in , ,

ವಿಧಾನ ಪರಿಷತ್ ಚುನಾವಣೆ : ಅವಳಿ ಜಿಲ್ಲೆಯ ತಾಲ್ಲೂಕುವಾರು ಮತಗಟ್ಟೆ ವಿವರ

suddione whatsapp group join

ಚಿತ್ರದುರ್ಗ, (ಡಿ.07) : ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವ್ಯಾಪ್ತಿಗೆ ದಾವಣಗೆರೆ ಜಿಲ್ಲೆಯ ಹರಿಹರ, ದಾವಣಗೆರೆ ಹಾಗೂ ಜಗಳೂರು ತಾಲ್ಲೂಕು ಸೇರಿವೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು, ಚಳ್ಳಕೆರೆ, ಚಿತ್ರದುರ್ಗ, ಹಿರಿಯೂರು, ಹೊಳಲ್ಕೆರೆ ಹಾಗೂ ಹೊಸದುರ್ಗ ತಾಲ್ಲೂಕು ಸೇರಿದಂತೆ ದಾವಣಗೆರೆ ಜಿಲ್ಲೆಯ ಮೂರು ತಾಲ್ಲೂಕುಗಳು ಹಾಗೂ ಚಿತ್ರದುರ್ಗ ಜಿಲ್ಲೆಯ ಆರು ತಾಲ್ಲೂಕು ಸೇರಿದಂತೆ ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರ ವ್ಯಾಪ್ತಿಗೆ ಒಟ್ಟು 9 ತಾಲ್ಲೂಕುಗಳು ಸೇರಿವೆ.

284 ಮತಗಟ್ಟೆಗಳ ಸ್ಥಾಪನೆ:  ಹರಿಹರ ತಾಲ್ಲೂಕಿನಲ್ಲಿ 24 ಮತಗಟ್ಟೆ, ದಾವಣಗೆರೆ 42, ಜಗಳೂರು 23 ಮತಗಟ್ಟೆ ಸೇರಿದಂತೆ ಒಟ್ಟು 89 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.  ಮೊಳಕಾಲ್ಮುರು ತಾಲ್ಲೂಕಿನಲ್ಲಿ 17 ಮತಗಟ್ಟೆ, ಚಳ್ಳಕೆರೆ 41, ಚಿತ್ರದುರ್ಗ 39, ಹೊಳಲ್ಕೆರೆ 30, ಹಿರಿಯೂರು  34 ಹಾಗೂ ಹೊಸದುರ್ಗ ತಾಲ್ಲೂಕಿನಲ್ಲಿ 34 ಮತಗಟ್ಟೆ ಸೇರಿದಂತೆ 195 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ದಾವಣಗೆರೆ ಜಿಲ್ಲೆಯ ಮೂರು ತಾಲ್ಲೂಕು ಹಾಗೂ ಚಿತ್ರದುರ್ಗ ಜಿಲ್ಲೆಯ ಆರು ತಾಲ್ಲೂಕುಗಳಿಂದ ಒಟ್ಟು 284 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

2384 ಪುರುಷ ಮತದಾರರು, 2689 ಮಹಿಳಾ ಮತದಾರರು ಸೇರಿದಂತೆ ಒಟ್ಟು 5073 ಮತದಾರರು ಇದ್ದಾರೆ.

452 ಮತದಾನ ಸಿಬ್ಬಂದಿ: ಪ್ರತಿಯೊಂದು ಮತಗಟ್ಟೆಗೆ ಒಬ್ಬರು ಪಿಆರ್‍ಓ ಹಾಗೂ ಒಬ್ಬರು ಎಪಿಆರ್‍ಓ ಅವರನ್ನು ನೇಮಕ ಮಾಡಲಾಗಿದ್ದು, 226 ಪಿಆರ್‍ಓ ಹಾಗೂ 226 ಎಪಿಆರ್‍ಓ ಸೇರಿದಂತೆ ಒಟ್ಟು 452 ಮತದಾನ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.
ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಕೇಂದ್ರಗಳು: ಆಯಾ ತಾಲ್ಲೂಕುಗಳಲ್ಲಿ ತಾಲ್ಲೂಕು ಕಚೇರಿಗಳಲ್ಲಿ ಮಸ್ಟರಿಂಗ್ ಹಾಗೂ ಡಿ ಮಸ್ಟರಿಂಗ್ ನಡೆಯಲಿದೆ. ಚಿತ್ರದುರ್ಗ ತಾಲ್ಲೂಕು ಮಾತ್ರ ಸರ್ಕಾರಿ ವಿಜ್ಞಾನ ಕಾಲೇಜು (ಹೊಸ ಕಟ್ಟಡ)ದಲ್ಲಿ ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಹಾಗೂ  ನಡೆಯಲಿದೆ.

ಭದ್ರತಾ ವ್ಯವಸ್ಥೆ: 38 ಸೂಕ್ಷ್ಮ ಮತಟ್ಟೆಗಳು, 61 ಅತೀ ಸೂಕ್ಷ್ಮ ಮತಗಟ್ಟೆಗಳು ಹಾಗೂ 96 ಸಾಮಾನ್ಯ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಯಾವುದೇ ಅಹಿತಕರ ಘಟನೆಯಾಗದಂತೆ ತಡೆಯಲು 99 ವೀಡಿಯೋ ಗ್ರಾಫರ್, 195 ವೀಕ್ಷಕರನ್ನು ಹಾಗೂ 499 ಪೊಲೀಸ್ ಸಿಬ್ಬಂದಿಯನ್ನು ಮತಗಟ್ಟೆಗಳಿಗೆ ನೇಮಿಸಲಾಗಿದೆ. ಮತಗಟ್ಟೆಗಳಿಗೆ 32 ಸೆಕ್ಟರ್ ಅಧಿಕಾರಿಗಳು, 37 ಬಸ್, 51ಜೀಪ್ ಹಾಗೂ 8 ಮಿನಿ ಬಸ್ ವಾಹನದ ವ್ಯವಸ್ಥೆ ಮಾಡಲಾಗಿದೆ. 24*7 ಕಂಟ್ರೋಲ್ ರೂಂ ಸ್ಥಾಪನೆ ಮಾಡಲಾಗಿದ್ದು, 08194-222176 ದೂರು ನೀಡಬಹುದು.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ವಿಧಾನ ಪರಿಷತ್ ಚುನಾವಣೆ: ಬಹಿರಂಗ ಪ್ರಚಾರಕ್ಕೆ ತೆರೆ : ಕ್ಷೇತ್ರದ ಮತದಾರರನ್ನು ಹೊರತುಪಡಿಸಿ, ಉಳಿದವರು ಕ್ಷೇತ್ರ ತೊರೆಯಲು ಸೂಚನೆ

2 ಡೋಸ್ ಲಸಿಕೆ ಪಡೆದಿದ್ದ ಬೆಂಗಳೂರು ವೈದ್ಯನಿಗೆ ಒಮಿಕ್ರಾನ್ : ಚೇತರಿಸಿಕೊಂಡ ಬಳಿಕವೂ ಪಾಸಿಟಿವ್..!