in ,

ತುರುವನೂರಿನಲ್ಲಿ ಕೌಶಲ್ಯ ಸಂವಹನ ಕೇಂದ್ರ ಕಟ್ಟಡದ ಶಂಕುಸ್ಥಾಪನೆ ಭೂಮಿ ಪೂಜೆ ನೇರವೇರಿಸಿದ ಶಾಸಕ ಟಿ.ರಘುಮೂರ್ತಿ

suddione whatsapp group join

 

ಚಿತ್ರದುರ್ಗ, (ಫೆ.27): ಕೌಶಲ್ಯ ಸಂವಹನ ತರಬೇತಿ ಕೇಂದ್ರ ಸ್ಥಾಪನೆಯಿಂದ  ಸಾವಿರಾರು ಯುವಕರಿಗೆ ಸ್ವಯಂ ಉದ್ಯೋಗ ಕಟ್ಟಿಕೊಳ್ಳಲು  ಸಹಕಾರಿಯಾಗಲಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ತಾಲೂಕಿನ ತುರುವನೂರು ಹೋಬಳಿಯ ತುರುವನೂರು ಗ್ರಾಮದಲ್ಲಿ ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ವತಿಯಿಂದ ಹಮ್ಮಿಕೊಂಡಿದ್ದ  ಕೌಶಲ್ಯ ಸಂವಹನ ಕೇಂದ್ರದ ಕಟ್ಟಡ  ಮತ್ತು ವಸತಿ ಕಾರ್ಯಗಾರದ ಕಟ್ಟಡ ಶಂಕುಸ್ಥಾಪನೆ  ಭೂಮಿ ಪೂಜೆ ನೇರವೇರಿಸಿ  ಮಾತನಾಡಿದರು.

ಸರ್ಕಾರದಿಂದ  ತುರುವನೂರು ಗ್ರಾಮದಲ್ಲಿ ಸುಮಾರು 60.00 ಲಕ್ಷ ರೂಪಾಯಿ ವೆಚ್ಚದಲ್ಲಿ  ವೃತ್ತಿ  ಕೌಶಲ್ಯ ಸಂಮೂಹನ ಕೇಂದ್ರದ ಕಟ್ಟಡ ನಿರ್ಮಾಣ ಮಾಡಲಾಗುತ್ತದೆ.ಇದರಿಂದ ಒಂದು ಬಾರಿಗೆ 30 ರಿಂದ 40 ಜನರಿಗೆ ತರಬೇತಿ ನೀಡುವುದರಿಂದ ಸ್ವಯಂ ಉದ್ಯೋಗ ಮಾಡಲು ಯುವಕ ಯುವತಿಯರಿಗೆ ಸಹಕಾರಿಯಾಗುತ್ತದೆ. ಚರ್ಮ ಕೈಗಾರಿಕೆಯಲ್ಲಿ ಅನೇಕ ವಸ್ತುಗಳನ್ನು ತಯಾರು ಮಾಡಬಹುದು. ತರಬೇತಿ ಪಡೆದ ನಂತರ  ಮನೆಯಲ್ಲಿ ಕಚ್ಚಾ ವಸ್ತುಗಳನ್ನು ಖರೀದಿ ಮಾಡಿ ವಸ್ತುಗಳನ್ನು ತಯಾರಿಸಬಹುದು.

ಪ್ರಸ್ತುತ ದಿನಗಳಲ್ಲಿ ಉತ್ತಮವಾದ ಚರ್ಮ ಕೈಗಾರಿಕೆ ವಸ್ತಗಳಿಗೆ ಬೇಡಿಕೆ ಇದೆ. ಸರ್ಕಾರ ಸಹಾಯಧನ ನೀಡುತ್ತಿದ್ದು ಅದನ್ನು ಸದುಪಯೋಗ ಮಾಡಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಬೇಕು. ಸರ್ಕಾರ ಎಲ್ಲಾರಿಗೂ ಸರ್ಕಾರಿ ಉದ್ಯೋಗ ನೀಡಲು ಆಗುವುದಿಲ್ಲ ಎಂದರು.

ಮಾಡನಾಯಕನಹಳ್ಳಿ ಗ್ರಾಮದಲ್ಲಿ ಸುಮಾರು 6 ಕೋಟಿ ವೆಚ್ಚದಲ್ಲಿ  ಚರ್ಮ ಕೈಗಾರಿಕೆ ವೃತ್ತಿ ನಿರ್ವಹಿಸುವವರಿಗೆ 60 ವಸತಿ ಗೃಹ  ಮತ್ತುನಿರ್ಮಾಗಾರ ಕಟ್ಟಡ  ನಿರ್ಮಾಣ ಮಾಡಲಾಗುತ್ತದೆ.  ಚರ್ಮ ಕೈಗಾರಿಕೆ ವೃತ್ತಿ ನಿರ್ವಹಿಸುವವರಿಗೆ ಸರ್ಕಾರದಿಂದ 60 ವಸತಿ ಗೃಹ ಸೇರಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಅದಕ್ಕೆ ಅಗತ್ಯವಾಗಿ ಬೇಕಾದ ಎಲ್ಲಾ ಸಹಕಾರ ನೀಡಲಾಗುತ್ತದೆ. ಗುಣಮಟ್ಟದ ಮನೆಗಳ ನಿರ್ಮಾಣ ಮಾಡಬೇಕು.ನೀರಿನ ಸೌಲಭ್ಯ, ಹಂಚಿಕೆ ಸೇರಿ ಎಲ್ಲಾವನ್ನು ಸರ್ಕಾರದ  ಮಾನದಂಡ ಪ್ರಕಾರ ಮಾಡಲಾಗುತ್ತದೆ.

ನನ್ನ ಕ್ಷೇತ್ರದಲ್ಲಿ ಕೆಲಸಗಳು ಅಚ್ಚುಕಟ್ಟಾಗಿ ಆಗಬೇಕು. ಕಾಮಗಾರಿ ಬೇಗ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಗಂಗಾಧರ, ಮ್ಯಾನೇಜರ್ ರಾಮಾಂಜನೇಯಪ್ಪ, ಹಾಗೂ ಮಾಜಿ ಜಿ.ಪಂ.ಸದಸ್ಯ ಬಾಬುರೆಡ್ಡಿ, ಗ್ರಾಮ ಪಂಚಾಯತ್ ಅಧ್ಯಕ್ಷ ಬಸವರಾಜು , ಉಪಾಧ್ಯಕ್ಷರು, ಸದಸ್ಯರು ಹಾಗೂ ಮುಖಂಡರು ಕಾರ್ಯಕರ್ತರು ಮತ್ತು ಫಲಾನುಭವಿಗಳು ಉಪಸ್ಥಿತರಿದ್ದರು.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಪ್ಯಾರಾ ಅಥ್ಲೆಟಿಕ್ಸ್ ನಲ್ಲಿ ಚಿನ್ನ ಗೆದ್ದ ಚಿತ್ರದುರ್ಗ ಜಿಲ್ಲೆಯ ಗ್ರಾಮೀಣ ಪ್ರತಿಭೆ ರಾಧಾ

ಸೋಷಿಯಲ್ ಮೀಡಿಯಾದಲ್ಲಿ ನಂಬರ್ ಹಾಕಿದ್ದ ಡಿ ರೂಪಾ : ಕೋರ್ಟ್ ನಲ್ಲಿ ರೋಹಿಣಿ ಹೇಳಿದ್ದೇನು..?