ಬೆಂಗಳೂರು: ನಿನ್ನೆಯಷ್ಟೇ ಸಿಎಂ ಬಸವರಾಜ್ ಬೊಮ್ಮಾಯಿ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನ ನೇಮಕ ಮಾಡಿದ್ದಾರೆ. ಆದ್ರೆ ಇದು ಕೆಲವರಿಗೆ ಅಸಮಾಧಾನಕ್ಕೆ ಕಾರಣವಾಗಿದೆ.ಬಯಸಿದ ಜಿಲ್ಲೆಯ ಉಸ್ತುವಾರಿ ಸಿಗದೆ ಒಳಗೊಳಗೆ ಗೋಳಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಸಚಿವರು ಹಾಗೆಲ್ಲ ಏನು ಇಲ್ಲ ಅಂದ್ರು ಕೂಡ ಮೇಲ್ನೋಟಕ್ಕೆ ಬೆಳವಣಿಗೆಯಲ್ಲೇ ಎಲ್ಲಾ ಕಾಣ್ತಾ ಇದೆ.
ನಮ್ಮ ಹೈಕಮಾಂಡ್ ಸಿಎಂ ಯಾವ ನಿರ್ಧಾರ ತೆಗೆದುಕೊಂಡ್ರು ಬದ್ಧರಾಗಿರ್ತೀವಿ. ನಾನು ಏನ್ ಹೇಳ್ಬೇಕು ಅಂದ್ರು ಅದು ನಮ್ಮ ಪಕ್ಷದ ಆಂತರಿಕ ವಿಚಾರ. ನಮ್ಮ ಸಮಸ್ಯೆ ನಮ್ಮ ಸಲಹೆಗಳನ್ನ ಸಿಎಂ ಬಳಿ ಹಂಚಿಕೊಳ್ತೇವೆ. ಬಹಿರಂಗವಾಗಿ ಏನನ್ನು ಹೇಳೋಕೆ ಆಗಲ್ಲ ಅಂತ ಸುಧಾಕರ್ ಹೇಳಿದ್ದಾರೆ.
ಎಂಟಿಬಿ ನಾಗರಾಜ್ ಕೂಡ ಸಿಎಂ ಭೇಟಿಯಾಗಿ ಮಾತಾಡಿದ್ದಾರೆ. ಈ ಮುಂಚೆ ಚಿಕ್ಕಬಳ್ಳಾಪುರ ಕ್ಷೇತ್ರ ವಹಿಸಿಕೊಂಡಿದ್ದ ಸುಧಾಕರ್ ಆಂತರಿಕವಾಗಿ ಮಾತಾಡ್ತೀವಿ ಅಂದಿದ್ದಾರೆ. ಬಹಿರಂಗವಾಗಿ ಹೇಳಿಕೆ ನೀಡಿದ್ರೆ ಹೈಕಮಾಂಡ್ ಕೆಂಗಣ್ಣಿಗೆ ಗುರಿ ಆಗ್ತೀವಿ ಎಂಬುದರಿಂದ ಎಲ್ಲರು ನೇರವಾಗಿ ಅಸಮಾಧಾನ ಹೊರ ಹಾಕುತ್ತಿಲ್ಲ ಎನ್ನಲಾಗಿದೆ.
ಈಗಾಗಲೇ ಎಂಟಿಬಿ ನಾಗಾರಾಜ್ ಮತ್ತು ಸುಧಾಕರ್ ಭೇಟಿ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರವನ್ನ ಎಂಟಿಬಿ ನಾಗರಾಜ್ ಬಯಸಿದ್ರು. ಈಗ ಅದು ಸುಧಾಕರ್ ಪಾಲಾಗಿದೆ. ಚಿಕ್ಕಬಳ್ಳಾಪುರ ಬಯಸಿದ್ದು ಸುಧಾಕರ್ ಆದ್ರೆ ಅವರಿಗೆ ಬೆಂಗಳೂರು ಗ್ರಾಮಾಂತರ ನೀಡಲಾಗಿದೆ. ಸ್ವಂತ ಜಿಲ್ಲೆ ಸಿಗದೆ ಇರೋದಕ್ಕೆ ಅಸಮಾಧಾನ ಹೊಗೆಯಾಡುತ್ತಿದೆ ಎನ್ನಲಾಗಿದೆ.