ಬೆಂಗಳೂರು: ವಿಧಾನಸಭೆಯಲ್ಲಿ ವಿದಾಯದ ಭಾಷಣದಲ್ಲಿ ಎಲ್ಲರೂ ರಾಜಕಾರಣ ದ್ವೇಷ ಮರೆತು, ಹೊಗಳಿಕೆಯ ಮಾತುಗಳನ್ನು ಹೇಳುತ್ತಿದ್ದಾರೆ. ಅದರಲ್ಲೂ ತಮ್ಮ ಪಕ್ಷದವರೇ ಆದರೂ ಸದಾ ಆರೋಪ ಮಾಡುತ್ತಿದ್ದ ಶಾಸಕ ಯತ್ನಾಳ್ ಇಂದು ಬಿಎಸ್ ಯಡಿಯೂರಪ್ಪ ಅವರನ್ನು ಹೊಗಳಿದ್ದಾರೆ.
ಸದನದಲ್ಲಿ ಮಾತನಾಡಿದ ಯತ್ನಾಳ್, ನಾನು, ಸ್ಪೀಕರ್, ಆರಗ ಜ್ಞಾನೇಂದ್ರ 94ರ ಬ್ಯಾಚಿನವರು. ಹೆಚ್ಡಿಡಿ, ಖರ್ಗೆ, ವಾಟಾಳ್ ನಾಗರಾಜ್ ಸೇರಿದಂತೆ ಹಲವರು ದೊಡ್ಡವರು. ಬಿಎಸ್ ಯಡಿಯೂರಪ್ಪ ಅವರು ನಮ್ಮನ್ನು ಮುನ್ನಡೆಸುತ್ತಿದ್ದರು. ಸುಮ್ಮನೆ ಕುಳಿತುಕೊಳ್ಳಿ ಎಂದು ನಮ್ಮನ್ನು ಗದರುತ್ತಿದ್ದರು. ಅಭಿವೃದ್ಧಿ ವಿಚಾರದಲ್ಲಿ ಅನ್ಯಾಯವಾದಾಗ ಧ್ವನಿ ಎತ್ತಿದ್ದೇನೆ. ಇಲ್ಲಿಯೂ ಅನ್ಯಾಯವಾದಾಗ ಮಾತನಾಡಲು ಅವಕಾಶ ನೀಡಿದ್ದೀರಿ.
ಬಿಎಸ್ವೈ ಜೊತೆಗೆ ಏನೇ ವೈಷಮ್ಯವಿರಬಹುದು, ಆದರೆ ಅವರು ನಮ್ಮ ನಾಯಕರು. ರಾಜ್ಯದಲ್ಲಿ ಪಕ್ಷ ಕಟ್ಟಿದ್ದು ಬಿಎಸ್ ಯಡಿಯೂರಪ್ಪ ಅವರು, ಅನಂತ್ ಕುಮಾರ್ ಅವರು. ಪಕ್ಷ ಕಟ್ಟಿ ಕೊನೆಯವರೆಗೂ ಉಳಿದವರು ಯಡಿಯೂರಪ್ಪ ಅವರು. ಬಿಎಸ್ವೈ ಅವರೂ ನನ್ನನ್ನು ಮಂತ್ರಿ ಮಾಡಲಿಲ್ಲ. ಅದೇನೆ ಇರಲಿ ಬಿಎಸ್ ಯಡಿಯೂರಪ್ಪ ಅವರು ನನ್ನನ್ನು ಬೆಳೆಸಿದರೂ ಎಂದಿದ್ದಾರೆ.