Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಎಸ್.ಸಿ, ಎಸ್.ಟಿ ಮೀಸಲಿಟ್ಟ ಹಣ ದುರುಪಯೋಗ : ಚಿತ್ರದುರ್ಗದಲ್ಲಿ ಬಹುಜನ ಸಮಾಜ ಪಾರ್ಟಿ ಪ್ರತಿಭಟನೆ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಜುಲೈ. 26 : ಎಸ್ಸಿಪಿ ಮತ್ತು ಟಿ.ಎಸ್ಪಿ. ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಭಿವೃದ್ದಿಗಾಗಿ ಮೀಸಲಿಟ್ಟಿರುವ ಕೋಟ್ಯಾಂತರ ರೂ.ಗಳನ್ನು ರಾಜ್ಯ ಸರ್ಕಾರ ದುರ್ಬಳಕೆ ಮಾಡಿಕೊಂಡಿರುವುದರ ವಿರುದ್ದ ಬಹುಜನ ಸಮಾಜ ಪಾರ್ಟಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ ಕಾಂಗ್ರೆಸ್ ಸರ್ಕಾರದ ವಿರುದ್ದ ಧಿಕ್ಕಾರಗಳನ್ನು ಕೂಗಿದರು.

ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ನಂತರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಒಂದು ಗಂಟೆಗಳಿಗೂ ಹೆಚ್ಚು ಕಾಲ ಕುಳಿತು ರಾಜ್ಯ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳಿಗೆ ಮೀಸಲಿಟ್ಟಿರುವ ಹಣವನ್ನು ಉಚಿತ ಗ್ಯಾರೆಂಟಿಗಳಿಗೆ ಬಳಸುತ್ತಿರುವುದನ್ನು ಖಂಡಿಸಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಹುಜನ ಸಮಾಜ ಪಾರ್ಟಿ ಜಿಲ್ಲಾಧ್ಯಕ್ಷ ಎನ್.ಪ್ರಕಾಶ್ ಮಾತನಾಡಿ ೨೦೧೪-೧೫ ನೇ ಸಾಲಿನಿಂದ ಇದುವರೆವಿಗೂ ೨,೯೪,೯೬೩ ಕೋಟಿ ರೂ.ಗಳನ್ನು ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಅಭಿವೃದ್ದಿಗಾಗಿ ಮೀಸಲಿಟ್ಟಿದೆ. ಇದರಲ್ಲಿ ಕೇವಲ ಶೇ.೧೦ ರಷ್ಟು ಹಣವನ್ನು ಎಸ್ಸಿ.ಎಸ್ಟಿ.ಗಳಿಗೆ ನೇರವಾಗಿ ತಲುಪಿಸದೆ ಕಾಂಗ್ರೆಸ್, ಜೆಡಿಎಸ್. ಬಿಜೆಪಿ. ಪಕ್ಷಗಳು ದ್ರೋಹವೆಸಗಿವೆ.೨೦೨೩-೨೪-೨೫ ನೇ ಸಾಲಿನ ಎರಡು ವರ್ಷಗಳಲ್ಲಿ ೨೫,೩೯೮ ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಗ್ಯಾರೆಂಟಿ ಯೋಜನೆಗಳಿಗೆ ಬಳಸಿದೆ.

ಹಿಂದಿನ ಬಿಜೆಪಿ. ಸರ್ಕಾರ ಹತ್ತೊಂಬತ್ತು ಸಾವಿರ ಕೋಟಿ ರೂ.ಗಳನ್ನು ಬೇರೆ ಯೋಜನೆಗಳಿಗೆ ಖರ್ಚು ಮಾಡಿ ಕಾಯ್ದೆಯ ಉದ್ದೇಶವನ್ನು ಕಡೆಗಣಿಸಿದೆ. ಭೋವಿ ಅಭಿವೃದ್ದಿ ನಿಗಮ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮ ಹಾಗೂ ಆದಿ ಜಾಂಬವ ಅಭಿವೃದ್ದಿ ನಿಗಮಗಳಲ್ಲಿ ಹತ್ತಾರು ಕೋಟಿ ರೂ.ಗಳ ಅವ್ಯವಹಾರವಾಗಿದೆ ಎಂದು ಸರ್ಕಾರವೇ ಹೇಳಿದೆ. ಇಷ್ಟು ಸಾಲದೆಂಬಂತೆ ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ನಡೆದಿರುವ ೧೮೭ ಕೋಟಿ ರೂ.ಗಳ ಹಗರಣಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.?

ಭೀಮನಕೆರೆ ಶಿವಮೂರ್ತಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ರಾಜ್ಯ ಸರ್ಕಾರ ಎಸ್ಸಿಪಿ. ಟಿಎಸ್ಪಿ.ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಿಕೊಂಡಿರುವುದರಿಂದ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳು ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದವರೆಗೆ ವಂಚನೆಗೊಳಗಾಗಿದ್ದಾರೆ. ಲಕ್ಷಾಂತರ ಎಸ್ಸಿ.ಎಸ್ಟಿ. ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಕಲ್ಪಿಸಬಹುದಿತ್ತು. ವಸತಿ ರಹಿತ ಎಸ್ಸಿ.ಎಸ್ಟಿ.ಗಳಿಗೆ ಸ್ವಂತ ಮನೆಗಳನ್ನು ಕಟ್ಟಿಸಿಕೊಡಬಹುದಿತ್ತು. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ಕೊಡಿಸಿ ಪ್ರಾಣ ಉಳಿಸಬಹುದಿತ್ತು. ಇದ್ಯಾವುದನ್ನು ಮಾಡದ ರಾಜ್ಯ ಸರ್ಕಾರ ಹಣವನ್ನು ಅನ್ಯ ಕೆಲಸಗಳಿಗೆ ಬಳಸಿ ದ್ರೋಹವೆಸಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

ಚಳ್ಳಕೆರೆ ತಾಲ್ಲೂಕು ಕೋನಿಗರಹಳ್ಳಿ ಗ್ರಾಮದ ರಿ.ಸ.ನಂ. ೧೮ ರಲ್ಲಿ ಮೂವತ್ತು ಜನರಿಗೆ ಹಕ್ಕುಪತ್ರ ಕೊಟ್ಟಿದ್ದು, ನಿವೇಶನಗಳನ್ನು ಹಂಚಿಕೆ ಮಾಡಿ ಮೂಲಭೂತ ಸೌಕರ್ಯಗಳನ್ನು ಒದಗಿಸಿಲ್ಲ. ದೌರ್ಜನ್ಯಕ್ಕೆ ಒಳಗಾಗಿರುವ ಅನೇಕರಿಗೆ ಕೊಳವೆಬಾವಿಗಳನ್ನು ಕೊರೆಸಿದ್ದು, ಉಳಿದ ಐದು ಮಂದಿಗೆ ಅಂಬೇಡ್ಕರ್ ಅಭಿವೃದ್ದಿ ನಿಗಮದಿಂದ ಕೊಳವೆಬಾವಿಗಳನ್ನು ಕೊರೆಸಬೇಕು.

ದೊಡ್ಡಬೀರನಹಳ್ಳಿ ಗ್ರಾಮದ ರಿ.ಸ.ನಂ.೧೧೯, ೧೨೧, ೧೨೨ ನಂಬರಿನ ಸಾಗುವಳಿದಾರರಿಗೆ ತಕ್ಷಣವೆ ಸಾಗುವಳಿ ಪತ್ರ ನೀಡಬೇಕು. ರಿ.ಸ.ನಂ. ೫೦ ರಲ್ಲಿ ೮೨ ಫಲಾನುಭವಿಗಳನ್ನು ಗುರುತಿಸಿದ್ದು, ಹಕ್ಕುಪತ್ರ ವಿತರಿಸಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು.
ಮೊಳಕಾಲ್ಮುರು ತಾಲ್ಲೂಕು ನಾಗಸಮುದ್ರದ ರಿ.ಸ.ನಂ.೩೧೭ ರಲ್ಲಿ ಯನ್ನಪ್ಪ ಇವರಿಗೆ ಏಳು ಎಕರೆ ಜಮೀನು ಇದ್ದು, ಪಹಣಿ ಬರುತ್ತಿಲ್ಲ. ಕೂಡಲೆ ಸಮಸ್ಯೆಯನ್ನು ಸರಿಪಸಿಡಿಬೇಕು.

ಹಿರಿಯೂರು ತಾಲ್ಲೂಕು ಅಬ್ಬಿನಹೊಳೆ ಗ್ರಾಮದ ರಿ.ಸ.ನಂ. ೧೦೧ ರಲ್ಲಿ ದೇವರಕೊಟ್ಟ, ಬೇಡರಹಳ್ಳಿ, ಕಣಜನಹಳ್ಳಿ ಸಕ್ಕರ ಗ್ರಾಮಗಳ ಬಗರ್‌ಹುಕುಂ ಸಾಗುವಳಿದಾರರಿಗೆ ಸಾಗುವಳಿ ಪತ್ರ ಕೊಡಬೇಕು.
ಬ್ಯಾಡರಹಳ್ಳಿ ರಿ.ಸ.ನಂ. ೨೭ ರಲ್ಲಿ ಕಸ ವಿಲೇವಾರಿ ಘಟಕ ಮಂಜೂರಾಗಿರುವುದನ್ನು ರದ್ದುಪಡಿಸಬೇಕು.
ಉಪ್ಪಳಗೆರೆ ಗ್ರಾಮದಲ್ಲಿ ೧೫೦ ದಲಿತರ ಮನೆಗಳಿರುವುದರಿಂದ ವಿವಿಧ ಚಟುವಟಿಕೆಗಳಿಗಾಗಿ ಅಂಬೇಡ್ಕರ್ ಸಮುದಾಯ ಭವನ ನಿರ್ಮಿಸಬೇಕು.
ಜಂತುಕೊಳಲು ಗ್ರಾಮದ ರಿ.ಸ.ನಂ. ೧೩ ರಲ್ಲಿ ನಾಲ್ಕು ಎಕರೆ ಜಮೀನು ಮಂಜೂರು ಮಾಡಿ ೮೪ ಜನರಿಗೆ ಇನ್ನು ಹಕ್ಕುಪತ್ರ ಸಿಕ್ಕಿಲ್ಲ. ಬ್ಯಾಡರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೨೫೦ ಮಕ್ಕಳಿಗೆ ಎರಡು ಕೊಠಡಿಗಳಷ್ಟೆ ಇದೆ. ಮತ್ತೆರಡು ಹೊಸ ರೂಂಗಳನ್ನು ನಿರ್ಮಿಸಬೇಕೆಂದು ಪ್ರತಿಭಟನಾನಿರತರು ಒತ್ತಾಯಿಸಿದರು.

ಬಹುಜನ ಸಮಾಜ ಪಾರ್ಟಿ ಜಿಲ್ಲಾ ಸಂಯೋಜಕ ಕೆ.ಎನ್.ದೊಡ್ಡಟ್ಟೆಪ್ಪ, ಉಪಾಧ್ಯಕ್ಷ ರಾಮಸ್ವಾಮಿ, ಪ್ರಧಾನ ಕಾರ್ಯದರ್ಶಿ ಹನುಮಂತರಾಯ, ಕಾರ್ಯದರ್ಶಿಗಳಾದ ಜಗದೀಶ್ ಹೆಚ್.ಆರ್.ಶ್ರೀನಿವಾಸ್, ತಾಲ್ಲೂಕು ಉಪಾಧ್ಯಕ್ಷೆ ಲಕ್ಷö್ಮಕ್ಕ, ಹಿರಿಯೂರು ತಾಲ್ಲೂಕು ಅಧ್ಯಕ್ಷ ಎನ್.ಮಹಲಿಂಗಪ್ಪ, ಮರಿಸ್ವಾಮಿ, ಪ್ರಸನ್ನ, ಗುರುಸ್ವಾಮಿ, ಗೋವಿಂದಪ್ಪ
ಪರಮೇಶ್, ದುರ್ಗಮ್ಮ, ಅಂಜಿನಮ್ಮ, ಕಮಲಮ್ಮ, ರತ್ನಮ್ಮ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಒಂದು ತಿಂಗಳು ಬ್ರಶ್ ಮಾಡದಿದ್ದರೆ ಏನಾಗುತ್ತದೆ ಗೊತ್ತಾ

  ಸುದ್ದಿಒನ್ : ಅನೇಕ ಜನರು ಬಾಯಿಯ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಹೀಗಾಗಿ ಅವರು ತಮ್ಮ ಹಲ್ಲು ಮತ್ತು ನಾಲಿಗೆಯನ್ನು ಎಲ್ಲ ರೀತಿಯಲ್ಲೂ ಸ್ವಚ್ಛವಾಗಿಟ್ಟುಕೊಳ್ಳುತ್ತಾರೆ. ಆದರೆ ಕೆಲವರಿಗೆ ಮುಂಜಾನೆ ಹಲ್ಲುಜ್ಜುವುದು ಮತ್ತು ಸ್ವಚ್ಛವಾಗಿಟ್ಟುಕೊಳ್ಳದಷ್ಟು

ಈ ರಾಶಿಗಳಿಗೆ ಕಂಕಣಬಲ ಆಗೇ ಆಗುವುದು, ಈ ರಾಶಿಗಳಿಗೆ ಉದ್ಯೋಗದಲ್ಲಿ ತೊಂದರೆ,

ಈ ರಾಶಿಗಳಿಗೆ ಕಂಕಣಬಲ ಆಗೇ ಆಗುವುದು, ಈ ರಾಶಿಗಳಿಗೆ ಉದ್ಯೋಗದಲ್ಲಿ ತೊಂದರೆ, ಶುಕ್ರವಾರ- ರಾಶಿ ಭವಿಷ್ಯ ಅಕ್ಟೋಬರ್-18,2024 ಸೂರ್ಯೋದಯ: 06:13, ಸೂರ್ಯಾಸ್ತ : 05:48 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿಣ

ನಟಿ ಅಮೂಲ್ಯ ಸಹೋದರ ದೀಪಕ್ ಅರಸ್ ನಿಧನ..!

ನಟಿ ಅಮೂಲ್ಯ ಸಹೋದರ ದೀಪಕ್ ಅರಸ್ ನಿಧನ..! ಬೆಂಗಳೂರು: ನಟಿ ಅಮೂಲ್ಯ ಜಗದೀಶ್ ಅವರ ಸಹೋದರ ದೀಪಕ್ ಅರಸ್ ಇಂದು ನಿಧನರಾಗಿದ್ದಾರೆ. ಸ್ಯಾಂಡಲ್ ವುಡ್ ಗೆ ಈ ಸುದ್ದಿ ಬಿರುಗಾಳಿಯಂತೆ ಎದುರಾಗಿದೆ. ದೀಪಕ್ ಅರಸ್

error: Content is protected !!