ಹೊಸಪೇಟೆ: ಅಲ್ಪಸಂಖ್ಯಾತರ ಪರ ಸಚಿವ ಆನಂದ್ ಸಿಂಗ್ ಬ್ಯಾಟ್ ಬೀಸಿದ್ದಾರೆ. ಅಲ್ಪಸಂಖ್ಯಾತರು ಮುಗ್ಧರು, ಅಮಾಯಕರು ಎಂದಿದ್ದಾರೆ. ಕೆಲವು ಬುದ್ಧಿವಂತ ಲೀಡರ್ ಗಳು ಅವರನ್ನೆಲ್ಲ ಕಂಟ್ರೋಲ್ ಮಾಡ್ತಿದ್ದಾರೆ. ಪ್ರಚೋದನೆ ಮಾಡುವುದು, ಈ ಸಮುದಾಯವನ್ನು ವೋಟ್ ಬ್ಯಾಂಕಿಂಗ್ ಗಾಗಿ ರಾಜಕೀಯ ಮಾಡುತ್ತಿದ್ದಾರೆ. ತಮ್ಮ ರಾಜಕೀಯ ಬೇಳೆಯನ್ನ ಬೇಯಿಸಿಕೊಳ್ಳುತ್ತಿದ್ದಾರೆ.

ಜಾತಿ ವಿಷ ಬೀಜ ಬಿತ್ತಿ ರಾಜಕೀಯ ಮಾಡುತ್ತಿದ್ದಾರೆ. ಭಾರತೀಯರು ಎಂದ ಮೇಲೆ ಮುಸ್ಲಿಂರಾಗಲಿ, ಕ್ರಿಶ್ಚಿಯನ್ನರಾಗಲಿ ಎಲ್ಕರಿಗೂ ಸಮಾನತೆಯ ಸಂವಿಧಾನ ಬರೆದುಕೊಟ್ಟ ಮೇಲೆ. ಅಂಬೇಡ್ಕರ್ ಸಂವಿಧಾನವನ್ನು ಯಾರೂ ಮೀರುವುದಕ್ಕೆ ಆಗಲ್ಲ. ಕಾಂಗ್ರೆಸ್ ನವರು ಇಂಥ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಿಂದಲೇ ಇದೆಲ್ಲವೂ ನಡೀತಾ ಇದೆ. ಅವರ ಮುಗ್ಧತೆಯನ್ನ ರಾಜಕೀಯ ವ್ಯಕ್ತಿಗಳು ಬಳಸಿಕೊಳ್ಳುತ್ತಿದ್ದಾರೆ. ಇವರೆಲ್ಲರು ಕೂಡ ಮುಗ್ದರು.

ಅಲ್ಪಸಂಖ್ಯಾತರದ್ದು ಏನು ಇಲ್ಲ, ಅವರಿಗೆ ಏನು ಗೊತ್ತಾಗ್ತಿಲ್ಲ. ಅವರ ಮುಗ್ದತೆಯನ್ನು ರಾಜಕೀಯ ವ್ಯಕ್ತಿಗಳು ಬಳಸಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಮೇಲೆ ಸಚಿವ ಆನಂದ್ ಸಿಂಗ್ ಆರೋಪ ಮಾಡಿದ್ದಾರೆ.

