಿಕೊಂಡಿದ್ದಾರೆ. ಮೋದಿಗೆ, ಅಮೆರಿಕ ಫಸ್ಟ್ ಕಪಲ್ ಶ್ವೇತಭವನದಲ್ಲಿ ‘ಸ್ಟೇಟ್ ಡಿನ್ನರ್’ ಕೂಡ ಆಯೋಜನೆ ಮಾಡಿತ್ತು.
ಇದೆ ವೇಳೆ, ವಾಷಿಂಗ್ಟನ್ ಡಿಸಿಯ ರೊನಾಲ್ಡ್ ರೇಗನ್ ಸೆಂಟರ್ನಲ್ಲಿ ಶುಕ್ರವಾರ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮೋದಿ ಮಾತನಾಡಿದರು. ‘ನೀವು ಈ ಸಭಾಂಗಣವನ್ನು ಭಾರತದ ಪರಿಪೂರ್ಣ ನಕ್ಷೆಯಂತೆ ಮಾಡಿದ್ದೀರಿ. ಇಲ್ಲಿ ಮಿನಿ ಇಂಡಿಯಾ ಹುಟ್ಟಿಕೊಂಡಂತೆ ಕಾಣುತ್ತಿದೆ. ಅಮೆರಿಕಾದಲ್ಲಿ ಭಾರತದ ಸುಂದರ ಚಿತ್ರವನ್ನು ತೋರಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು ಎಂದರು.