ಸುದ್ದಿಒನ್, ಚಿತ್ರದುರ್ಗ, ಆ.05 : ಹಾಸ್ಟೆಲ್ ವಾರ್ಡನ್ ನನ್ನು ರೂಂಗೆ ಹಾಕ್ಕೊಂಡು ಬಾರ್ಸಿ ನಾನಿರ್ತೀನಿ, ಯೋಚನೆನೇ ಮಾಡ್ಬೇಡಿ, ಹುಳ ಪಳ ಇರೋ ಆಹಾರ ನೀಡಿದ್ರೆ ಬಾರ್ಸಿ, ಇದ್ಯಾಕೋ ಅತಿಯಾಯ್ತು, ಎನ್ನುವ ವಿಡಿಯೋ ಇದೀಗ ಬಾರೀ ವೈರಲ್ ಆಗಿದೆ.
ಹಾಸ್ಟೆಲ್ ವಾರ್ಡನ್ ನನ್ನು ರೂಂಗೆ ಹಾಕ್ಕೊಂಡು ಬಾರ್ಸಿ : ಬಾರೀ ವೈರಲ್ ಆಗುತ್ತಿದೆ ಶಾಸಕ ವೀರೇಂದ್ರ ಅವರ ಹೇಳಿಕೆ#chitradurga #ಚಿತ್ರದುರ್ಗ pic.twitter.com/j4tsqpyDqu
— suddione-kannada News (@suddione) August 5, 2023
ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಕಾನೂನು ಮತ್ತು ಬಿಇಡಿ ಕಾಲೇಜು ವಿದ್ಯಾರ್ಥಿಗಳು ಹಾಸ್ಟೆಲ್ ನಲ್ಲಿ ಉತ್ತಮ ಗುಣಮಟ್ಟದ ಊಟ ನೀಡುತ್ತಿಲ್ಲ ಎಂದು ಪ್ರತಿಭಟನೆ ನಡೆಸಿದ್ದಾರೆ. ಅಡುಗೆಯಲ್ಲಿ ಕೊಳೆತ ತರಕಾರಿ, ಹುಳಗಳಿರುವ ಅಡುಗೆಯನ್ನು ಹಾಕಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿ ಪ್ರತಿಭಟನೆ ನಡೆಸಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂದು ಶಾಸಕ ಕೆ.ಸಿ ವೀರೇಂದ್ರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದ ಹಾಸ್ಟೆಲ್ ಗೆ ತೆರಳಿ ಅಹವಾಲು ಆಲಿಸಿದ್ದಾರೆ. ಇದೇ ವೇಳೆ ವೀರೇಂದ್ರ ಅವರು ವಾರ್ಡನ್ ಗೆ ನೀಡಿರುವ ಈ ಎಚ್ಚರಿಕೆ ಸಂದೇಶ ಎಲ್ಲೆಡೆ ವೈರಲ್ ಆಗಿದೆ.

ವಾರ್ಡನ್ ಗೆ ಬಾರಿಸಿದರೆ ಮಾತ್ರ ಪರಿಸ್ಥಿತಿ ಸುಧಾರಿಸುವುದು. ಇದು ಅತಿಯಾಗುತ್ತಿದೆ ಯಾಕೋ ! ಯಾರಿಗೂ ಹೆದರಬೇಡಿ. ನಾನಿದ್ದೇನೆ. ಈ ರೀತಿ ಮಾಡದೆ ಇದ್ದಲ್ಲಿ ಪರಿಸ್ಥಿತಿ ಅರ್ಥವಾಗುವುದಿಲ್ಲ ಎಂದಿದ್ದಾರೆ.
ಶಾಸಕ ವೀರೇಂದ್ರ ಪಪ್ಪಿ ಹಾಸ್ಟೆಲ್ ವಿದ್ಯಾರ್ಥಿಗಳ ಜೊತೆಗೆ ಮಾತುಕತೆ ನಡೆಸಿದ್ದೆಲ್ಲವನ್ನು ವಿಡಿಯೋ ಮಾಡಲಾಗಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.


















