ಬೆಂಗಳೂರು: ಸದ್ಯ ಬಿಜೆಪಿ ನಾಯಕರು ದಿ ಕಾಶ್ಮೀರ್ ಫೈಲ್ ಸಿನಿಮಾ ನೋಡೋದಕ್ಕೆ ಉತ್ತೇಜನ ನೀಡುತ್ತಿದ್ದಾರೆ. ಕೆಲವೊಂದು ಕಡೆ ಉಚಿತ ಪ್ರದರ್ಶನವನ್ನ ಏರ್ಪಡಿಸುತ್ತಿದ್ದಾರೆ. ಈ ವಿಚಾರವಾಗಿ ಶಾಸಕ ಪ್ರಿಯಾಂಕ ಖರ್ಗೆ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಕಿತಾಬ್ ಕೊಡಿ ಅಂದ್ರೆ ಬಿಜೆಪಿ ಸರ್ಕಾರ ಹಿಜಾಬ್ ವಿವಾದ ಮಾಡಿಕೊಂಡು ಕುಳಿತಿದೆ. ಮಕ್ಕಳ ಕೈನಲ್ಲಿ ಕೇಸರಿ ಶಾಲೂ ಕೊಡ್ತೀರಾ, ಕಾಶ್ಮೀರ್ ಫೈಲ್ ಸಿನಿಮಾ ನೋಡೋದಕ್ಕೆ ಹೇಳ್ತೀರಿ, ದಲಿತರ ಹಣವನ್ನು ಯಾಕೆ ನುಂಗುತ್ತಿದ್ದೀರಿ ಎಂದು ಆಕ್ರೋಶಗೊಂಡಿದ್ದಾರೆ.
ದಿ ಕಾಶ್ಮೀರಿ ಫೈಲ್ ಸಿನಿಮಾವನ್ನ ನೋಡೋದಕ್ಕೆ ಒಗ್ಗಟ್ಟಾಗಿ ಹೋಗುವ ಮಂತ್ರಿಗಳು ಮತ್ತು ಸರ್ಕಾರ ಒಗ್ಗಟ್ಅಗಿಯೇ ಭ್ರಷ್ಟಚಾರದಲ್ಲಿ ತೊಡಗಿದೆ. ಕಾಶ್ಮೀರಿ ಫೈಲ್ಸ್ ಬಗ್ಗೆ ಬಿಜೆಪಿ ನಾಯಕರೇ ಪ್ರಚಾರ ಮಾಡುತ್ತಿದ್ದಾರೆ. ಸಿಎಂ ಟ್ಯಾಕ್ಸ್ ಫ್ರೀ ಬೇರೆ ಮಾಡಿದ್ದಾರೆ. ಪ್ರಧಾನಿ ಮೋದಿ ಅವರು ಮೇ ಖಾವೂಂಗಾ ನಾ ಖಾನೇದೂಂಗಾ ಅಂತ ಹೇಳಿದ್ರು. ಆದ್ರೆ ಬಿಜೆಪಿಯ ಈಗಿನ ಸರ್ಕಾರ ಮೈಬೀ ಖಾವೂಂಗಾ, ಸಬ್ ಕೋ ಖಿಲಾವೂಂಗಾ ಎನ್ನುತ್ತಿದೆ.
ಕಾಶ್ಮೀರಿ ಫೈಲ್ಸ್ ಗೆ ಇಷ್ಟೊಂದು ಮಹತ್ವ ಕೊಡ್ತಾ ಇದ್ದಾರೆ. ಸ್ಪೀಕರ್ ಕೂಡ ಸಿನಿಮಾ ನೋಡೋದಕ್ಕೆ ಹೇಳಿದ್ರು. ಕಾಶ್ಮೀರಿ ಫೈಲ್ಸ್ ನೋಡುವ ಮೊದಲು, ಕರ್ನಾಟಕ ಫೈಲ್ ನೋಡಿ ಎಂದು ಶಾಸಕ ಪ್ರಿಯಾಂಕ ಖರ್ಗೆ ಬಿಜೆಪಿ ನಾಯಕರಿಗೆ ತಿರಗೇಟು ನೀಡಿದ್ದಾರೆ.