ಶಾಸಕರ ಸಂಬಳ ಶೇ.50ರಷ್ಟು ಹೆಚ್ಚಳವಾಗುವ ಸಾಧ್ಯತೆ..!

suddionenews
1 Min Read

ಶಾಸಕರಿಗೆ ಸರ್ಕಾರದಿಂದ ಈ ಬಜೆಟ್ ವೇಳೆ ಸಿಹಿ‌ ಸುದ್ದಿ ಸಿಗುವ ಸಾಧ್ಯತೆ ಇದೆ. ಶಾಸಕರ ಸಂಬಳ ಏರಿಕೆ ಈ ಬಾರಿ ಅರ್ಧಕ್ಕೆ ಅರ್ಧದಷ್ಟು ಹೆಚ್ಚಾಗಲಿರುವ ಸೂಚನೆ ಸಿಕ್ಕಿದೆ. ಅಂದ್ರೆ ಶೇಕಡ 50 ರಷ್ಟು ಸಂಬಳ ಜಾಸ್ತಿಯಾಗಲಿದೆ ಎನ್ನಲಾಗಿದೆ. ಇಂದಿನಿಂದ ಕಲಾಪ ಆರಂಭಗೊಂಡಿದೆ. ಈ ಕಲಾಪದ ವೇಳೆ ಶಾಸಕರ ಸಂಬಳದ ಬಗ್ಗೆ ಚರ್ಚೆಯಾಗಿದೆ.

ವಿಧಾನಸಭೆಯ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಈ ಸಂಬಂಧ ಮಹತ್ವದ ಚರ್ಚೆ ನಡೆದಿದೆ. ಕಳೆದ ಬಾರಿ ನಡೆದ ಅಧಿವೇಶನದ ವೇಳೆ ಶಾಸಕರ ಸಂಬಳ ಹೆಚ್ಚಿಸಬೇಕೆಂಬ ವಿಚಾರಕ್ಕೆ ಶಾಸಕ ಅರವಿಂದ್ ಬೆಲ್ಲದ್ ಗಮನ ಸೆಳೆದಿದ್ದರು. ಶಾಸಕರ ವೇತನ ಹೆಚ್ಚಳಕ್ಕೆ ಆಯೋಗ ರಚಿಸುವಂತೆಯೂ ಆಗ್ರಹಿಸಿದ್ದರು. ಇದೀಗ ಶಾಸಕರ ಸಂಬಳ ಏರಿಕೆಯಾಗುವ ಮುನ್ಸೂಚನೆ ಸಿಕ್ಕಿದೆ. ಇಂದು ನಡೆದ ಸಲಹಾ ಸಮಿತಿ ಸಭೆಯಲ್ಲಿ ಶಾಸಕರ ಸಂಬಳ ಶೇಕಡ 50 ರಷ್ಡು ಏರಿಕೆಯಾಗುವ ಬಗ್ಗೆ ಮಹತ್ವದ ಸಭೆ ನಡೆಸಿ, ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಇನ್ನು ಶಾಸಕರ ಸಂಬಳ ಏರಿಕೆ ಎಂಬ ವಿಚಾರ ಬಂದಾಗಲೇ ಜನಸಾಮಾನ್ಯರು ಆಕ್ರೋಶ ಹೊರ ಹಾಕಿದ್ದಾರೆ. ಮಹಿಳೆಯರಿಗೆ ಬಸ್ ಪ್ರಯಾಣ ಉಚಿತವೇ ಆದರೂ, ಪುರುಷರಿಗೆ ಟಿಕೆಟ್ ದರದ ಬಿಸಿ ಜಾಸ್ತಿಯಾದಂತಾಗಿದೆ. ಮೆಟ್ರೋ ದರವಂತು ಸಾಕು ಸಾಕಾಗಿ ಹೋಗಿದೆ. ಹಾಲಿನ ದರವನ್ನು ಏರಿಸುತ್ತಲೇ ಇದ್ದಾರೆ. ಹೀಗೆ ಪ್ರತಿದಿನ ಬಳಕೆ ಮಾಡಲೇಬೇಕಾದ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದು, ಜನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ ಶಾಸಕರ ಸಂಬಳ ಏರಿಕೆ ಮಾಡುತ್ತಿದ್ದಾರೆ ಎಂಬ ನಿರ್ಧಾರ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾನ್ಯ ಜನರು ನೊಂದು ಬೆಂದರು, ಶಾಸಕರು ಮಾತ್ರ ಆರಾಮಾಗಿ ಇರಲಿದ್ದಾರೆ ಎಂದು ಕೋಪ ಹೊರ ಹಾಕುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *