ಹುಬ್ಬಳ್ಳಿ: ಈ ಸಮಾಜಕ್ಕೆ ನಮ್ಮ ಜೀವನವನ್ನೇ ಕೊಡ್ತೀವಿ ಅಂತ ಹೇಳಿದ್ದೀವಿ. ಮೊದಲಿನಿಂದಾನೂ ನಮ್ಮ ಕುಟುಂಬ ಯೋಚನೆ ಮಾಡುವುದೇ ಹೀಗೆ. ಸಮಾಜ ಅಭಿವೃದ್ಧಿ ಆಗಬೇಕು. ನಮ್ಮ ಮಕ್ಕಳು ವಿದ್ಯಾವಂತರಾಗಬೇಕು. ಅವರಿಗೂ ಎಲ್ಲಾ ಅವಕಾಶಗಳು ಬರಬೇಕು ಅಲ್ವಾ. ಇವತ್ತೇನು ಲಿಂಗಾಯತ ಒಳಪಂಗಡದಲ್ಲಿ ಅನೇಕರು ಮೀಸಲಾತಿಯನ್ನ ಪಡೆದಿದ್ದಾರೆ. ನಮ್ಮ ಸಮಾಜಕ್ಕಿಲ್ಲ ಮೀಸಲಾತಿ ಅನ್ನೋದೆ ನಮ್ಮ ಕೂಗು. ನಮ್ಮ ಸಮಾಜ ಕೂಡ ಮುಂದೆ ಬರಬೇಕು ಎಂಬ ಉದ್ದೇಶದಿಂದ ನಾವೂ ಅವರ ಜೊತೆಗೆ ಸಾಥ್ ಕೊಟ್ಟಿದ್ವಿ. ಅದಕ್ಕೆ ಪರ್ಯಾಯ ವ್ಯವಸ್ಥೆಯನ್ನ ಮಾಡಿಕೊಂಡಿದ್ದೀವಿ ಎಂದು ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟದ ಬಗ್ಗೆ ಮಾತನಾಡಿದ್ದಾರೆ.
ನಾನು ನಿನ್ನ ಮೂಲಕ ನಮ್ಮ ಅಗ್ರಗಣ್ಯ ನಾಯಕರಿಗೆ, ಸ್ವಾಮೀಜಿಯವರಿಗೆ ಒಂದು ಸವಾಲನ್ನು ಹಾಕುವುದಕ್ಕೆ ಇಷ್ಟಪಡ್ತೀನಿ. ಇವತ್ತು 2D ಅಂತ ಮಾತೆತ್ತಿದ್ರೆ ಹೇಳ್ತೀರಿ. ಸರ್ಕಾರ 2D ಕೊಡ್ತು ಅಂತ ಅಗ್ರಗಣ್ಯ ನಾಯಕರು ಮಾತಾಡ್ತಾ ಇದ್ದಾರಲ್ವಾ. ನಮ್ಮ ಮಕ್ಕಳಿಗೆ ಇವತ್ತೆ ಆ 2D ಸರ್ಟಿಫಿಕೇಟ್ ಕೊಡಿಸಬೇಕು. 2D ಬೇಕಾ 2A ಬೇಕಾ..? 2A ಕೇಳಿದ್ದು ಅವರಲ್ಲ ಎಂಬುದನ್ನ ಸ್ಪಷ್ಟಪಡಿಸಿದ್ದಾರೆ. ಮೂರು ವರ್ಷ ಹೋರಾಟದ ನಂತರ, ಯಾರೂ ಅಗ್ರಗಣ್ಯ ನಾಯಕರು 2D ಬೇಜು ಅಂತ ಹೇಳ್ತಾ ಇದ್ದಾರೆ. ಮೊದಲು ಸ್ಪಷ್ಟ ಪಡಿಸಲಿ 2A ಬೇಕಾ, 2D ಬೇಕಾ ಎಂಬುದನ್ನ. ನಾನು ಕೂಡ ಹೋರಾಟ ಮಾಡಿದೆ. ಆದರೆ ಗೊಂದಲ ಆಗಿ ಹೋಗಿದ್ದೀನಿ.
ಮುಖ್ಯಮಂತ್ರಿಗಳು ಇರುವ ತನಕ ಮೀಸಲಾತಿ ಕೇಳಲ್ಲ ಅಂತ ಮಾಧ್ಯಮದಲ್ಲಿ ಹೇಳಿದ್ರು. ಅವರು ಮಾಡಿಸಿದ್ದಾರೆ ಅಂತ ಆರೋಪ. ಒಬ್ಬ ಮುಖ್ಯಮಂತ್ರಿಗಳು ಇಂಥ ಚಿಲ್ಲರೆ ಕೆಲಸ ಮಾಡಿಸ್ತಾರಾ..? ಇವರ ನಾಯಕರಲ್ಲಿ ಚಿಲ್ಲರೆ ಬುದ್ದಿ ಇರಬಹುದು ಆದರೆ ನಮ್ಮ ನಾಯಕರಲ್ಲಿ ಅದನ್ನ ತಂದಿಲ್ಲ. ನಮ್ಮ ಸಮುದಾಯದ ಮೀಸಲಾತಿಗಾಗಿ ನಿರಂತರ ಹೋರಾಟ ಇದೆ. ಮುಖ್ಯಮಂತ್ರಿಗಳ ಬಳಿ ಅನೇಕ ಸಲ ಹೋಗಿದ್ದೇವೆ ಎಂದು ಸ್ವಾಮೀಜಿಗೆ ತಿರುಗೇಟು ಕೊಟ್ಟಿದ್ದಾರೆ.
