ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 9739875729
ಚಿತ್ರದುರ್ಗ : ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಸಂಸ್ಕಾರ ಕಲಿಸಬೇಕು. ಗಿಡವಾಗಿ ಬಗ್ಗಿದ್ದು ಮರವಾಗಿ ಬಗ್ಗೀತೆ ಎಂಬ ಗಾದೆಯಂತೆ ಮಕ್ಕಳಿಗೆ ಚಿಕ್ಕವರಿದ್ದಾಗಲೇ ಉತ್ತಮ ಶಿಕ್ಷಣ ಕೋಡಿಸಬೇಕು ಎಂದು ಹಿರಿಯೂರು ಶಾಸಕಿ ಕೆ ಪೂರ್ಣಿಮಾ ಶ್ರೀನಿವಾಸ್ ಹೇಳಿದರು.
ಹಿರಿಯೂರು ನಗರದ ನಗರಂಗೆರೆ ರಸ್ತೆಯ ಸಮೀಪವಿರುವ ವಾಗ್ದೇವಿ ಪಬ್ಲಿಕ್ ಶಾಲೆಯಲ್ಲಿ ಶಾಲಾವತಿಯಿಂದ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಹಾಗೂ ಸಿರಿ ಸಿಂಚನ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಶಿಕ್ಷಣ ಸಂಸ್ಥೆ ಕಟ್ಟಿ ಶಿಕ್ಷಣ ಕಲಿಸುವುದು ತುಂಬಾ ಜವಾಬ್ದಾರಿಯ ಕೆಲಸವಾಗಿದೆ. ನಾನು ಸಹ ಶಿಕ್ಷಣ ಸಂಸ್ಥೆ ನಡೆಸುವವಳಾಗಿ ಸಂಪೂರ್ಣವಾಗಿ ತಿಳಿದಿದ್ದೇನೆ. ಚಿಕ್ಕಣ್ಣ ಇವರು ಸಂಸ್ಥೆ ಕಟ್ಟಿ ಬೆಳಸಿ ಈ ಭಾಗದ ಬಡ ಮಕ್ಕಳಿಗೆ ವಿದ್ಯದಾನ ಮಾಡುತ್ತಿದ್ದಾರೆ. ಪೋಷಕರು ಸಹ ಅಷ್ಟೇ ಜವಾಬ್ದಾರಿಯಿಂದ ಮಕ್ಕಳನ್ನು ಶಾಲೆಗೆ ಕಳಿಸಬೇಕು. ಪ್ರತಿಯೊಬ್ಬರಿಗೂ ಶಿಕ್ಷಣವೇ ಶಕ್ತಿಯಾಗಿದೆ ಇಂದು ಶಿಕ್ಷಣವಿದ್ದರೆ ಏನು ಬೇಕಾದರು ಸಾಧಿಸಬಹುದು.
ಇಂದಿನ ಕಾರ್ಯಕ್ರಮದಲ್ಲಿ ಮಕ್ಕಳ ಸಾಂಸ್ಕೃತಿ ಕಾರ್ಯಕ್ರಮ ನೋಡಲು ಎಲ್ಲರೂ ಕಾತುರರಾಗಿದ್ದಾರೆ. ಅದರಲ್ಲೂ ತಾಯಂದಿರು ಸಹ ತುಂಬಾ ಆಸಕ್ತಿ ವಹಿಸಿ ಈ ಕಾರ್ಯಕ್ರಮಕ್ಕೆ ಬಂದು ಕಾರ್ಯಕ್ರಮ ವೀಕ್ಷಣೆಗೆ ಕಾತರರಾಗಿದ್ದಾರೆ.
ಪ್ರತಿಯೊಬ್ಬರು ತನ್ನ ಮಕ್ಕಳ ಮೇಲೆ ಕನಸು ಕಟ್ಟಿಕೊಂಡು ಶಾಲೆಗೆ ಕಳಿಸುತ್ತಾರೆ. ಮಕ್ಕಳು ಮುಂದೆ ಏನಾಗಬೇಕು ಏನು ಓದಬೇಕು ಎಂಬುದನ್ನು ಕನಸು ಕಟ್ಟಿಕೊಂಡು ಕಳಿಸುತ್ತಾರೆ. ಆದರೆ ಮಕ್ಕಳಲ್ಲಿ ಏನಿದೆ ಅವರ ಅಭಿರುಚಿಯನ್ನು ಎಂಬುದನ್ನು ಯಾರು ತಿಳಿದುಕೊಳ್ಳುವುದಿಲ್ಲ. ಮನೆಯಿಂದ ಮಕ್ಕಳು ಶಾಲೆಗೆ ಹೋದರೆ ಪ್ರತಿಯೊಂದು ಶಾಲೆಯ ಶಾಲೆಯವರದೇ ಜವಾಬ್ದಾರಿ ಎಂದು ಕೊಳ್ಳಬಾರದು ಪ್ರತಿಯೊಬ್ಬರ ಜವಾಬ್ದಾರಿ ಹೊತ್ತು ಮಕ್ಕಳನ್ನು ಶಾಲೆಗೆ ಕಳಿಸಬೇಕು ಎಂದು ಪೋಷಕರಿಗೆ ಕಿವಿ ಮಾತು ಹೇಳಿದರು.