Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿನ್ನದ ಗಣಿಗಾರಿಕೆ ಪುನರಾರಂಭಿಸಲು ಕೇಂದ್ರ ಸಚಿವರಿಗೆ ಶಾಸಕ ವೀರೇಂದ್ರ ಪಪ್ಪಿ ಮನವಿ

Facebook
Twitter
Telegram
WhatsApp

 

ಚಿತ್ರದುರ್ಗ. ಡಿ.24 : ಚಿತ್ರದುರ್ಗ ತಾಲ್ಲೂಕು ಇಂಗಳದಾಳಿನಿಂದ ಈ ಹಿಂದೆ ಕೈಗೊಳ್ಳಲಾಗುತ್ತಿದ್ದ ಚಿನ್ನದ ಗಣಿಗಾರಿಕೆ ಸ್ಥಗಿತಗೊಂಡಿದ್ದು, ಇದನ್ನು ಪುನರಾರಂಭಿಸುವಂತೆ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆಗಳ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದ್ದು, ಇದಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಿದೆ.

ಈ ಕುರಿತಂತೆ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಕಳೆದ ಸೆಪ್ಟಂಬರ್ 09 ರಂದು ಮನವಿ ಪತ್ರ ಸಲ್ಲಿಸಿದ್ದರು.  1886 ರಲ್ಲಿ ಇಂಗಳದಾಳಿನಲ್ಲಿ ತಾಮ್ರದ ಗಣಿಗಾರಿಕೆ ಪ್ರಾರಂಭವಾಗಿತ್ತು, ಬಳಿಕ ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ಅವರು ಕೈಗೊಂಡ ಸರ್ವೆ ಬಳಿಕ ಇಂಗಳದಾಳು, ಅಜ್ಜನಹಳ್ಳಿ ಮತ್ತು ಜಿ.ಆರ್. ಹಳ್ಳಿ ಸುತ್ತಮುತ್ತ ಚಿನ್ನದ ನಿಕ್ಷೇಪವಿರುವುದನ್ನು ಗುರುತಿಸಿತ್ತು.

1972 ರಲ್ಲಿ ಇಂಗಳದಾಳು ತಾಮ್ರದ ಘಟಕ ಪ್ರಾರಂಭಗೊಂಡು, ಬಳಿಕ ಇದನ್ನು ಹಟ್ಟಿ ಚಿನ್ನದ ಗಣಿಯೊಂದಿಗೆ ವಿಲೀನಗೊಳಿಸಲಾಗಿತ್ತು.  1994 ರಲ್ಲಿ ಅಜ್ಜನಹಳ್ಳಿ ಮತ್ತು ಜಿ.ಆರ್. ಹಳ್ಳಿ ಸುತ್ತಮುತ್ತ ಚಿನ್ನದ ನಿಕ್ಷೇಪ ಇರುವುದನ್ನು ಖಚಿತಪಡಿಸಿಕೊಂಡು, ಈ ಭಾಗದಲ್ಲಿ ಹಟ್ಟಿ ಚಿನ್ನದ ಗಣಿಯ ಸಹಯೋಗದಲ್ಲಿ 2002 ರವರೆಗೂ ಗಣಿಗಾರಿಕೆ ನಡೆಸಲಾಗಿತ್ತು.  ಗಣಿ ತಜ್ಞರು ಮತ್ತು ಭೂವಿಜ್ಞಾನಿಗಳು ಅಜ್ಜನಹಳ್ಳಿ ಮತ್ತು ಜಿ.ಆರ್. ಹಳ್ಳಿ ಸುತ್ತಮುತ್ತ ಉತ್ತಮ ಪ್ರಮಾಣದಲ್ಲಿ ಚಿನ್ನದ ನಿಕ್ಷೇಪವಿದ್ದು, ಚಿನ್ನದ ಗಣಿಗಾರಿಕೆಗೆ ಸೂಕ್ತವಾಗಿದೆ ಎಂಬುದಾಗಿ ತಿಳಿಸಿದ್ದು, ಈ ಕುರಿತಂತೆ ಸಂಬಂಧಪಟ್ಟವರಿಂದ ಮತ್ತೊಮ್ಮೆ ಪರಿಶೀಲನೆ ನಡೆಸಿ, ಚಿತ್ರದುರ್ಗದ ಚಿನ್ನದ ಗಣಿಗಾರಿಕೆ ಘಟಕವನ್ನು ಪುನರಾರಂಭಿಸಲು ಕ್ರಮ ಕೈಗೊಳ್ಳಬೇಕು ಎಂಬುದಾಗಿ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರು ಕೇಂದ್ರ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದರು.

ಇದಕ್ಕೆ ಸ್ಪಂದಿಸಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು, ಈ ಕುರಿತಂತೆ ಅಗತ್ಯ ಕ್ರಮ ಕೈಗೊಳ್ಳಲು ಕೇಂದ್ರ ಕಲ್ಲಿದ್ದಲು ಮತ್ತು ಗಣಿಗಾರಿಕೆ ಸಚಿವರಿಗೆ ಪತ್ರ ಬರೆದು ವಿನಂತಿಸಿಕೊಂಡಿದ್ದರು.  ಇದೀಗ ಕೇಂದ್ರ ಕಲ್ಲಿದ್ದಲು ಮತ್ತು ಗಣಿಗಾರಿಕೆ ಸಚಿವ ಜಿ. ಕಿಶನ್ ರೆಡ್ಡಿ ಅವರು ಕೂಡ ಸ್ಪಂದಿಸಿದ್ದು, ಚಿತ್ರದುರ್ಗ ಚಿನ್ನದ ಗಣಿಗಾರಿಕೆ ಘಟಕ ಪುನರಾರಂಭಿಸಲು ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಚಿತ್ರದುರ್ಗ ಚಿನ್ನದ ಗಣಿಗಾರಿಕೆ ಪುನರಾರಂಭಕ್ಕೆ ಚಿತ್ರದುರ್ಗ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರು ಸಲ್ಲಿಸಿರುವ ಮನವಿಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮದಕರಿಪುರ : ಊರಿಗೆ ಊರೇ ಖಾಲಿ…!

ಸುದ್ದಿಒನ್ ವಿಶೇಷ ವರದಿ ಚಿತ್ರದುರ್ಗ, ಡಿಸೆಂಬರ್. 25 : ದುರ್ಗದಿಂದ ಕೂಗಳತೆಯ ದೂರದಲ್ಲಿರುವ ಮದಕರಿಪುರ ಗ್ರಾಮ ಮಂಗಳವಾರ ಭಣಗುಡುತ್ತಿತ್ತು. ಎಲ್ಲಾ ಮನೆಗಳಿಗೂ ಬೀಗ ಹಾಕಲಾಗಿತ್ತು. ದೇವಸ್ಥಾನಗಳಲ್ಲಿ ದೇವರ ಮೂರ್ತಿಗಳು ಕೂಡಾ ಇರಲಿಲ್ಲ. ಊರಿನ ಯಾವುದೇ

ಈ ರಾಶಿಯ ಪ್ರೇಮಿಗಳು ಮದುವೆಯಾಗಲು ಕುಟುಂಬದವರನ್ನು ಒಪ್ಪಿಸಿ

ಈ ರಾಶಿಯ ಪ್ರೇಮಿಗಳು ಮದುವೆಯಾಗಲು ಕುಟುಂಬದವರನ್ನು ಒಪ್ಪಿಸಿ, ಈ ಪಂಚ ರಾಶಿಗಳ ಮದುವೆ ವಿಳಂಬದಿಂದ ಶುರುವಾಯಿತು ಟೆನ್ಷನ್, ಬುಧವಾರ- ರಾಶಿ ಭವಿಷ್ಯ ಡಿಸೆಂಬರ್-25,2024 ಸೂರ್ಯೋದಯ: 06:47, ಸೂರ್ಯಾಸ್ತ : 05:45 ಶಾಲಿವಾಹನ ಶಕೆ -1946

ಚಳ್ಳಕೆರೆ | ಒತ್ತುವರಿ ತೆರವುಗೊಳಿಸಿ ರಸ್ತೆ ನಿರ್ಮಾಣ ಕಾರ್ಯ ಆರಂಭ : ತಹಸೀಲ್ದಾರ್ ರೇಹಾನ್ ಪಾಷಾ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳೆಗೆರೆ, ಚಳ್ಳಕೆರೆ, ಮೊ : 84314 13188 ಸುದ್ದಿಒನ್, ಚಳ್ಳಕೆರೆ, ಡಿಸೆಂಬರ್. 24 : ಚಳ್ಳಕೆರೆ ನಗರದ ಬಳ್ಳಾರಿ ರಸ್ತೆ ಮಾರ್ಗದಲ್ಲಿ ನಿರಾಶ್ರಿತ ನೂರಾರು ಕುಟುಂಬಗಳಿಗೆ ಪ್ರತ್ಯೇಕವಾಗಿ

error: Content is protected !!