ಬಳ್ಳಾರಿ: ಪರಿಷತ್ ಚುನಾವಣಾ ದಿನಾಂಕ ಘೋಷಣೆಯಾಗಿದ್ದೆ ತಡ ಪಕ್ಷಗಳಲ್ಲಿ ಚುನಾವಣಾ ಪ್ರಕ್ರಿಯೆ ಜೋರಾಗಿದೆ. ಅದರ ಜೊತೆಗೆ ಟಿಕೆಟ್ ಪಡೆಯಬೇಕೆಂಬ ಆಕಾಂಕ್ಷಿಗಳ ಲಾಬಿಯೂ ಜೋರಾಗಿ ನಡೆಯುತ್ತಿದೆ. ಬಳ್ಳಾರಿಯಿಂದ ಕೈ ನಾಯಕರು ಟಿಕೆಟ್ ಗಾಗಿ ಹೈಕಮಾಂಡ್ ಮೊರೆ ಹೋಗಿದ್ದಾರೆ.
ಬಳ್ಳಾರಿಯಿಂದ ಟಿಕೆಟ್ ಗಾಗಕ ಮುಂಡರಗಿ ನಾಗರಾಜ್ ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ. ಇದೇ ವಿಚಾರಕ್ಕೆ ಮಾಜಿ ಸಚಿವ ಸಂತೋಷ್ ಲಾಡ್ ಹೈಕಮಾಂಡ್ ಭೇಟಿ ಮಾಡಿದ್ದಾರೆ ಎನ್ನಲಾಗಿದೆ. ಮಾಜಿ ಕೇಂದ್ರ ಸಚಿವ ಕೆ ಎಚ್ ಮುನಿಯಪ್ಪ ಸೇರಿದಂತೆ ಹಲವು ಎಡ ಮುಖಂಡರು ನೀಡಿರುವ ಶಿಫಾರಸ್ಸು ಪತ್ರದೊಂದಿಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿಯಾಗಿದ್ದಾರೆ.
ಈ ವೇಳೆ ಮುಂಡರಗಿ ನಾಗರಾಜ್ ಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲ ಬಳ್ಳಾರಿಯಿಂದ ಕಾಂಗ್ರೆಸ್ ನ ಮತ್ತೊಬ್ಬರಿಗೆ ಟಿಕೆಟ್ ನೀಡುವಂತೆ ಮತ್ತೊಂದು ಬಣ ಒತ್ತಾಯಿಸಿದೆಯಂತೆ. ಕೆ ಸಿ ಕೊಂಡಯ್ಯಗೆ ಟಿಕೆಟ್ ನೀಡಲು ಬೇರೆ ಬಣ ಒತ್ತಾಯಿಸಿದೆ. ಕೆ ಸಿ ಕೊಂಡಯ್ಯಗೆ ಮಲ್ಲಿಕಾರ್ಜುನ್ ಖರ್ಗೆ ಸಪೋರ್ಟ್ ಕೂಡ ಇದೆ. ಒಟ್ಟಾರೆ, ಬಳ್ಳಾರಿಯಲ್ಲಿ ಟಿಕೆಟ್ ಗಾಗಿ ಕೈ ನಾಯಕರ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಹೈಕಮಾಂಡ್ ಒಲವು ಯಾರ ಕಡೆಗೆ ಇದೆ ಅನ್ನೋದು ಟಿಕೆಟ್ ಘೋಷಣೆಯಾದ ಬಳಿಮ ತಿಳಿಯಲಿದೆ.