ಬೆಳಗಾವಿ: ಸಿದ್ದರಾಮಯ್ಯ ಮತ್ತು ಡಿಕೆಶಿ ಅವರ ಒಳ ಜಗಳದಿಂದಾಗಿ ಕಾಂಗ್ರೆಸ್ ನಿರ್ನಾಮವಾಗುತ್ತೆ ಎಂದು ನಳಿನ್ ಕುನಾರ್ ಕಟೀಲ್ ಹೇಳಿದ್ದರು. ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಕಟೀಲು ಸಾಹೇಬ್ರ ಪ್ರಶ್ನೆಗಳಿಗೆ ನಾನು ಉತ್ತರ ಕೊಡುವುದಿಲ್ಲ. ಆದರೆ ಒಂದು ಮಾತನ್ನು ಹೇಳ್ತೀನಿ, ಕರ್ನಾಟಕದ ಪ್ರತೊಯೊಬ್ಬರು ಅದು ಕಾಂಗ್ರೆಸ್ ಇರಲಿ, ಜೆಡಿಎಸ್ ಇರಲಿ, ಬಿಜೆಪಿಯವರಿರಲಿ. ನಾವೇನು ನಂಬಿದ್ದೀವಿ, ನಾವೇನು ನೋಡಿದ್ದೀವಿ ಎಂದರೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಆಗಲಿ, ಬಿಜೆಪಿ ಸಂಘಟನೆಯಾಗಲಿಕ್ಕೆ ಯಡಿಯೂರಪ್ಪನವರ ಪ್ರಾಮಾಣಿಕ ಪ್ರಯತ್ನ ಕಾರಣ ಎಂದಿದ್ದಾರೆ.
ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಿಂದ ಹೊರಗಡೆ ತೆಗೆದರು. ಲಿಂಗಾಯತ ಸಮಾಜ ಯಡಿಯೂರಪ್ಪ ನವರ ಜೊತೆಗಿದೆ, ಲಿಂಗಾಯತರು ಲಿಂಗಾಯತರು ಅಂತ ಹೇಳಿದ್ದರು. ಯಡಿಯೂರಪ್ಪ ಅಂದ್ರೆ ಬಿಜೆಪಿ, ಬಿಜೆಪಿ ಅಂದ್ರೆ ಯಡಿಯೂರಪ್ಪನವರು. ಅವರನ್ನು ಹೊರಗಡೆ ತೆಗೆದಿಟ್ಟರು. ಅವರ ಮಗನಿಗೆ ಮೊನ್ನೆ ಎಂಎಲ್ಸಿ ಟಿಕೆಟ್ ಕೂಡ ಕೊಟ್ಟಿಲ್ಲ.
ಹೀಗಾಗಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರ ವಿಚಾರ ಬಿಡಿ ಯಡಿಯೂರಪ್ಪ ಮತ್ತು ಅವರ ಕುಟುಂಬವನ್ನು ನಡೆಸಿಕೊಳ್ಳುವಂತದ್ದನ್ನು ಮೊದಲು ನೋಡಿ ಕಟೀಲ್ ಸಾಹೇಬ್ರೆ ಎಂದು ಹೇಳುತ್ತೇನೆ ಎಂದಿದ್ದಾರೆ.