ಪ್ರಯಾಗ್ ರಾಜ್ : ಈಗಾಗಲೇ ಪ್ರಯಾಗ್ ರಾಜ್ ನ ತ್ರಿವೇಣಿ ಸಂಗಮದಲ್ಲಿ ಕೋಟ್ಯಾಂತರ ಭಕ್ತರು ಪುಣ್ಯ ಸ್ನಾನ ಮಾಡಿದ್ದಾರೆ. ಇದೀಗ ಪ್ರಧಾನಿ ಮೋದಿಯವರು ಕೂಡ ಇಂದು ಪ್ರಯಾಗ್ ರಾಜ್ ಗೆ ಭೇಟಿ ನೀಡಿದ್ದಾರೆ. ಈ ವೇಳೆ ಪ್ರಯಾಗ್ ರಾಜ್ ನಲ್ಲಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿತ್ತು. ಪ್ರಯಾಗ್ ರಾಜ್ ನಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿತ್ತು. ಪ್ರಧಾನಿ ಮೋದಿಯವರನ್ನು ಯುಪಿ ಯೋಗಿ ಆದಿತ್ಯಾನಾಥ್ ಅವರು ಭ್ಯ ಸ್ವಾಗತ ಮಾಡಿದರು. ಬಳಿಕ ಮೋದಿ ಅವರು ಬಂದು, ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ.
ಕೈಯಲ್ಲಿ ರುದ್ರಾಕ್ಷಿಯನ್ನು ಹಿಡಿದು ಜಪತಪ ಮಾಡಿದರು. ಗಂಗಾ ಮಾತೆಗೆ ನಮಿಸಿ, ಪುಣ್ಯ ಸ್ನಾನ ಮಾಡಿದರು. ಸ್ನಾನದ ಬಳಿಕ ಭಗವಾನದ ಹನುಮಂತನ ದರ್ಶನಕ್ಕೆ ಧಾವಿಸಿದರು. ಅಲ್ಲಿಯೂ ವಿಶೇಷ ಪೂಜೆ ಮಾಡಿಸಿದರು. ಈ ವೇಳೆ ಅಲಗಲಿನ ಅರ್ಚಕರು ಪ್ರಧಾನಿ ಮೋದಿಯವರಿಗೆ ವಿಶೇಷವಾದ, ಶಕ್ತಿಯುಳ್ಳ ದಾರವನ್ನು ಕೈಗೆ ಕಟ್ಟಿದರು. ಈ ವೇಳೆ ಪ್ರಧಾನಿ ಮೋದಿಯವರು ಬರುವಾಗಲೇ ತಮ್ಮ ಜೊತೆಗೆ ತಂದಿದ್ದ ಸಿಹಿ ತಿಂಡಿಯನ್ನು ಅವರೇ ಎಲ್ಲರಿಗೂ ಹಂಚಿದರು.
ಈಗಾಗಲೇ ಸಾಮಾನ್ಯ ಜನರು, ರಾಜಕಾರಣಿಗಳು, ಸಾಧು ಸಂತರು, ದೇಶದ ನಾನಾ ಮಠಗಳ ಸ್ವಾಮೀಜಿಗಳು ಬಂದು ತೀರ್ಥ ಸ್ನಾನ ಮಾಡಿದ್ದಾರೆ. 144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಪುಣ್ಯ ತೀರ್ಥ ಸ್ನಾನ ಮಾಡಿದರೆ ಪಾಪ ಕರ್ಮಗಳು ಕಳೆಯುತ್ತವೆ. ದೇವತೆಗಳ ಅಮೃತ ಭೂಮಿಗೆ ಬೀಳುವಂಥ ಸಂದರ್ಭದಲ್ಲಿ ಮಹಾಕುಂಭಮೇಳ ಸಂಭವಿಸುವುದು ಎಂಬ ನಂಬಿಕೆ ಇದೆ. ಹೀಗಾಗಿ ಕೋಟ್ಯಾಂತರ ಭಕ್ತರು ಮಹಾಕುಂಭಮೇಳದ ತೀರ್ಥ ಸ್ನಾನ ಮಾಡುವುದಕ್ಕೆ ಮುಂದೆ ಇರುತ್ತಾರೆ.