ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.27 : ಗುರು ರಾಯರ ಪವಾಡ ಎಂದರೆ ಅಷ್ಟಿಷ್ಟಲ್ಲ. ದಿನೇ ದಿನೇ ರಾಯರ ಭಕ್ತರ ಸಂಖ್ಯೆ ಹೆಚ್ಚಾಗುತ್ತಿರುವುದು ಇದೇ ಕಾರಣಕ್ಕೆ. ರಾಯರನ್ನು ನಂಬಿದರೆ ಎಲ್ಲವೂ ಒಳಿತೆ ಆಗುತ್ತದೆ ಎಂಬುದಕ್ಕೆ ಮತ್ತೊಂದು ಉದಾಹರಣೆಯೂ ಸಿಕ್ಕಿದೆ. ಚಿತ್ರದುರ್ಗದ ರಾಯರ ಮಠದಲ್ಲಿ ಪವಾಡವೊಂದು ನಡೆದಿದೆ.
ಚಿತ್ರದುರ್ಗದ ರಾಯರ ಮಠಕ್ಕೆ ರಾಜ್ಯದ ಮೂಲೆ ಮೂಲೆಯಿಂದಾನೂ ಭಕ್ತರು ಬರುತ್ತಾರೆ. ಅದರಂತೆ ಇಂದೂ ಕೂಡಾ ಬೆಂಗಳೂರಿನ ವಿದ್ಯಾರಣ್ಯಪುರ ನಿವಾಸಿಗಳಾದ ಶ್ರೀಕಾಂತಾಚಾರ್ಯರು, ಪತ್ನಿ ಹಾಗೂ ಇಬ್ವರು ಮಕ್ಕಳ ಜೊತೆಗೆ ಮಠಕ್ಕೆ ಬಂದಿದ್ದರು. ಇಬ್ಬರು ಮಕ್ಕಳಿಗೆ ಅಂಗ ವೈಕಲ್ಯ ಕಾಡುತ್ತಿದೆ. ಹೀಗಾಗಿ ವೀಲ್ ಚೇರ್ ನಲ್ಲಿಯೇ ಮಠಕ್ಕೆ ಬಂದಿದ್ದರು. ಶ್ರೀರಾಯರು ವೆಂಕಣ್ಣಗೆ ಮೋಕ್ಷ ಕೊಟ್ಟ ಸ್ಥಳ ಹಾಗೂ ಶ್ರೀರಾಯರ ಚಲ ಬೃಂದಾವನ ದರ್ಶನವಿರುವ ಮಠ ಇದಾಗಿದ್ದು, ಇಲ್ಲಿ ವಿಶೇಷವಾದ ಪವಾಡವೊಂದು ನಡೆದಿದೆ.
ರಾಯರ ದರ್ಶನ ನಂತರ ಮಗಳಿಗೆ ಒಂದು ಪ್ರದಕ್ಷಿಣೆ ಹಾಕಬೇಕೆಂದು ಆಸೆಯಾಗಿದೆ. ಅಮ್ಮನನ್ನು ಕೇಳಿದಳು, ಅಮ್ಮ ಅನುಮತಿ ನೀಡಿ ರಾಯರಲ್ಲಿ ಪ್ರಾರ್ಥಿಸಿದರು. ಅಲ್ಲಿ ಪವಾಡವೆ ನಡೆಯಿತು. ಆ ಹೆಣ್ಣು ಮಗು wheel chair ಸಹಾಯವಿಲ್ಲದೆ ನಡೆದುಕೊಂಡು ಪ್ರದಕ್ಷಿಣೆ ಹಾಕಿದಳು. ತಂದೆ ತಾಯಿ ಇಬ್ಬರೂ ಈ ದೃಶ್ಯ ಕಂಡು ಬಹಳ ಸಂತೋಷಪಟ್ಟರು. ರಾಯರಿಗೆ ಮನಸ್ಪೂರ್ತಿಯಾಗಿ ನಮಸ್ಕರಿಸಿದರು. ಈ ವರೆಗೂ ಅವಳು ನಡೆದಿದ್ದೇ ನೋಡಿಲ್ಲ ಎಂದು ಆ ಪೋಷಕರು ಸಂತಸ ಪಟ್ಟರು. ರಾಯರ ಪವಾಡಕ್ಕೆ ಮನಸೋತರು. ಕೃತಜ್ಞತಾ ಭಾವದಿಂದ ನಮಸ್ಕರಿಸಿದರು. ಈ ಪವಾಡ ನಿಜಕ್ಕೂ ಅಲ್ಲಿ ನೆರೆದಿದ್ದವರೆಲ್ಲರ ಮೈ ಜುಮ್ ಎನ್ನುವಂತೆ ಮಾಡಿತ್ತು.
ಈ ಘಟನೆಯನ್ನು ಇಲ್ಲಿನ ಭಕ್ತರಾದ ಜೋಯಿಸ್ ಹುಲಿರಾಜಾಚಾರ್ಯರು ಖುದ್ದಾಗಿ ಕಂಡು ಆಶ್ಚರ್ಯಚಕಿತರಾಗಿದ್ದಾರೆ. ನಂತರ ಬೆಂಗಳೂರಿನಿಂದ ಬಂದ
ಶ್ರೀಕಾಂತಾಚಾರ್ಯರನ್ನು ವಿಚಾರಿಸಿದ್ದಾರೆ. ಅವರು ಈ ಪವಾಡವನ್ನು ನೆನೆದು ಆನಂದಬಾಷ್ಪ ಸುರಿಸುತ್ತಾ ಈ ಮಠದ ವಿಶೇಷತೆಯನ್ನು ತಿಳಿದು ಇಲ್ಲಿಗೆ ಬಂದಿರುವುದಾಗಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ವಿಕಲಚೇತನರಿಗಾಗಿ ಶಾಲೆಯನ್ನು ನಡೆಸುತ್ತಿರುವುದಾಗಿ ಅಲ್ಲಿ 35 ಮಕ್ಕಳಿಗೆ ಆಶ್ರಯ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ನೀಡುತ್ತಿದ್ದೇವೆ. ಇಂದು ನಡೆದ ಪವಾಡದಿಂದ ನಾವು ತುಂಬಾ ಸಂತಸಗೊಂಡಿದ್ದೇವೆಂದು ಅಲ್ಲಿ ನೆರೆದಿದ್ದ ಭಕ್ತರಿಗೆ ಅವರಿಗಾದ ಅನುಭವವನ್ನು ಮನವರಿಕೆ ಮಾಡಿ ಕೊಟ್ಟಿದ್ದಾರೆಂದು
ಜೋಯಿಸ್ ಹುಲಿರಾಜಾಚಾರ್ಯರು ಸುದ್ದಿಒನ್ ಗೆ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ :
ಜೋಯಿಸ್ ಹುಲಿರಾಜಾಚಾರ್ಯರು
ಚಿತ್ರದುರ್ಗ.
ಮೊ : 94491 28128






