ವಿಜಯಪುರ: ಹುಬ್ಬಳ್ಳಿ ಗಲಭೆ ಬಗ್ಗೆ ಗೃಹ ಮಂತ್ರಿಯನ್ನು ತರಾಟೆ ತೆಗೆದುಕೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಾಡಿಸ್ತಾರೆ ರೀ ಎಲ್ಲೂ ಆಗಲ್ಲ ಇಲ್ಲಿಯೇ ಕರ್ನಾಟಕದಲ್ಲಿ ಅಷ್ಟೇ ಆಗೋದು. ಉತ್ತರ ಪ್ರದೇಶದಲ್ಲಿ ಆದಾಗ ಎಲ್ಲಿತ್ತು, ಗುಜರಾತ್ ನಲ್ಲಿ ಆಡಳಿತದಲ್ಲಿದ್ದಾಗ ಎಲ್ಲಿ ಘಟನೆ ನಡೆಯಿತು. ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಹತ್ತು ವರ್ಷದಿಂದ ಇದೆ. ಎಲ್ಲಿ ಗಲಾಟೆಯಾಗಿದೆ. ಎಲ್ಲೆಲ್ಲಿ ಸ್ವಲ್ಪ ವೀಕ್ ಇದೆ ಅಲ್ಲಲ್ಲಿ ಇಂಥ ಗಲಾಟೆಗಳು ಆಗುತ್ತವೆ.
ಒಬ್ಬ ಸ್ಟ್ರಾಂಗ್ ಹೋಮ್ ಮಿನಿಸ್ಟರ್ ಈ ರಾಜ್ಯಕ್ಕೆ ಬೇಕಾಗಿದೆ. ನೀವೆಲ್ಲಾ ಟಿವಿ, ಪೇಪರ್ ನಲ್ಲಿ ಹಾಕಿ. ಒಬ್ಬ ಒಳ್ಳೆ ಗೃಹ ಮಂತ್ರಿ ಬೇಕಾಗಿದ್ದಾರೆ ಅಂತ ಎಂದು ವ್ಯಂಗ್ಯವಾಡಿದ್ದಾರೆ. ಗೃಹಮಂತ್ರಿ ಸ್ಟ್ರಾಂಗ್ ಇಲ್ಲ ಅನ್ನೋದನ್ನು ಶಾಸಕ ಯತ್ನಾಳ್ ಕೂಡ ಒಪ್ಪಿಕೊಂಡಂತಾಗಿದೆ.
ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಏನೇನೋ ಘಟನೆಗಳು ನಡೆಯುತ್ತಿವೆ. ಈ ಸಮಸ್ಯೆಗಳಿಗೆ ಸರ್ಕಾರ ತಲೆ ಹಾಕುತ್ತಿಲ್ಲ, ಸಮಸ್ಯೆ ಬಗೆಹರಿಸುವ ಗೋಜಿಗೆ ಹೋಗುತ್ತಿಲ್ಲ, ಗೃಹ ಇಲಾಖೆ ಸಂಪೂರ್ಣ ವಿಫಲವಾಗುತ್ತಿದೆ, ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ ಎಂಬ ಆರೋಪಗಳು ಸಾಕಷ್ಟು ಕೇಳಿ ಬರುತ್ತಿದೆ. ಈ ನಡುವೆ ಹುಬ್ಬಳ್ಳಿ ವಾಟ್ಸಾಪ್ ಸಂದೇಶವೊಂದರಿಂದ ಪ್ರಕ್ಷುಬ್ಧ ವಾತಾವರಣವೇ ನಿರ್ಮಾಣವಾಗಿದೆ. ಈ ಬಗ್ಗೆ ಶಾಸಕ ಬಸನಗೌಡ ಯತ್ನಾಳ್ ಕೂಡ ಗೃಹ ಸಚಿವರ ಮೇಲೆ ಕಿಡಿಕಾರಿದ್ದಾರೆ.