ಬೆಂಗಳೂರು: ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆಯ ಫಲಿತಾಂಶದಲ್ಲಿ ಕಾಂಗ್ರೆಸ್ ಒಂದು ಕಡೆ ಗೆದ್ದರೆ ಬಿಜೆಪಿ ಮತ್ತೊಂದು ಕಡೆ ಗೆದ್ದಿದೆ. ಆದ್ರೆ ಬಿಜೆಪಿ ಹಾನಗಲ್ ನಲ್ಲಿ ಸೋತಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದ್ದು, ನಾಯಕತ್ವದ ಪ್ರಶ್ನೆ ಎದುರಾಗಿದೆ. ಯಾಕಂದ್ರೆ ಇದು ಸಿಎಂ ಬಸವರಾಜ್ ಬೊಮ್ಮಾಯಿ ಅವರ ತವರು ಜಿಲ್ಲೆ. ಈ ಜಿಲ್ಲೆಯಲ್ಲೇ ಬಿಜೆಪಿ ಸೋತಿದ್ದು, ಮುಜುಗರಕ್ಕೊಳಗಾಗಿದೆ. ಈ ಬಗ್ಗೆ ಈಗಾಗಲೇ ಭಾರೀ ಚರ್ಚೆಯೂ ನಡೆದಿದೆ. ಈ ಮಧ್ಯೆ ವಸತಿ ಸಚಿವ ವಿ ಸೋಮಣ್ಣ ಹಾಗೂ ಶಾಸಕ ಬಸನಗೌಡ ಯತ್ನಾಳ್ ಪಿಸು ಪಿಸು ಮಾತಾಡಿದ್ದು, ನಾವಿಬ್ಬರೇ ಸಾಕಿತ್ತು ಈ ಕ್ಷೇತ್ರ ಗೆಲ್ಲಿಸೋಕೆ ಎಂದು ಮಾತಾಡಿದ್ದಾರೆ.
ವಿಡಿಯೋವೊಂದು ವೈರಲ್ ಆಗಿದ್ದು, ಹಾನಗಲ್ ಕ್ಷೇತ್ರದ ಜವಬ್ದಾರಿಯನ್ನ ನಮಗೆ ಕೊಟ್ಟಿದ್ದರೆ ಸಾಕಿತ್ತು. ನಾವಿಬ್ಬರೇ ಸಾಕಿತ್ತು ಹಾನಗಲ್ ಕ್ಷೇತ್ರ ಗೆಲ್ಲಿಸೋಕೆ ಎಂದಿದ್ದಾರೆ. ನಿನಗೆ ಎಷ್ಟು ಶಕ್ತಿ ಇದೆ ಹೇಳು. 135 ಸೀಟು ತರ್ತೀ ಇ ಅಂತ ಹೇಳು. ನಾವಿಬ್ಬರೇ ಸಾಕಿತ್ತು. ಯಾರಿಗೆ ಹೇಳೋದು ಹೋಗಿ ಎಂದು ಸೋಮಣ್ಣ ಹೇಳಿದ್ರೆ ಶಾಸಕ ಯತ್ನಾಳ್ ಹಾನಗಲ್ ನಿಮಗೆ ಹಾಕಿದ್ದರೆ ಸಾಕಿತ್ತು ಎಂದಿದ್ದಾರೆ.
ಯಾರಿಗೆ ಹೇಳೋಣಾ ನಮ್ಮ ಪ್ರಾಬ್ಲಮ್ಮು ಅಂತ ಸೋಮಣ್ಣ ಅವರು ಯತ್ನಾಳ್ ಬಳಿ ತಮ್ಮ ನೋವನ್ನ ಹೇಳಿಕೊಂಡಿದ್ದಾರೆ.