ನಾಯಕನಹಟ್ಟಿ ದೊಡ್ಡಕೆರೆಗೆ ಸಚಿವ ಶ್ರೀರಾಮುಲು ಬಾಗಿನ ಅರ್ಪಣೆ  

1 Min Read

ನಾಯಕನಹಟ್ಟಿ, ದೊಡ್ಡಕೆರೆ, ಸಚಿವ ಶ್ರೀರಾಮುಲು, ಬಾಗಿನ ಅರ್ಪಣೆ, ಸುದ್ದಿಒನ್, ಚಿತ್ರದುರ್ಗ, featured, suddione, chitradurga, Minister Sriramulu, visits,  Nayakanahatty, Doddakere,

ಚಿತ್ರದುರ್ಗ,(ಸೆಪ್ಟಂಬರ್.30) :
ಅವಧೂತ ಶ್ರೀ ತಿಪ್ಪೇರುದ್ರಸ್ವಾಮಿ ನಿರ್ಮಿಸಿದ ನಾಯಕನಹಟ್ಟಿಯ ಐತಿಹಾಸಿಕ ದೊಡ್ಡಕೆರೆ,  ಹತ್ತು ವರ್ಷದ ನಂತರ ಭರ್ತಿಯಾಗಿದೆ. ರಾಜ್ಯದಲ್ಲೇ ಕಡಿಮೆ ಮಳೆ ಬೀಳುವ ನಾಯಕನಹಟ್ಟಿ ಸುತ್ತಮುತ್ತಲಿನ ಪ್ರದೇಶಗಳಿಗೆ ಕೆರೆಗಳೇ ಜೀವಾಳ. ವರುಣ ಕೃಪೆಯಿಂದ ಈ ಬಾರಿ ನಾಯಕನಹಟ್ಟಿ ಸುತ್ತಮುತ್ತಲಿನ ಕೆರೆಕಟ್ಟೆಗಳು ತುಂಬಿ ತುಳುಕುತ್ತಿವೆ. ಸಾರಿಗೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಶುಕ್ರವಾರ ದೊಡ್ಡಕೆರೆಗೆ ಬಾಗಿನ ಅರ್ಪಸಿದರು.

ನಾಯಕನಹಟ್ಟಿ ಪಟ್ಟಣದಲ್ಲಿ ಉತ್ಸಾಹ ಮನೆ ಮಾಡಿತ್ತು. ಅವಧೂತ ಶ್ರೀ ತಿಪ್ಪೇರುದ್ರಸ್ವಾಮಿಗಳು ಒಳ ಮಠಕ್ಕೆ ಆಗಮಿಸಿದ ಸಚಿವ ಬಿ.ಶ್ರೀರಾಮುಲು ದೇವರಿಗೆ ನಮಿಸಿ, ಬಾಗಿನ ಅರ್ಪಿಸುವ ತೊಟ್ಟಿಲನ್ನು ಭಕ್ತರೊಂದಿಗೆ ಕೈಗೂಡಿಸಿ ಸ್ವತಃ ಹೊತ್ತುಂದು ಸಿಂಗರಿಸಿದ್ದ ಎತ್ತಿನ ಬಂಡಿಯಲ್ಲಿ ಇರಿಸಿದರು. ಪೂರ್ಣ ಕುಂಬ ಹೊತ್ತ ನೂರಾರು ಮಹಿಳೆಯರು, ಡೊಳ್ಳು ಸಮೇತ ಪಟ್ಟಣದಲ್ಲಿ ಮೆರವಣಿಯ ಸಮೇತ ದೊಡ್ಡ ಕೆರೆ ತೆರಳಿಸಿದರು. ಸಚಿವ ಶ್ರೀರಾಮುಲು ಅಭಿಮಾನಿಗಳು ರಸ್ತೆಯುದ್ಧಕ್ಕೂ ಜೈಕಾರ ಕೂಗಿದರು. ಹೂವಿನ ಮಳೆಗರೆದರು.

ದೊಡ್ಡಕೆರೆಯ ಹಿನ್ನೀರಿನ ಪ್ರದೇಶಲ್ಲಿ ಸಾಂಗೋಪವಾಗಿ ಪೂಜೆ ನೆರೆವೇರಿಸಿದ ಬಳಿಕ ಸಚಿವ ಶ್ರೀರಾಮುಲು ಅವರು ಬಾಗಿನ ತೊಟ್ಟಿಲನ್ನು ಕೆರೆ ನೀರಿಗೆ ಅರ್ಪಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಚಳ್ಳಕೆರೆ ತಹಶೀಲ್ದಾರ್ ಎನ್.ರಘುಮೂರ್ತಿ, ಮುಖಂಡರಾದ ರಾಮರೆಡ್ಡಿ, ಪಾಟೀಲ್ ಜಿ.ಎಂ.ತಿಪ್ಪೇಸ್ವಾಮಿ, ಪಿ.ಬಿ.ತಿಪ್ಪೇಸ್ವಾಮಿ, ಪ್ರಕಾಶ್ ರೆಡ್ಡಿ, ಎನ್.ಮಹಾಂತೇಶ್,ರಾಮದಾಸ್, ಪಾಪೇಶ್‍ನಾಯಕ ಸೇರಿದಂತೆ ಮತ್ತಿತರರು ಉಪಸ್ಥತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *