ಗುಜರಾತ್: ಡಿಸೆಂಬರ್ 1 ಮತ್ತು 5ಕ್ಕೆ ವಿಧಾನಸಭಾ ಚುನಾವಣೆ ನಿಗದಿಯಾಗಿದ್ದು, ಪಕ್ಷಾಂತರ ಪರ್ವ ಆರಂಭವಾಗಿದೆ. ಈ ಬಾರಿ ನಮ್ಮದೆ ಪಕ್ಷ ಬರಬೇಕು ಅಂತ ಬಿಜೆಪಿ, ಕಾಂಗ್ರೆಸ್ ಮತ್ತು ಎಎಪಿ ಓಡಾಡುತ್ತಿದೆ. ಇದೀಗ ಕಾಂಗ್ರೆಸ್ ಗೆ ದೊಡ್ಡ ಶಾಕ್ ನೀಡಿದ್ದು, ಬುಡಕಟ್ಟು ಜನಾಂಗದ ಪ್ರಭಾವಿ ನಾಯಕ ಇದೀಗ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ.
ಮೋಹನ್ ಸಿನ್ಹ್ ರಥ್ವಾ ಬಿಜೆಪಿ ಸೇರಿದ ಶಾಸಕ. ಇವರು ಸುಮಾರು 10 ಬಾರಿ ತಾವೂ ನಿಂತ ಕ್ಷೇತ್ರದಿಂದ ಶಾಸಕರಾಗಿದ್ದರು. ಛೋಟಾ ಮತ್ತು ಉದಯಪುರ ಪ್ರತಿನಿಧಿಸುತ್ತಿದ್ದ ನಾಯಕರಾಗಿದ್ದರು. ಆದ್ರೆ ಈ ಬಾರಿ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದೇ ಘೋಷಿಸಿದ್ದರು. ಮಗನನ್ನು ಸ್ಪರ್ಧೆಗೆ ಇಳಿಸಲಿದ್ದಾರೆ. ಬಿಜೆಪಿಯಿಂದ ಮಗನಿಗೆ ಟಿಕೆಟ್ ನೀಡುವ ವಿಶ್ವಾಸ ಸಿಕ್ಕ ಬಳಿಕ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದಾರೆ.
ಬಳಿಕ ಮಾತನಾಡಿದ ರಥ್ವಾ ಅವರು, ಬುಡಕಟ್ಟು ಸಮುದಾಯವಿರುವ ಪ್ರದೇಶದಲ್ಲಿ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಕೆಲಸಗಳನ್ನು ನೋಡಿ ನಾನು ಪ್ರಭಾವಿತನಾಗಿದ್ದೇನೆ. ಜೊತೆಗೆ ನನ್ನ ಮಗ ಕೂಡ ಬಿಜೆಪಿ ಸೇರಬೇಕು ಎಂದುಕೊಂಡಿದ್ದ ಇದೇ ಕಾರಣಕ್ಕಾಗಿ ನಾನು ಬಿಜೆಪಿ ಸೇರಿದ್ದೇನೆ ಎಂದಿದ್ದಾರೆ.