Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

66 ನೇ ವರ್ಷದ ಪ್ರಸನ್ನ ಗಣಪತಿಯ ಮೆರವಣಿಗೆ ಮಹೋತ್ಸವಕ್ಕೆ ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಚಾಲನೆ

Facebook
Twitter
Telegram
WhatsApp

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.29 : ನಗರದ ಆನೆಬಾಗಿಲು ಬಳಿಯಿರುವ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಟಾಪಿಸಲಾಗಿರುವ 66 ನೇ ವರ್ಷದ ಪ್ರಸನ್ನ ಗಣಪತಿಯ ಮೆರವಣಿಗೆ ಮಹೋತ್ಸವಕ್ಕೆ ಶಾಸಕ ಕೆ.ಸಿ.ವೀರೇಂದ್ರಪಪ್ಪಿರವರು ಶುಕ್ರವಾರ ಸಂಜೆ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು.

ಆನೆಬಾಗಿಲಿನಿಂದ ಹೊರಟ ಪ್ರಸನ್ನ ಗಣಪತಿ ಮೆರವಣಿಗೆ ಗಾಂಧಿವೃತ್ತ, ಧರ್ಮಶಾಲಾ ರಸ್ತೆ, ದೊಡ್ಡಪೇಟೆ, ಚಿಕ್ಕಪೇಟೆ, ಬುರುಜನಹಟ್ಟಿ, ಹೊಳಲ್ಕೆರೆ ರಸ್ತೆ ಮೂಲಕ ಸಾಗಿತು. ರಾತ್ರಿ ಹನ್ನೊಂದು ಗಂಟೆಗೆ ಚಂದ್ರವಳ್ಳಿಯಲ್ಲಿ ವಿಸರ್ಜಿಸಲಾಯಿತು.

ನಾಸಿಕ್‍ಡೋಲು, ಡೊಳ್ಳುಕುಣಿತ, ಕೀಲುಕುದರೆ, ಅನೇಕ ಕಲಾ ತಂಡಗಳು, ಶಾರದ ಬ್ರಾಸ್‍ಬ್ಯಾಂಡ್ ಗುರುಮೂರ್ತಿಯವರಿಂದ ವಾದ್ಯಗೋಷ್ಠಿ ಮೆರವಣಿಗೆಯಲ್ಲಿ ಪ್ರಮುಖ ಆಕರ್ಷಣೆಯಾಗಿತ್ತು.

ಪ್ರಸನ್ನ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಗೋಪಾಲ್‍ರಾವ್ ಜಾಧವ್, ಉಪಾಧ್ಯಕ್ಷ ರಾಜ್‍ಕುಮಾರ್, ನಾಗರಾಜ್‍ಬೇದ್ರೆ, ಕಾರ್ಯದರ್ಶಿ ಶಿವಕುಮಾರ್, ಖಜಾಂಚಿ ಆನಂದ್, ನಿರ್ದೇಶಕರುಗಳಾದ ವೆಂಕಟೇಶ್, ಶಂಭು, ಯಶವಂತ್, ಕಾರ್ತಿಕ್, ರಮೇಶ್, ನಾರಾಯಣರಾವ್, ಶ್ಯಾಂಪ್ರಸಾದ್ ಇನ್ನು ಅನೇಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಮೆರವಣಿಗೆಯುದ್ದಕ್ಕೂ ನೂರಾರು ಭಕ್ತರು ಜಮಾಯಿಸಿ ಪ್ರಸನ್ನ ಗಣಪತಿಯ ದರ್ಶನ ಪಡೆದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ ?

ಸುದ್ದಿಒನ್ | ಯಾರಾಗಲಿದ್ದಾರೆ ಮಹಾರಾಷ್ಟ್ರದ ಮುಖ್ಯಮಂತ್ರಿ ಎಂಬ ಚರ್ಚೆ ಇದೀಗ ಮಹಾರಾಷ್ಟ್ರದಲ್ಲಷ್ಟೇ ಅಲ್ಲ, ದೇಶದಾದ್ಯಂತ ತೀವ್ರ ಕುತೂಹಲ ಮೂಡಿಸಿದೆ. ಒಟ್ಟಿಗೇ ಸ್ಪರ್ಧಿಸಿ ಗೆದ್ದ ಮೂರೂ ಪಕ್ಷಗಳು ಈಗ ಮುಖ್ಯಮಂತ್ರಿ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಸುತ್ತಿವೆ.

ಚಿತ್ರದುರ್ಗ APMC | ಶೇಂಗಾ, ಸೂರ್ಯಕಾಂತಿ ಸೇರಿದಂತೆ ಇತರೆ ಉತ್ಪನ್ನಗಳ ಇಂದಿನ ಮಾರುಕಟ್ಟೆ ರೇಟ್ ಎಷ್ಟು ?

    ಸುದ್ದಿಒನ್, ಚಿತ್ರದುರ್ಗ, ನವಂಬರ್. 25 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ, ಕಡಲೆ ಉತ್ಪನ್ನಗಳ (ಸರಕು) ಇಂದಿನ               (

ಮದ್ಯಪಾನ ಪ್ರಿಯರಿಗೆ ಗುಡ್ ನ್ಯೂಸ್ : ಚಳಿಗಾಲ ಮುಗಿಯೋವರೆಗೂ ಏರಿಕೆಯಿಲ್ಲ..!

    ಮದ್ಯಪಾನ ಪ್ರಿಯರಿಗೆ ಬೆಲೆ ಏರಿಕೆಯದ್ದೇ ಚಿಂತೆಯಾಗಿರುತ್ತದೆ. ಅದರಲ್ಲೂ ಬಿಯರ್ ಕುಡಿಯುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಜಾಸ್ತಿಯೇ ಆಗಿದೆ. ಹೀಗಾಗಿ ಮದ್ಯ ಪ್ರಿಯರಿಗೆ ಇದು ಬೇಸರ ತರಿಸಿದೆ. ಆದರೆ ಈ ಬಾರಿ ಮದ್ಯ

error: Content is protected !!