ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ,(ಜೂ.25) : ಕಾಂಗ್ರೆಸ್ ಪಕ್ಷ ಚುನಾವಣೆಯ ಸಮಯದಲ್ಲಿ ಮತದಾರರಿಗೆ ನೀಡಿರುವ ಐದು ಗ್ಯಾರೆಂಟಿಗಳನ್ನು ಈಡೇರಿಸಲಿದೆ ಈಗ ಅದಕ್ಕೆ ಬೇಕಾದ ತಯಾರಿಯನ್ನು ನಮ್ಮ ಪಕ್ಷ ಮಾಡುತ್ತಿದೆ ಈಗಾಗಲೇ ಒಂದು ಗ್ಯಾರೆಂಟಿಯನ್ನು ನೀಡಿದೆ. ಈ ಮಧ್ಯೆ ವಿರೋಧ ಪಕ್ಷದವರು ಇದರ ಬಗ್ಗೆ ಬೊಬ್ಬೆ ಹೊಡೆಯವುದರ ಮೂಲಕ ಮತದಾರರಲ್ಲಿ ಗೊಂದಲವನ್ನು ಉಂಟು ಮಾಡುತ್ತಿದ್ದಾರೆ ಎಂದು ಚಳ್ಳಕೆರೆ ಶಾಸಕ ರಘುಮೂರ್ತಿ ತಿಳಿಸಿದರು.
ನಗರದ ಹೋಟೇಲ್ ದುರ್ಗದ ಸಿರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅನ್ನಭಾಗ್ಯ ಗ್ಯಾರೆಂಟಿಯಲ್ಲಿ ಹಿಂದಿನ ಸರ್ಕಾರ ನಾವು ನೀಡುತ್ತಿದ್ದ 7 ಕೆಜಿಗೆ ಬದಲಾಗಿ 5 ಕೆಜಿಯನ್ನು ನೀಡುತ್ತಿದ್ದರು. ಈಗ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದ್ದು, 5 ಕೆಜಿಗೆ ನಮ್ಮ 5 ಕೆಜಿ ಸೇರಿಸಿ 10 ಕೆಜಿ ಅಕ್ಕಿಯನ್ನು ನೀಡಲಾಗುವುದು ಎಂದು ಹೇಳಲಾಗುತ್ತಿದೆ.ಆದರೆ ವಿರೋಧ ಪಕ್ಷದವರು ಇದರ ಬಗ್ಗೆಯೂ ಸಹಾ ಮತದಾರರಲ್ಲಿ ಗೊಂದಲ ಮೂಡಿಸಿ ನಮ್ಮದ್ದು 5 ಕೆ.ಜಿ. ನಿಮ್ಮದ್ದು 10 ಕೆ.ಜಿ.ಒಟ್ಟು 15 ಕೆ.ಜಿ.ಅಕ್ಕಿಯನ್ನು ಮತದಾರರಿಗೆ ನೀಡುವಂತೆ ಒತ್ತಾಯ ಮಾಡುವುದು ಸರಿಯಲ್ಲ ಎಂದು ವಿರೋಧ ಪಕ್ಷದವರಿಗೆ ಟಾಂಗ್ ನೀಡಿದರು.
ರಾಜ್ಯದಲ್ಲಿ ನಮ್ಮ ಸರ್ಕಾರ ಆಧಿಕಾರಕ್ಕೆ ಸ್ಚಲ್ಪ ದಿನವಾಗಿದೆ ನಾವು ಮತದಾರರಿಗೆ ನೀಡಿದ ಗ್ಯಾರೆಂಟಿಗಳನ್ನು ಈಡೇರಿಸಲು ಅದಕ್ಕೆ ಬೇಕಾದ ಸಿದ್ದತೆಯನ್ನು ಮಾಡಿಕೊಳ್ಳಲಾಗುತ್ತಿದೆ. ಅಷ್ಟರೊಳಗೆ ವಿರೋಧ ಪಕ್ಷದವರು ಬೊಬ್ಬೆಯನ್ನು ಹೊಡೆಯುತ್ತಿದ್ದಾರೆ. ಸ್ವಲ್ಪ ದಿನ ಸಮಯವನ್ನು ನೀಡಬೇಕು ನಾವು ಈಡೇರಿಸದಿದ್ದರೆ ವಿರೋಧ ಪಕ್ಷದವರು ಹೋರಾಟವನ್ನು ಮಾಡಬಹುದು ಆದು ಬಿಟ್ಟಿ ಈಗಲೇ ಹೋರಾಟವನ್ನು ಮಾಡುತ್ತಿರುವುದು ಇದು ದ್ವೇಷದ ರಾಜಕಾರಣವಾಗುತ್ತಿದೆ ಎಂದು ರಘುಮೂರ್ತಿ ತಿಳಿಸಿದರು.
ನಮ್ಮ ಜಿಲ್ಲೆಗೆ ಹಲವಾರು ವರ್ಷ ಬೇರೆಯವರು ಉಸ್ತುವಾರಿ ಮಂತ್ರಿಗಳಾಗುತ್ತಿದ್ದರು. ಆದರೆ ಈ ಬಾರಿ ನಮ್ಮ ಜಿಲ್ಲೆಯವರೇ ಉಸ್ತುವಾರಿ ಮಂತ್ರಿಗಳಾಗಿದ್ದಾರೆ ಇದರಿಂದ ಮುಂದಿನ ದಿನಮಾನದಲ್ಲಿ ಜಿಲ್ಲೆ ಪ್ರಗತಿಯನ್ನು ಕಾಣುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಅಪ್ಪರ್ ಭದ್ರಾ ಯೋಜನೆ ನಿರೀಕ್ಷೆಯಂತೆ ಅಭಿವೃದ್ದಿಯನ್ನು ಕಂಡಿಲ್ಲ. ಅಲ್ಲಿ ಇನ್ನು ಸಮಸ್ಯೆಗಳು ಇವೆ ಅವುಗಳನ್ನು ನಿವಾರಿಸಿದ ನಂತರ ನಾಲ್ಕು ಜಿಲ್ಲೆಗಳಿಗೆ ನೀರು ಬರಲಿದೆ. ಇದರ ಬಗ್ಗೆ ಉಸ್ತುವಾರಿ ಸಚಿವರು ಭೇಟಿ ನೀಡಿ ಪರೀಶೀಲನೆಯನ್ನು ನಡೆಸಿದ್ದಾರೆ. ಮುಂದಿನ ದಿನಮಾನದಲ್ಲಿ ಕಾಮಗಾರಿ ವೇಗವಾಗಲಿದೆ ಎಂದರು.
ಅಪ್ಪರ್ ಭದ್ರಾ ಯೋಜನೆಗೆ ಕೇಂದ್ರದಿಂದ ಹಣ ಬಿಡುಗಡೆಯಾಗಿಲ್ಲ, ಜನರ ಒತ್ತಾಸೆಯಂತೆ ಸರ್ಕಾರ ಕೆಲಸವನ್ನು ಮಾಡಲಿದೆ. ಚಳ್ಳಕೆರೆ ಕ್ಷೇತ್ರಕ್ಕೆ ಮೂರನೇ ಭಾರಿ ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಮತದಾರರಿಗೆ ಅಭಿನಂದನೆಯನ್ನು ಸಲ್ಲಿಸಿ, ನನಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಯಾವುದೇ ರೀತಿಯ ಅಸಮಾಧಾನ ಇಲ್ಲ. ಪಕ್ಷದ ಹೈಕಮಾಂಡ್ ನಿರ್ಧಾರದಂತೆ ನಡೆಯಲಿದೆ. ಮುಂದಿನ ದಿನಮಾನದಲ್ಲಿ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇದೆ. ಇಲ್ಲಿ ಜಾತಿ ಆಧಾರದ ಮೇಲೆ ಸಚಿವ ಸ್ಥಾನ ಹಂಚಿಕೆ ಮಾಡುವುದರಿಂದ ಎಲ್ಲರಿಗೂ ಸಹಾ ನೀಡಬೇಕಿದೆ ಇದರಿಂದ ಈಗ ನನ್ನ ಕೈ ತಪ್ಪಿರಬಹುದೆಂದು ರಘುಮೂರ್ತಿ ತಿಳಿಸಿದರು.
ಇಂಗಳದಾಳ ಗಣಿಯನ್ನು ಪುನಶ್ಚೇತನ ಮಾಡವುದಕ್ಕೆ ಬೇಕಾದ ಕಾರ್ಯವನ್ನು ಸಂಬಂಧಪಟ್ಟ ಸಚಿವರೊಂದಿಗೆ ಮಾತನಾಡಿ ಅದರ ಕಾರ್ಯಾರಂಭಕ್ಕೆ ಕ್ರಮ ಕೈಗ್ಗೊಳ್ಳಲಾಗುವುದು.
ನಮ್ಮ ಜಿಲ್ಲೆಯಲ್ಲಿ ಜುಲೈ 15ರವರೆಗೂ ಮಳೆ ಬರಲಿದೆ ಅಲ್ಲದೆ ಈ ಬಾರಿ ವಾಡಿಕೆ ಮಳೆಗಿಂತ ಶೇ.10 ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಅಲ್ಲದೆ ನಮ್ಮಲ್ಲಿ ಬಿತ್ತನೆಯೂ ಸಹಾ ತಡವಾಗಿ ಆಗಲಿದೆ ಎಂದರು.
ಗೋಷ್ಟಿಯಲ್ಲಿ ಜಿ.ಪಂ.ಮಾಜಿ ಅಧ್ಯಕ್ಷ ರವಿಕುಮಾರ್ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬುರೆಡ್ಡಿ ಉಪಸ್ಥಿತರಿದ್ದರು.