Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ರೇಣುಕಾ ಸ್ವಾಮಿ ಮನೆಗೆ ಶಾಸಕ ವೀರೇಂದ್ರ ಭೇಟಿ : ಸರ್ಕಾರದಿಂದ ಸೂಕ್ತ ಪರಿಹಾರದ ಭರವಸೆ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಜೂ.15 : ತಪ್ಪು ಯಾರೇ ಮಾಡಿದರು ರಕ್ಷಿಸುವ ಮಾತೇ ಇಲ್ಲ. ಈ ನೆಲದ ಕಾನೂನು ಎಲ್ಲರಿಗೂ ಸಮಾನವಾಗಿದೆ. ತನಿಖೆ ಉತ್ತಮವಾಗಿ ನಡೆಯುತ್ತಿದೆ. ಇದರ ಬಗ್ಗೆ ಯಾವುದೇ ಅನುಮಾನ ಬೇಡ’ ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ತಿಳಿಸಿದರು.

ನಟ ದರ್ಶನ್ ಮತ್ತು ಆತನ ಗ್ಯಾಂಗ್‍ನಿಂದ ಹತ್ಯೆಯಾದ ರೇಣುಕಾಸ್ವಾಮಿ ವಿಆರ್‍ಎಸ್ ಬಡಾವಣೆಯ ನಿವಾಸಕ್ಕೆ ಶನಿವಾರ ಭೇಟಿ ಮಾಡಿದ ಶಾಸಕ ವಿರೇಂದ್ರ ಪಪ್ಪಿ ತಂದೆ, ತಾಯಿ, ಪತ್ನಿಗೆ ಸಾಂತ್ವನ ಹೇಳಿದ ನಮತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇಣುಕಾ ಸ್ವಾಮಿಯ ಕೊಲೆಯ ಸಂಗತಿ ತಿಳಿದು ಮನಸ್ಸಿಗೆ ತುಂಬಾ ನೋವಾಯಿತು. ಕುಟುಂಬದವರಿಗೆ ಸಾಂತ್ವನ ಹೇಳಿ ವೈಯಕ್ತಿಕ ಸಹಾಯ ಮಾಡಿದ್ದೇನೆ. ಶಿವಗಣಾರಾಧನೆ ಕಾರ್ಯ ಮುಗಿದ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕುಟುಂಬಕ್ಕೆ ಭೇಟಿ ಮಾಡಿಸುವ ಕಾರ್ಯ ಮಾಡುತ್ತೇನೆ’ ಎಂದರು.

`ಸರ್ಕಾರದಿಂದ ಸೂಕ್ತ ಪರಿಹಾರ ಹಾಗೂ ರೇಣುಕಾಸ್ವಾಮಿ ಪತ್ನಿಗೆ ಸರ್ಕಾರಿ ಉದ್ಯೋಗ ಕಲ್ಪಿಸುವ ಕುರಿತು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಜತೆ ಚರ್ಚೆ ನಡೆಸಲಾಗುವುದು. ಇಡೀ ಕುಟುಂಬದ ಜತೆ ನಾವಿದ್ದೇವೆ’ ಎಂದು ತಿಳಿಸಿದರು.

`ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನ ಜೀವ ತೆಗೆಯುವ ಮಟ್ಟಕ್ಕೆ ಹೋಗಬಾರದು. ಇಂತಹ ಪ್ರಯತ್ನ ಯಾರು ಮಾಡಬಾರದು. ಜನನಾಯಕರು, ಅಭಿಮಾನಿ ವರ್ಗ ಹೊಂದಿರುವವರು ಆದರ್ಶರಾಗಿರಬೇಕು. ಇಂತಹ ಹೀನ ಕೆಲಸ ಮಾಡಿದಾಗ ಬೇಲಿಯೇ ಎದ್ದು ಹೊಲ ಮೇದಂತೆ ಆಗುತ್ತದೆ’ ಎಂದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರು ಎಲ್ಲಾ ಹೊಂದಿದ್ದು ಮನಶಾಂತಿ ಇಲ್ಲ

ಈ ರಾಶಿಯವರು ಎಲ್ಲಾ ಹೊಂದಿದ್ದು ಮನಶಾಂತಿ ಇಲ್ಲ ಭಾನುವಾರ- ರಾಶಿ ಭವಿಷ್ಯ ಜೂನ್-23,2024 ಸೂರ್ಯೋದಯ: 05:47, ಸೂರ್ಯಾಸ್ತ : 06:49 ಶಾಲಿವಾಹನ ಶಕೆ1946, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2080, ಗ್ರೀಷ್ಮ ಋತು,

ಚಿತ್ರದುರ್ಗ | ಲಾರಿಗೆ ಬೈಕ್ ಡಿಕ್ಕಿ : ಓರ್ವ ಸಾವು…!

    ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಿತ್ರದುರ್ಗ, ಜೂನ್.22 :  ಚಲಿಸುತ್ತಿದ್ದ ಲಾರಿಯನ್ನು ಓವರ್ ಟೆಕ್ ಮಾಡಲು ಹೋಗಿ ಮೈನ್ಸ್ ಲಾರಿಗೆ ಬೈಕ್

ಬಂಧನದ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ: ಅಭಿಮಾನಿಗಳಿಗೆ ದರ್ಶನ್ ಹೇಳಿದ್ದೇನು..?

    ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ದರ್ಶನ್ ಅಂಡ್ ಗ್ಯಾಂಗ್ ಸುಲಭವಾಗಿ ಟ್ರ್ಯಾಕ್ ಆಗಿದೆ. ಕಳೆದ 12 ದಿನದಿಂದ ಪೊಲೀಸ್ ಕಸ್ಟಡಿಯಲ್ಲಿದ್ದರು. ಹೈಪ್ರೊಫೈಲ್ ಕೇಸ್ ಆಗಿದ್ದರಿಂದ ಸರ್ಕಾರ ಕೂಡ ಯಾವುದೇ ವಿಚಾರಗಳಿಗೂ ಗಮನ

error: Content is protected !!