ದಾವಣಗೆರೆ: ಮತದಾರರು ಅಲರ್ಟ್ ಆದ್ರೆ, ಕೊಂಚ ಬುದ್ಧಿವಂತಿಕೆಯಿಂದ ತಮ್ಮ ಜನಪ್ರತಿನಿಧಿಯನ್ನ ಆಯ್ಕೆ ಮಾಡಬೇಕು. ಆದ್ರೆ ಸಾಕಷ್ಟು ಸಲ ಮತದಾನಕ್ಕೂ ಮುನ್ನ ಹಣದ ಹೊಳೆ ಹರಿಸುತ್ತಾರೆ. ಮತದಾರ ಅಲರ್ಟ್ ಆಗಿರಬೇಕಷ್ಟೆ. ಇದೀಗ ಶಾಸಕ ರೇಣುಕಾಚಾರ್ಯ ಜನರಿಗೆ ನೇರವಾಗಿ ಹಣ ಆಮಿಷ ಒಡ್ಡುತ್ತಿದ್ದಾರೆ.
ನಾನು ನಿಮಗೆ 10 ಸಾವಿರ ನೀಡುತ್ತೇನೆ. ಹೀಗಾಗಿ ಮುಂದಿನ ಬಾರಿ ಚುನಾವಣೆಯಲ್ಲಿ ನನಗೆ ವೋಟು ಹಾಕಬೇಕೆಂದು ಹೊನ್ನಾಳಿ ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.
ಶಾಸಕ ರೇಣುಕಾಚಾರ್ಯ ಕೊರೊನಾ ಸಮಯದಲ್ಲಿ ಸಾಕಷ್ಟು ಜನ ಸೇವೆ ಮಾಡಿದ್ದಾರೆ. ಆಸ್ಪತ್ರೆಯ ಖರ್ಚು ವೆಚ್ಚ ನೋಡಿಕೊಂಡಿದ್ದಾರೆ. ಬಡ, ಮಧ್ಯಮ ವರ್ಗದ ಜನರಿಗೆ ಆಹಾರ ಸಾಮಾಗ್ರಿಗಳನ್ನು ನೀಡಿದ್ದಾರೆ. ಇದೀಗ ಜನರ ಬಳಿ, ಕೊರೊನಾ ಪರಿಹಾರವಾಗಿ ಸಿಎಂ 1 ಲಕ್ಷ ನೀಡುತ್ತಿದ್ದಾರೆ. ನಾನು 10 ಸಾವಿರ ಕೊಡ್ತೇನೆ. ಮುಂದಿನ ಚುನಾವಣೆಯಲ್ಲಿ ನನಗೆ ಮತ ಹಾಕಬೇಕು ಎಂದಿದ್ದಾರೆ.
ನನಗೆ ವೋಟು ಹಾಕಬೇಕು ಎಂದು ಆಣೆ ಪ್ರಮಾಣ ಮಾಡಿಸಿಕೊಂಡು ಜನರಿಗೆ ಹಣ ನೀಡಿದ್ದಾರೆ. ಅಷ್ಟೇ ಅಲ್ಲ ಹಣ ನೀಡುವುದರ ಜೊತೆಗೆ ನಿಮ್ಮ ಊರಿನಲ್ಲಿ ಹೋಗಿ ಎಲ್ಲರಿಗೂ ಹೇಳು ಎಂದಿದ್ದಾರೆ. ಹಣ ತೆಗೆದುಕೊಳ್ಳಲು ಜನ ಕೂಡ ಶಾಸಕ ರೇಣುಕಾಚಾರ್ಯ ಮನೆ ಮುಂದೆ ಜನ ಸಾಲು ಗಟ್ಟಿ ನಿಂತಿದ್ದರು.