ಸಿದ್ದರಾಮಯ್ಯ ವಿರುದ್ಧ ಸಚಿವ ಸುನಿಲ್ ಕುಮಾರ್ ವಾಗ್ದಾಳಿ

suddionenews
2 Min Read

ಬೆಂಗಳೂರು: ಇತ್ತೀಚಿನ ದಿನದಲ್ಲಿ ವಿಪಕ್ಷ ನಾಯಕ ತಮ್ಮ ಘನತೆ, ಗೌರವ ಬಿಟ್ಟು ಅಸಂಭದ್ದವಾಗಿ ಮಾತನಾಡೋದು ಅಭ್ಯಾಸ ಮಾಡಿಕೊಂಡಿದ್ದಾರೆ ಎಂದು ಸಚಿವ ಸುನೀಲ್ ಕುಮಾರ್ ಹೇಳಿದರು.

ಈ ವೇಳೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಯಾವುದೇ ಮಾತು ಎಲ್ಲೆ ಮೀರಬಾರದು. ಇತ್ತೀಚಿನ ಭಾಷಣ ಗೌರವ ನೀಡುತ್ತಿಲ್ಲ. ವಿನಾಕಾರಣ RSS ಮದ್ಯ ಎಳೆದು ತರುತ್ತಿದೆ, ಪ್ರಧಾನಿಯವರನ್ನ ಎಳೆದು ತರುತ್ತಿದ್ದಾರೆ. ಅವರು ಅಸಹಾಯಕರಾಗಿದ್ದು, ಆಗ ಈ ರೀತಿ ಹೇಳಿಕೆ ಬರುತ್ತದೆ. ಒಂದು ಚೌಕಟ್ಟಿನಲ್ಲಿ ವಿರೋಧ ಮಾಡಬೇಕು. ಅದು ವಿಪಕ್ಷದ ಕೆಲಸ ಕೂಡ ಹೌದು. ಹಾಗಂತ ವಿನಾಕಾರಣ RSS ಎಳೆದು ತರೋದು ಸರಿಯಲ್ಲ,ನಾವು ಕೂಡ ಅದರಲ್ಲೇ ಬೆಳೆದು ಬಂದಿದ್ದು ಎಂದರು. ನಿಮಗೆ ಜ್ಞಾನದ ಕೊರತೆ, ಮಾಹಿತಿ ಕೊರತೆ ಇದೆ.

ನಿಮಗೆ ಸಲಹೆ ಕೊಡುವವರ ಕೊರತೆ ಇದೆ.ಇನ್ನೊಬ್ಬರಿಂದ ಸಲಹೆ ಪಡೆದು, ಉತ್ತಮ ಜ್ಞಾನ ಪಡೆಯಿರಿ ಅಂತ ಸಲಹೆ ನೀಡಿದರು. ಇನ್ನೂ ಮೋದಿಯವರ ಬಗ್ಗೆ ಟೀಕೆ ಮಾಡಿದ್ರೆ, ಅವರ ಗೌರವ ಹೆಚ್ಚಾಗಲಿದೆ.ಇನ್ನಾದ್ರೂ ಮುಂದಿನ ದಿನಗಳಲ್ಲಿ ಎಚ್ಚರಿಕೆ ಮಾತನಾಡೋದು ನಿಮ್ಮಹಿರಿತನಕ್ಕೆ ಒಳಿತು.
ನಾವು ನಿಮ್ಮ ಸಮಕಾಲೀನರಲ್ಲ. ಇನ್ನೊಬ್ಬರನ್ನ ನೋಡಿ ಕಲಿಯೋಣ ಅನ್ನೋದು ನನ್ನ ಉದ್ದೇಶ. ನಿಮ್ಮನ್ನ ನೋಡಿ ಕಲಿಯೋ ವಿಚಾರ ಕಡಿಮೆಯಾಗ್ತಿದೆ. ಇನ್ನೊಬ್ಬರಿಗೆ ಮಾದರಿಯಾಗುವಂತೆ ವಿಪಕ್ಷ ನಾಯಕರಾಗಿ. ಕೇಸರಿ ಬಗ್ಗೆ ನಿಮಗೆ ಯಾಕೆ ವಿರೋಧ ಗೊತ್ತಿಲ್ಲ ಕೇಸರಿ ತ್ಯಾಗದ ಸಂಕೇತ. ಕೇಸರಿ ಕಂಡ್ರೆ ಯಾಕೆ‌ ವಿಚಲಿತರಾಗ್ತೀರಾ ಗೊತ್ತಿಲ್ಲ ಎಂದು ಹೇಳಿದರು.

ನಮ್ಮ ಪರಂಪರೆಯನ್ನ ಮರೆಯಬಾರದು.ವಿಜಯ ದಶಮಿಯ ದಿನ ಆಯುಧ ಪೂಜೆ ಮಾಡ್ತಾರೆ.ಬಿಜೆಪಿ ಸರ್ಕಾರ ಬಂದ ನಂತ್ರ ಬಂದಿದ್ದಲ್ಲ. ಎಲ್ರೂ ಹಬ್ಬ ಮಾಡ್ತಾರೆ, ಪೊಲೀಸರು ಒಂದೊಂದು ಸ್ಟೇಷನ್‌ನಲ್ಲಿ ಒಂದೊಂದು ರೀತಿಯಲ್ಲಿ ಉಡುಪು ಧರಿಸಿದರು. ಕೇಸರಿ ಒಂದು ಪಕ್ಷದ್ದು ಅಂತ ಯಾಕೆ ಮೀಸಲಿಡ್ತೀರಾ. ಕೇಸರಿ ಕಂಡ್ರೆ ಯಾಕೆ ವಿಚಲಿತರಾಗ್ತೀರಾ ಎಂದು ಪ್ರಶ್ನಿಸಿದರು.

ನಾಳೆ ಕುಂಕುಮ ಇಟ್ರೂ ವಿರೋಧ ಮಾಡ್ತೀರಾ.
ಕೇಸರಿ ಶಾಲನ್ನ ಯಾರೇ ಹಾಕಿದ್ರೂ ಸಮರ್ಥನೆ ಮಾಡಿಕೊಳ್ತೀವಿ. ಕಾಂಗ್ರೆಸ್ ಸರ್ಕಾರ ಬಂದಾಗ ಹಸಿರು ಶಾಲು ಹಾಕಿದ್ರೆ ಏನು ಮಾಡ್ತೀರಾ ಅನ್ನೋ ಪ್ರಶ್ನೆಗೆ
ಅದನ್ನ ಹಾಕಿದ ಮೇಲೆ ನೋಡೋಣ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *