ಬೆಳೆ ಪರಿಹಾರದ ಹಣ ದುರುಪಯೋಗ : ತಪ್ಪಿತಸ್ಥ ಗ್ರಾಮಲೆಕ್ಕಾಧಿಕಾರಿಗಳನ್ನು ಅಮಾನತು ಪಡಿಸಿ, ಅರ್ಹ ರೈತರಿಗೆ ಬೆಳೆ ಪರಿಹಾರದ ಹಣ ನೀಡಿ : ಚಿಕ್ಕಣ್ಣ

2 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729

ಸುದ್ದಿಒನ್, ಚಳ್ಳಕೆರೆ, ಅಕ್ಟೋಬರ್.26 : ಕಳೆದ ವರ್ಷ ಬೆಳೆ ಪರಿಹಾರದ ಹಣ ಗ್ರಾಮಲೆಕ್ಕಾಧಿಕಾರಿಗಳು ದುರುಪಯೋಗಪಡಿಕೊಂಡ ಕುರಿತು ಅಖಂಡ ಕರ್ನಾಟಕ ರಾಜ್ಯ ಸಂಘ ಸಲ್ಲಿಸಿದ ಮನವಿಗೆ ಸ್ಪಂದಿಸಿ 31 ಗ್ರಾಮಲೆಕ್ಕಾಧಿಕಾರಿಗಳು, 31 ಗ್ರಾಮಸಹಾಯಕರು ವಿರುದ್ದ ಜಿಲ್ಲಾಧಿಕಾರಿಗಳು ತನಿಖೆ ನಡೆಸುತ್ತಿರುವುದು ಸ್ವಾಗತಾರ್ಹ.

ತನಿಖೆ ಪೂರ್ಣಗೊಳಿಸಿ ತಪ್ಪಿತಸ್ಥ ಗ್ರಾಮಲೆಕ್ಕಾಧಿಕಾರಿಗಳನ್ನು ಅಮಾನತು ಪಡಿಸಿ, ಅರ್ಹ ರೈತರಿಗೆ ಬೆಳೆ ಪರಿಹಾರದ ಹಣ ಒದಗಿಸಬೇಕು ಎಂದು  ಅಖಂಡ ಕರ್ನಾಟಕ ಸಂಘದ ತಾಲ್ಲೂಕು ಅಧ್ಯಕ್ಷ ಚಿಕ್ಕಣ್ಣ  ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಬೆಳೆ ಪರಿಹಾರ, ಬೆಳೆವಿಮೆ ಹಾಗೂ  ಅನಿಯಮಿತ ವಿದ್ಯುತ್ ಕುರಿತು ನಡೆದ ಸಭೆಯಲ್ಲಿ ಮಾತನಾಡಿದರು.

ಪಿ.ಮಹದೇವಪುರ ಗ್ರಾಪಂ ವ್ಯಾಪ್ತಿಯಲ್ಲಿ ಬೆಳೆ ವಿಮೆ ಹಣದಲ್ಲಿ ಗೋಲ್ ಮಾಲ್ ಮಾಡಲಾಗಿದೆ. ಇದರಂತೆ 20 ಗ್ರಾಪಂಗಳಲ್ಲಿ ವಿಮಾ ಕಂಪನಿಯು ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದು, ಇದನ್ನು ತನಿಖೆ ನಡೆಸಲು ಅಧಿಕಾರಿಗಳನ್ನು ಜಿಲ್ಲಾಧಿಕಾರಿಗಳು ನಿಯೋಜನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ತಾಲ್ಲೂಕಿನಲ್ಲಿ 2022-23 ನೇ ಸಾಲಿನಲ್ಲಿ ಅತಿವೃಷ್ಠಿ, ಅನಾವೃಷ್ಠಿ ಸಿಲುಕಿ ರೈತರು ಬೆಳೆದ ಶೇಂಗಾ, ಈರುಳ್ಳಿ ಬೆಳೆಗಳು ನಷ್ಟವಾದ ಹಿನ್ನಲೆ ಸರ್ಕಾರ ತಾಲ್ಲೂಕಿಗೆ ಸುಮಾರು 82 ಕೋಟಿ ಬೆಳೆ ಪರಿಹಾರ ಹಣವನ್ನು ಬಿಡುಗಡೆ ಮಾಡಿತ್ತು.

ಈ ಹಣವನ್ನು ಗ್ರಾಮಲೆಕ್ಕಾಧಿಕಾರಿಗಳು ದುರುಪಯೋಗಪಡಿಸಿಕೊಂಡು ರೈತರ ಖಾತೆಗೆ ಹಣ ಜಮಾ ಮಾಡದೆ,  ತೋಟಗಾರಿಕೆ ಬೆಳೆ ಖಾಲಿ ನಿವೇಶನ, ಗೋಮಾಳ ಜಮೀನುಗಳ  ಸರ್ವೆ ನಂಬರ್ ನಮೂದಿಸಿ ಖಾತೆದಾರರಲ್ಲದ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಮಾಡಿಕೊಂಡು ಪರಿಹಾರ  ಲಪಾಟಯಿಸಿದ್ದಾರೆ. ಈ ಬಾರಿ ಬೆಳೆಪರಿಹಾರದ ಹಣ ದುರುಪಯೋಗವಾಗದಂತೆ ತಾಲ್ಲೂಕಿನ ಪ್ರತಿಯೊಬ್ಬ ರೈತನಿಗೂ ಸಿಗಬೇಕು. ಇದರ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಮಾತನಾಡಿ ರೈತರ ಪಂಪ್ ಸೆಟ್ ಗಳಿಗೆ ಐದು ಗಂಟೆ ವಿದ್ಯುತ್ ಪೂರೈಕೆ ಮಾಡುತ್ತಿದೆ. ಆದರೆ ವಿದ್ಯುತ್ ಪೂರೈಕೆಯಲ್ಲಿ ಪದೆ-ಪದೆ ಲೋಡ್ ಶೆಡ್ಡಿಂಗ್ ಮಾಡದೆ ವಿದ್ಯುತ್ ಪೂರೈಕೆ ಮಾಡಬೇಕು ಬೆಳೆ ನಷ್ಟ ಪರಿಹಾರ ಹಾಗೂ ಬೆಳೆ ವಿಮೆ ಕಡ್ಡಾಯವಾಗಿ ಎಲ್ಲರಿಗೂ ತರಬೇಕು ಎಂದು ಆಗ್ರಹಿಸಿದರು.

ಈ ವೇಳೆ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಉಪಾಧ್ಯಕ್ಷ ಜಂಪಣ್ಣ, ಕಾರ್ಯಾಧ್ಯಕ್ಷ ಹನುಮಂತರಾಯಪ್ಪ, ಮುಖಂಡರಾದ ಖಾದರ್ ಬಾಷಾ, ನರಸಿಂಹಮೂರ್ತಿ ಸೇರಿದಂತೆ ಮುಂತಾದವರು ಇತರರಿದ್ದರು.

Share This Article
Leave a Comment

Leave a Reply

Your email address will not be published. Required fields are marked *