ರಾಹುಲ್ ಗಾಂಧಿಗೆ ಬಳ್ಳಾರಿ ಜಿಲ್ಲೆಗೆ ಸ್ವಾಗತಕೋರಿದ ಸಚಿವ ಶ್ರೀರಾಮುಲು..!

suddionenews
3 Min Read

 

 

ಬಳ್ಳಾರಿ: ಇಂದು ಕಾಂಗ್ರೆಸ್ ಪಕ್ಷದಿಂದ ಬಳ್ಳಾರಿಯಲ್ಲಿ ದೊಡ್ಡ ಸಮಾವೇಶ ನಡೆಯುತ್ತಿದೆ. ಈ ವೇಳೆ ರಾಹುಲ್ ಗಾಂಧಿಗೆ ಸಚಿವ ಶ್ರೀರಾಮುಲು ಸ್ವಾಗತಕೋರಿದ್ದಾರೆ.

1999 ರ ಲೋಕಸಭಾ ಚುನಾವಣೆ ವೇಳೆ ಅಮೇಥಿಯಲ್ಲಿ ಸೋಲಬಹುದು ಎಂಬ ಭೀತಿಯಿಂದ ಬಳ್ಳಾರಿಗೆ ಓಡೋಡಿ ಬಂದು ರಾಜಕೀಯ ಪುನರ್ ಜನ್ಮ ಪಡೆದಿದ್ದಕ್ಕೆ ಪ್ರತಿಯಾಗಿ, ಜಿಲ್ಲೆಯ ಜನತೆಗೆ ಚೂರಿ ಹಾಕಿ ಹೋಗಿದ್ದ ಕಾಂಗ್ರೆಸ್ ಪಕ್ಷದ ಭಾರತ್ ತೋಡೋ ಯಾತ್ರೆಗೆ ಹಾರ್ದಿಕ ಸುಸ್ವಾಗತ

ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಿಂದ ಗೆದ್ದು, ಸೌಜನ್ಯಕ್ಕಾದರೂ ಜನತೆಗೆ ಧನ್ಯವಾದಗಳನ್ನು ತಿಳಿಸದೇ, ದೆಹಲಿಯಿಂದಲೇ ರಾಜೀನಾಮೆ ಪತ್ರ ಬಿಸಾಕಿದ ಖಾಯಂ ಎಐಸಿಸಿ AICC ಅಧ್ಯಕ್ಷರ ಮುದ್ದಿನ ಪುತ್ರ ಪಾದಯಾತ್ರೆಯ ಮೂಲಕ ಬಳ್ಳಾರಿಗೆ ಆಗಮಿಸುತ್ತಿರುವುದಕ್ಕೆ ನಿಮಗಿದೋ ಭವ್ಯ ಸ್ವಾಗತ.

ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಏದುಸಿರು‌ ಬಿಡುತ್ತಾ ಕೈಲಾಗದಿದ್ದರೂ ಎದ್ದೋ ಬಿದ್ದನಂತೆ ಓಡುತ್ತಾ, ರಸ್ತೆಯಲ್ಲಿ ಬಸ್ಕಿ ಹೊಡೆಯುತ್ತಾ, ಹಾವು- ಮುಂಗುಸಿಯಂತೆ ಇದ್ದರೂ, ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಕ್ಯಾಮರಾ ಮುಂದೆ ಪೋಜು ನೀಡುವ ಕೆಪಿಸಿಸಿ ಮಹಾನ್ ನಾಯಕರೆಲ್ಲರಿಗೂ ಸುಸ್ವಾಗತ.

ನಾವು ನಡೆಸುತ್ತಿರುವುದು ಭಾರತ್ ಜೋಡೋ ಯಾತ್ರೆಯಲ್ಲ. ಬದಲಿಗೆ ನಮ್ಮ ತಾಯಿಯನ್ನು ಗೆಲ್ಲಿಸಿದ್ದಕ್ಕೆ ಜನಾದೇಶವನ್ನು ದಿಕ್ಕರಿಸಿ ರಾಜೀನಾಮೆ ನೀಡಿದ್ದಕ್ಕೆ, ಅಧಿಕಾರದಲ್ಲಿ ಇದ್ದಾಗ ಏನು ಮಾಡದೆ ಮತದಾರರ ಕ್ಷಮೆ ಕೇಳುವ ಪ್ರಾಯಶ್ಚಿತ ಯಾತ್ರೆ ಮಾಡುತ್ತಿದ್ದೇವೆ ಎಂದು ಹೇಳಲು ಸಂಕೋಚ ಏಕೆ.?

1999ರ ಲೋಕಸಭಾ ಚುನಾವಣೆ ನಂತರ ಬಳ್ಳಾರಿ ಜಿಲ್ಲೆಗೆ 3300 ಕೋಟಿ ರೂ.ಗಳ ಸುಳ್ಳು ಪ್ಯಾಕೇಜ್ ಅನ್ನು ನಿಮ್ಮ ಮಾತೃಶ್ರೀಯವರಾದ ಶ್ರೀಮತಿ ಸೋನಿಯಾ ಗಾಂಧಿಯವರು ಘೋಷಣೆ ಮಾಡಿದ್ದರು ಎಂಬುದನ್ನು ಮಾನ್ಯ ರಾಹುಲ್ ಗಾಂಧಿ ಅವರಿಗೆ ನೆನಪಿಲು ಇಚ್ಛೇಸುತ್ತೇನೆ.

ಬಳ್ಳಾರಿ ಜನತೆ ಸೋನಿಯಾಗಾಂಧಿ ಅವರು ಘೋಷಿಸಿದ ಪ್ಯಾಕೇಜ್ ಬಂದೇ ಬರುತ್ತದೆ ಎಂದು ಜನ ಕಣ್ ಕಣ್ ಬಿಟ್ಟಿದ್ದೇ ಆಯಿತು, ಆದರೆ ಅದು ಎಲ್ಲಿಗೆ ಬಂತು? ಯಾವಾಗ ಬಂತು? ಯಾರಿಗೆ ಹೋಯಿತು? ಯಾರ ಜೇಬಿಗೆ ಸೇರಿತು? ಕಾಂಗ್ರೆಸ್‍ನ ನಾಯಕರ ಬಳಿ ಉತ್ತರ ಇದೆಯೇ?.

ಸೋನಿಯಾಗಾಂಧಿ ಅವರು ಸ್ಪರ್ಧೆ ಮಾಡಿದಾಗ ಅವರ ಮೇಲಿನ ಪ್ರೀತಿ, ಅಭಿಮಾನದಿಂದ ಆಶೀರ್ವಾದ ಮಾಡಿದರು, ಗೆದ್ದ ಮೇಲೆ ಇಲ್ಲಿಗೆ ಎಷ್ಟು ಸಲ ಬಂದರು? ಕನಿಷ್ಟ ಪಕ್ಷ ಗೆಲ್ಲಿಸಿದ್ದಕ್ಕೆ ಮತದಾರರಿಗೆ ಸೌಜನ್ಯಕ್ಕಾದರೂ ಕೃತಜ್ಞತೆ ಹೇಳಿದ್ದಾರಾ? ಇದನ್ನು ಜನತೆಯ ಮುಂದಿಡಲು ಸಿದ್ದರಿದ್ದೀರಾ?.

ಬಳ್ಳಾರಿ ಜಿಲ್ಲೆಗೆ ಸೋನಿಯಾಗಾಂಧಿ ಆಗಲಿ ಅಥವಾ ಕಾಂಗ್ರೆಸ್‍ನ ಕೊಡುಗೆ ಏನು ಎಂಬುದನ್ನು ಅವರ ಪುತ್ರ ಶ್ರೀ @RahulGandhi ಅವರೇ ಹೇಳಬೇಕು. ದೇಶ ಬೆಸೆಯುತ್ತೇನೆ ಎಂದು ಹೊರಟಿರುವ ಅವರಿಗೆ ಜಿಲ್ಲೆಯ ಜನ ಪಾಠ ಕಲಿಸಲಿದ್ದಾರೆ ಎಂಬುದನ್ನು ಮರೆಯಬೇಡಿ.

ಕಡೆ ಪಕ್ಷ ಐದು ವರ್ಷಗಳ ಕಾಲ ಅಧಿಕಾರದಲ್ಲಿ ನಿಮ್ಮ ಕಾಂಗ್ರೆಸ್ ಪಕ್ಷ ಬಳ್ಳಾರಿಗೆ ಜಿಲ್ಲೆಗೆ ಕೊಡುಗೆ ಏನು ?. @RahulGandhi ಅವರೇ ನಿಮ್ಮ ಭಾಷಣದಲ್ಲಿ ಹೇಳುತ್ತೀರಾ.? ನಿಮ್ಮಬೆಸುಗೆಯ ಯಾತ್ರೆಗೆ ಜನ ಬಗ್ಗೋದಿಲ್ಲ. ಅವರನ್ನು TAKEN FOR GRANTED ಮಾಡಿಕೊಂಡಿದ್ದೀರಾ?.

ಏಕಂದರೆ, ಬಳ್ಳಾರಿ ಜಿಲ್ಲೆಗೆ ಸೋನಿಯಾ ಗಾಂಧಿ ಅವರು ಒಮ್ಮೆ ಲೋಕಸಭಾ ಸದಸ್ಯರಾಗಿ ಕೊಟ್ಟ ಕೊಡುಗೆ ಶೂನ್ಯ. ಅದನ್ನು ರಾಹುಲ್‌ ಗಾಂಧಿ ಮರೆತರೂ, ಜನ ಮರೆತಿಲ್ಲ. ಯಾತ್ರೆಯ ಮೂಲಕ ಮರೆ ಮಾಚಲು ಸಾಧ್ಯವಿಲ್ಲ.

ಬಳ್ಳಾರಿ ಜಿಲ್ಲೆ ಅಭಿವೃದ್ದಿಯಲ್ಲಿ ಬಿಜೆಪಿ ಸರ್ಕಾರದ ಕೊಡುಗೆಯೇ ದೊಡ್ಡದು. ಅದು ಜಿಲ್ಲೆಯ ಜನರಿಗೂ ಗೊತ್ತಿದೆ. ಹಾಗಾಗಿ ರಾಹುಲ್‌ ಗಾಂಧಿ ಭಾರತ್‌ ಜೋಡೋ ಯಾತ್ರೆ ಮೂಲಕ ಬಂದು ಏನೇ ಮಾಡಿದರೂ ನಂಬುವುದಿಲ್ಲ. ಅವರಿಗೆ ವಾಸ್ತವದ ಮೇಲೆ ನಂಬಿಕೆಯೇ ಹೊರತು, ಬರೀ ನಾಟಕ ಮಾಡುವವರ ಮೇಲಲ್ಲ.

ಬಳ್ಳಾರಿ ಪಾದಯಾತ್ರೆ ನಡೆಸಿ ಮುಖ್ಯಮಂತ್ರಿ ಆದವರೂ ಕೂಡ ಜಿಲ್ಲೆಯ ಅಭಿವೃದ್ಧಿಗೆ ನಯಾಪೈಸೆ ಹಣ ಕೊಡದೆ, ಈಗ ಯಾವ ಮುಖ ಇಟ್ಟುಕೊಂಡು ಜನರ ಮುಂದೆ ಭಾಷಣ ಮಾಡುತ್ತೀರಿ.? ನಮ್ಮ ಜನ ಸ್ವಾಭಿಮಾನಿಗಳು.
ಎಲ್ಲದಕ್ಕೂ ಹೌದು ಹುಲಿಯಾ , ಎನ್ನುವವರಲ್ಲ ಅಥವಾ ಟಗರು ಟಗರು ಎಂದು ಜೈಕಾರ ಹಾಕುವವರೂ ಅಲ್ಲ.

ಕಾಂಗ್ರೆಸ್ ಎಂದರೆ ಸುಳ್ಳು ಭರವಸೆ ನೀಡುವ ರಾಜಕೀಯ ಪಕ್ಷ ಎಂಬುದು ಇತಿಹಾಸದಿಂದಲೇ ಋಜುವಾತಾಗಿದೆ.
ಲೋಕಸಭಾ ಉಪ ಚುನಾವಣೆಯಲ್ಲಿ ಗೆದ್ದಾಗಲೂ ಎಂದಿನಂತೆ ಮತ್ತೆ ಮತದಾರರಿಗೆ ಅದೇ ಮೋಸ, ವಂಚನೆ ಜನತೆಯ ಮೂಗಿಗೆ ತುಪ್ಪ ಸವರಿದ್ದು. ಈಗ ಭಾರತ್ ತೋಡೋ.

ಕಾಲ ಬದಲಾಗಿದೆ. ಸುಳ್ಳಿನ ಮೇಲೆ ರಾಜಕೀಯ ಮಾಡುವುದು, ಸಂತೆ ಭಾಷಣ ಮಾಡುವುದರಿಂದ ಮೋಡಿ ಮಾಡಲು ಸಾಧ್ಯವಿಲ್ಲ. ಬರಲಿರುವ ದಿನಗಳಲ್ಲಿ ಜಿಲ್ಲೆಯಿಂದ ಕಾಂಗ್ರೆಸ್ ಪಕ್ಷದ ಬೇರುಗಳನ್ನು ಬುಡ ಸಮೇತ ಕಿತ್ತು ಹಾಕಲಿದ್ದಾರೆ ಎಂಬ ಸತ್ಯವನ್ನು ಕಾಂಗ್ರೆಸ್ ನಾಯಕರು ಮರೆಯಬಾರದು ಎಂದು ಸಾಲು ಸಾಲು ಟ್ವೀಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *