ದಾವಣಗೆರೆ: ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ಹೊನ್ನಾಳಿಯಲ್ಲಿ ಹೋರಿ ಬೆದರಿಸುವ ಜಾತ್ರೆ ನಡೆದಿದೆ. ಈ ಸಂಬಂಧ ಮಾತನಾಡಿರುವ ಶಾಸಕ ಎಂ ಪಿ ರೇಣುಕಾಚಾರ್ಯ, ಇದಕ್ಕೆ ನಾನು ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.
ಹೊನ್ನಾಳಿ ಬಲಮುರಿ ಗ್ರಾಮದಲ್ಲಿ ನಡೆದ ಹೋರಿ ಸ್ಪರ್ಧೆಯಲ್ಲಿ ಲಕ್ಷಾಂತರ ಜನ ಸೇರಿದ್ದರು. ಈ ಘಟನೆಗೆ ಎಂಪಿ ರೇಣುಕಾಚಾರ್ಯ ಅವರು ಕೂಡ ವಿಷಾಧ ವ್ಯಕ್ತಪಡಿಸಿ, ಕ್ಷಮೆಯಾಚಿಸಿದ್ದಾರೆ. ಜನರನ್ನು ನೋಡಿ ನಾನೂ ಗಾಬರಿಯಾದೆ. ನನಗೂ ಮುಜುಗರವಾಯ್ತು. ಹೀಗಾಗಿ ಈ ವಿಷಯ ತಿಳಿದು ನಾಡಿನ ಸಮಸ್ತ ಜನತೆಗೆ ಕ್ಷಮೆಯಾಚಿಸುತ್ತಿದ್ದಿದ್ದೇನೆ.
ಈ ಕಾರ್ಯಕ್ರಮವನ್ನ ಕಳೆದ 20 ದಿನಗಳ ಹಿಂದೆಯೇ ಆಯೋಜನೆ ಮಾಡಿದ್ದು. ಕೊರೊನಾ ಇದ್ದ ಕಾರಣ ಈ ಜಾತ್ರೆಯನ್ನ ಮುಂದೂಡಬೇಕಿತ್ತು. ಶನಿವಾರ ಬೆಳಗ್ಗೆ ಯುವಕರು ಬಂದಿದ್ದರು. ಆಗಲೂ ಹೇಳಿದ್ದೇ ಈ ಕಾರ್ಯಕ್ರಮವನ್ನ ಮುಂದೂಡಿ ಎಂದು. ಜಾತ್ರೆ ನಡೆದರೆ ಮುಜುಗರವಾಗುತ್ತೆ ಎಂದು ಹೇಳಿದ್ದೆ. ಆದ್ರೆ ಯುವಕರು ಕೇಳಿಲ್ಲ.
ಡಿಕೆ ಶಿವಕುಮಾರ್ ಅಧಿಕಾರಕ್ಕೋಸ್ಕರ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ನಾನು ರಾಜಕೀಯಕ್ಕೋಸ್ಕರ ಜಾತ್ರೆಯಲ್ಲಿ ಪಾಲ್ಗೊಂಡಿರಲಿಲ್ಲ. ಡಿಕೆಶಿ ಅಣ್ಣ ನೀವೂ ಅಧಿಕಾರದಲ್ಲಿದ್ದಾಗ ನಮ್ಮ ಮೇಲೆ ಕೇಸ್ ಹಾಕಿದ್ರಿ. ಈಗ ನೀವೂ ಕೂಡ ನನ್ನ ಥರ ಕ್ಷಮೆ ಕೇಳಿ ಎಂದು ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ ಒತ್ತಾಯಿಸಿದ್ದಾರೆ.