ಚಿತ್ರದುರ್ಗ : ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಕ್ಷಾಂತರ ಪರ್ವ ಆರಂಭವಾಗಿದೆ. ಮೊಳಕಾಲ್ಮೂರು ಕ್ಷೇತ್ರದ ಮಾಜಿ ಶಾಸಕ ತಿಪ್ಪೇಸ್ವಾಮಿ ಕಾಂಗ್ರೆಸ್ ಬಿಟ್ಟು ಇಂದು ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ. ಮುಂದಿನ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಸೇರಿದ ಬಳಿಕ ಮಾತನಾಡಿದ ತಿಪ್ಪೇಸ್ವಾಮಿ, ಸಚಿವ ಶ್ರೀರಾಮುಲು ಮತ್ತು ನಾನು ಅಣ್ಣ-ತಮ್ಮಂದಿರಿದ್ದರಂತೆ. 2013ರಲ್ಲಿ ಬಿಎಸ್ ಆರ್ ಪಕ್ಷದಿಂದ ಗೆದ್ದು ಬಿಜೆಪಿ ಸೇರಿದ್ದೆ. ಆಗ ಮೊಳಕಾಲ್ಮೂರು ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಬಲವಾಗಿ ಕಟ್ಟಿದ್ದೆ. 2018ರಲ್ಲಿ ಮೊಣಕಾಲ್ಮೂರಿನಲ್ಲಿ ಶ್ರೀರಾಮುಲು ಬಿಜೆಪಿಯಿಂದ ಸ್ಪರ್ಧಿಸಿದರು. ಅಂದು ಗೆಲುವು ಕಂಡರು.
ಶ್ರೀರಾಮುಲು ನಾನು ಮೊದಲಿನಿಂದಾನು ಅಣ್ಣ ತಮ್ಮಂದಿರಂತೆ ಇದ್ದೆವು. ಆದರೆ ಯಾವುದೋ ಕಾರಣಕ್ಕೆ ಮನಸ್ತಾಪ ಮಾಡಿಕೊಂಡು ದೂರಾಗಿದ್ದೆವು. ಶ್ರೀರಾಮುಲು ನನ್ನ ಬಳಿ ಬರಬೇಕಿತ್ತು, ನಾನು ಸೈಲೆಂಟ್ ಆಗಿರಬೇಕಿತ್ತು. ಸದ್ಯ ಈಗ ಜಗಳ ಅಂತ್ಯವಾಗಿದೆ. ಎಲ್ಲವೂ ಸರಿಯಾಗಿದೆ ಎಂದಿದ್ದಾರೆ.