ನೇತ್ರದಾನ ಬಗ್ಗೆ ಅರಿವು ಮೂಡಿಸಲು ಸಚಿವ ಸುಧಾಕರ್ ಸೂಚನೆ

suddionenews
1 Min Read

ಬೆಂಗಳೂರು: ನಮ್ಮ ಸಾವಿನ ನಂತರ ನಮ್ಮ ಕಣ್ಣುಗಳಿಂದ ಇನ್ನೊಬ್ಬರಿಗೆ ದೃಷ್ಟಿ ಬರುತ್ತದೆ ಅಂದರೆ ಅದಕ್ಕಿಂತ ಸಾಕ್ಷಾತ್ಕಾರ ಇನ್ನೊಂದಿಲ್ಲ ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಬೆಂಗಳೂರಿನ ಇಂದಿರಾನಗರದಲ್ಲಿ ಡಾಕ್ಟರ್. ಅಗರ್ ವಾಲ್ಸ್ ಕಣ್ಣಿನ ಆಸ್ಪತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, ಅಂಧತ್ವ ಬಹಳ ನೋವಿನ ಸಂಗತಿ. ಯಾರೇ ಇರಲಿ, ಭಗವಂತ ಸೃಷ್ಟಿ ಮಾಡಿರುವ ಪ್ರಕೃತಿಯನ್ನು ನೋಡಲು ಸಾಧ್ಯವಾಗುವುದು ನಮ್ಮ ಕಣ್ಣುಗಳಿಂದ. ಆದರೆ ಕಣ್ಣೇ ಇಲ್ಲದಿದ್ದರೆ ಈ ಸುಂದರ ಪ್ರಕೃತಿಯನ್ನು ಸವಿಯಲು ಅಸಾಧ್ಯ. ವಿಶ್ವದಲ್ಲಿ 4 ಕೋಟಿಗೂ ಹೆಚ್ಚು ಜನರಿಗೆ ಅಂಧತ್ವ ಇದೆ. ಭಾರತದಲ್ಲಿ ಪ್ರತಿವರ್ಷ 1 ಲಕ್ಷ ನೇತ್ರದಾನಿಗಳ ಅವಶ್ಯಕತೆ ಇದೆ. ಆದರೆ ನಮಗೆ ಸಿಗುತ್ತಿರುವ ದಾನಿಗಳ ಪ್ರಮಾಣ ಕೇವಲ 5% ಮಾತ್ರ. ಕಣ್ಣಿನ ದಾನಿಗಳ ಕೊರತೆ ನಮ್ಮನ್ನು ಕಾಡುತ್ತಿದೆ. ದೇಶದಲ್ಲಿ 10.8 ಲಕ್ಷ ಮಕ್ಕಳು ಅಂಧತ್ವಕ್ಕೆ ಒಳಗಾಗಿದ್ದಾರೆ ಎಂದರು.

ಕೋವಿಡ್ ಸಮಯದಲ್ಲಿ ನೇತ್ರದಾನ ಪ್ರಮಾಣ ಮತ್ತಷ್ಟು ಕಡಿಮೆಯಾಗಿದೆ. ಕಣ್ಣಿನ ದಾನ ಮಹಾದಾನವಾದರೂ ಈ ಬಗ್ಗೆ ಕೆಲ ಮೂಢನಂಬಿಕೆಗಳು ಇವೆ. ಶವದಿಂದ ಕಣ್ಣನ್ನು ತೆಗೆದರೆ ಮುಖ ವಿಕಾರವಾಗುತ್ತದೆ ಎಂಬ ತಪ್ಪು ತಿಳಿವಳಿಕೆ ಇದೆ. ಆದರೆ ಇದು ಸುಳ್ಳು. ಕನ್ನಡದ ವರನಟ ಡಾ.ರಾಜ್ ಕುಮಾರ್, ಇತ್ತೀಚೆಗೆ ಅಕಾಲಿಕ ಮರಣ ಹೊಂದಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಂತಹ ಮಹಾನ್ ವ್ಯಕ್ತಿಗಳು ಕಣ್ಣು ದಾನ ಮಾಡಿದ್ದರು. ಲಕ್ಷಾಂತರ ಜನರು ಅವರ ಪಾರ್ಥಿವ ಶರೀರ ನೋಡಿದ್ದಾರೆ. ಆದರೆ ಯಾವುದೇ ವಿಕಾರ ಕಂಡಿಲ್ಲ. ಹೀಗಾಗಿ ನೇತ್ರದಾನ ಎಲ್ಲರೂ ಮಾಡಬೇಕು ಎಂದು ಮನವಿ ಮಾಡಿದರು.

ಆರೋಗ್ಯ ಇರಲಿ ಅಥವಾ ನೇತ್ರದಾನದ ವಿಚಾರವೇ ಆಗಿರಲಿ ಕರ್ನಾಟಕ ದೇಶದ ಎಲ್ಲಾ ರಾಜ್ಯಗಳಿಗೂ ಮಾದರಿಯಾಗಿದೆ. ಹೆಲ್ತ್ ಕೇರ್ ಉದ್ಯಮಿಗಳಿಂದ ಇದೆಲ್ಲಾ ಸಾಧ್ಯವಾಗಿದೆ. ಪ್ರತಿಯೊಬ್ಬರಿಗೂ ಕೈ ಗೆಟಕುವ ರೀತಿಯಲ್ಲಿ ಹೇಲ್ತ್ ಕೇರ್ ಇಂಡಸ್ಟ್ರಿ ಕರ್ನಾಟಕದಲ್ಲಿ ಬೆಳೆದಿದೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *